ಕನ್ನಡಪ್ರಭ ವಾರ್ತೆ ಉಡುಪಿ
ವಿಜ್ಞಾಪನ ಪತ್ರವನ್ನು ಬಿಡುಗಡೆ ಮಾಡಿ ಮಾತನಾಡಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ವ್ರತಗಳಲ್ಲಿ ಅಯ್ಯಪ್ಪ ಸ್ವಾಮಿ ವ್ರತ ಅತ್ಯಂತ ಕಠಿಣವಾದುದು. ಅದನ್ನು ಕಟ್ಟುನಿಟ್ಟಾಗಿ ಮಾಡಿದವರು, ನಿರಂತರ ಭಜನೆ ಮಾಡಿ ದೇವರೊಲುಮೆಗೆ ಪಾತ್ರರಾದವರು, ಅಪರಾಧ ಕೃತ್ಯಗಳನ್ನು ಎಸಗುವುದು ಬಹಳ ವಿರಳ. ಅಂತಹ ಭಕ್ತರ ಈ ಭಜನಾ ಮಂದಿರ ನಿರ್ಮಾಣಕ್ಕೆ ಭಕ್ತರಿಂದ ಆರ್ಥಿಕ ನೆರವು ಹರಿದು ಬರಲಿ ಎಂದು ಆಶಿಸಿದರು.
ಶಾಸಕ ಯಶ್ಪಾಲ್ ಎ. ಸುವರ್ಣ ಮಾತನಾಡಿ, ಕರಾವಳಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ದೈವ, ದೇವತಾರಾಧನೆ, ಭೂತಾರಾಧನೆ, ಧಾರ್ಮಿಕ ಆಚರಣೆಗಳಿಂದ ಇಲ್ಲಿನವರು ಬಹು ಎತ್ತರಕ್ಕೆ ಬೆಳೆಯಲು ಶಕ್ತಿ ತುಂಬಿದೆ. ಹಿಂದುತ್ವದ ಒಗ್ಗಟ್ಟಿಗೆ ಅಯ್ಯಪ್ಪ ಮಂದಿರ ಸಾಕ್ಷಿಯಾಗಲಿ ಎಂದರು.ಶ್ಯಾಮಿಲಿ ಸಮೂಹ ಸಂಸ್ಥೆಗಳ ಪ್ರವರ್ತಕ ಡಾ.ಜಿ. ಶಂಕರ್ ಶಿಲಾನ್ಯಾಸ ನೆರವೇರಿಸಿ, ಕ್ಲಪ್ತ ಸಮಯದಲ್ಲಿ ಮಂದಿರ ನಿರ್ಮಾಣವಾಗಿ ಪೂಜೆ, ಪುನಸ್ಕಾರ ನಡೆಯಲಿ. ನಿರ್ಮಾಣ ಕಾರ್ಯದಲ್ಲಿ ಸಹಕರಿಸುವುದಾಗಿ ತಿಳಿಸಿದರು.ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ನಿ.ಬೀ. ವಿಜಯ ಬಲ್ಲಾಳ್ ಆಶೀರ್ವಚನ ನೀಡಿದರು.
ಅಂಬಲಪಾಡಿ ಗ್ರಾ.ಪಂ. ಅಧ್ಯಕ್ಷೆ ಸುಜಾತಾ ಯೋಗೀಶ್, ಲಕ್ಕಿಡಿಪ್ ಡ್ರಾ ಫಲಿತಾಂಶ ನೆರವೇರಿಸಿದರು. ಅಧ್ಯಕ್ಷ ಗೌರೀಶ್ ಕೋಟ್ಯಾನ್ ಸ್ವಾಗತಿಸಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ನಿರೂಪಿಸಿ, ವಂದಿಸಿದರು.