ನಿವೇಶನ ರಹಿತರಿಗೆ ಮನೆ ನಿವೇಶನಕ್ಕೆ ಆಗ್ರಹಿಸಿ ಮೂಲ್ಕಿಯಲ್ಲಿ ಪ್ರತಿಭಟನೆ

KannadaprabhaNewsNetwork |  
Published : Sep 26, 2026, 01:45 AM IST
ನಿವೇಶನ ರಹಿತರಿಗೆ ಮನೆ ನಿವೇಶನಕ್ಕೆ ಆಗ್ರಹಿಸಿ ಮೂಲ್ಕಿಯಲ್ಲಿ  ಪ್ರತಿಭಟನೆ | Kannada Prabha

ಸಾರಾಂಶ

ಮೂಲ್ಕಿ ನಗರ ವ್ಯಾಪ್ತಿಯ ನಿವೇಶನ ರಹಿತ ಬಡಕುಟುಂಬಗಳಿಗೆ ಶೀಘ್ರ ಮನೆ ನಿವೇಶನ ವಿತರಣೆಗೆ ಒತ್ತಾಯಿಸಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಮೂಲ್ಕಿ ಹಾಗೂ ಪಡುಬಿದ್ರಿ ವಲಯ ಸಮಿತಿಯ ನೇತ್ರತ್ವದಲ್ಲಿ ಮೂಲ್ಕಿ ತಾಲೂಕು ಪ್ರಜಾಸೌಧ ಮುಂಭಾಗದಲ್ಲಿ ನಿವೇಶನ ರಹಿತರ ಜೊತೆಗೂಡಿ ಪ್ರತಿಭಟನೆ ನಡೆಯಿತು.

ಮೂಲ್ಕಿ: ಮೂಲ್ಕಿ ನಗರ ವ್ಯಾಪ್ತಿಯ ನಿವೇಶನ ರಹಿತ ಬಡಕುಟುಂಬಗಳಿಗೆ ಶೀಘ್ರ ಮನೆ ನಿವೇಶನ ವಿತರಣೆಗೆ ಒತ್ತಾಯಿಸಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಮೂಲ್ಕಿ ಹಾಗೂ ಪಡುಬಿದ್ರಿ ವಲಯ ಸಮಿತಿಯ ನೇತ್ರತ್ವದಲ್ಲಿ ಮೂಲ್ಕಿ ತಾಲೂಕು ಪ್ರಜಾಸೌಧ ಮುಂಭಾಗದಲ್ಲಿ ನಿವೇಶನ ರಹಿತರ ಜೊತೆಗೂಡಿ ಪ್ರತಿಭಟನೆ ನಡೆಯಿತು.

ಮೂಲ್ಕಿ ನಗರ ವ್ಯಾಪ್ತಿಯಲ್ಲಿ ಸ್ವಂತ ಮನೆಯಿಲ್ಲದೆ ನೂರಾರು ಕುಟುಂಬಗಳು ಬಾಡಿಗೆ ಮನೆಯಲ್ಲಿ ಹಲವು ದಶಕಗಳಿಂದ ವಾಸಿಸುತ್ತಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಿವೇಶನ ರಹಿತರಿಗೆ ವಿತರಿಸಲು ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಸರ್ಕಾರಿ ನಿವೇಶನ ಲಭ್ಯವಿಲ್ಲದ ಸಂದರ್ಭ ಟಿಡಿಆರ್ ಮಾದರಿಯಲ್ಲಿ ಖಾಸಗಿ ಜಾಗ ಖರೀದಿಸಲು ಅವಕಾಶವಿದ್ದರೂ ಮೂಲ್ಕಿ ನಗರ ವ್ಯಾಪ್ತಿಯಲ್ಲಿ ಕಳೆದ 26 ವರ್ಷಗಳಿಂದ ಮನೆ ನಿವೇಶನ ವಿತರಿಸಿಲ್ಲವೆಂದು ಮಾಹಿತಿ ಹಕ್ಕು ಮೂಲಕ ತಿಳಿದು ಬಂದಿದೆ. ಸಂಘಟನೆ ಮೂಲಕ ನೀಡಿದ ಅರ್ಜಿಗಳನ್ನೂ ಪುರಸ್ಕರಿಸಿಲ್ಲ. ಕಳೆದ ಮೇ ತಿಂಗಳಲ್ಲಿ 17 ಮನೆ ನಿವೇಶನಕ್ಕಾಗಿ ಮೂಲ್ಕಿ ನ. ಪಂ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದ್ದು, ಅವರು ಮನವಿಯನ್ನು ತಹಸೀಲ್ದಾರ್‌ ಕಚೇರಿಗೆ ರವಾನಿಸಿದ್ದು, ತಹಸೀಲ್ದಾರ್ ಕಚೇರಿಯಲ್ಲಿ ಮನವಿಗೆ ಯಾವುದೇ ಪುರಸ್ಕಾರ ನೀಡಿರದಿರುವುದರಿಂದ ಸರಣಿ ಪ್ರತಿಭಟನೆಗೆ ನಿರ್ಧರಿಸಿದ್ದು, ಶೀಘ್ರ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ದಲಿತ ಹಕ್ಕುಗಳ ಸಮಿತಿಯ ಉಡುಪಿ ಜಿಲ್ಲಾಧ್ಯಕ್ಷ ಸಂಜೀವ ಬಳ್ಳೂರು ತಿಳಿಸಿದರು.

ಮೂಲ್ಕಿ ತಾಲೂಕು ತಹಸೀಲ್ದಾರ್ ಪೃಥ್ವಿ ಸಾನಿಕಂ ಅವರಿಗೆ ಮನವಿ ಸಲ್ಲಿಸಿ, ಶೀಘ್ರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಲಾಯಿತು. ಮನವಿಗೆ ಸ್ಪಂದಿಸಿದ ಪೃಥ್ವಿ ಸಾನಿಕಂ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ರಾಜ್ಯ ಪ್ರಾಂತ ರೈತ ಸಂಘದ ದ.ಕ. ಜಿಲ್ಲಾಧ್ಯಕ್ಷ ಅಧ್ಯಕ್ಷ ಕೆ.ಯಾದವ ಶೆಟ್ಟಿ, ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಜಿಲ್ಲಾಧ್ಯಕ್ಷ ಕರಿಯ, ರಾಜ್ಯ ಸಮಿತಿಯ ಸದಸ್ಯರಾದ ಕೃಷ್ಣ ಇನ್ನಾ ಮತ್ತು ಶೇಖರ್ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಲಮಟ್ಟಿ-ಯಾದಗಿರಿ ರೈಲು ಮಾರ್ಗ: ಗರಿಗೆದರಿದ ನಿರೀಕ್ಷೆ
ಹೆಣ್ಮಕ್ಕಳು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಿ: ಪ್ರೊ. ಎಸ್. ಇಂದುಮತಿ