ಸದಸ್ಯರು-ಮುಖ್ಯಾಧಿಕಾರಿಗಳ ಮಧ್ಯೆ ಆರೋಪ ಪ್ರತ್ಯಾರೋಪ ಕನ್ನಡಪ್ರಭ ವಾರ್ತೆ ಹೊಸದುರ್ಗ
ಪುರಸಭೆ ಸದಸ್ಯರಾದ ಶಂಕರಪ್ಪ, ರಾಮಚಂದ್ರಪ್ಪ ಮಾತನಾಡಿ, ಶ್ರೀಮಂತರಿಗೆ ಒಂದೇ ದಿನದಲ್ಲಿ ಸಿಗುವ ಈ-ಸ್ವತ್ತು, ಬಡವರಿಗೆ ಯಾಕೆ ಸಿಗುವುದಿಲ್ಲ. ಅನಧಿಕೃತ ಬಡಾವಣೆಗಳಿಗೆ ನಿಯಮಬಾಹಿರವಾಗಿ ಈ-ಸ್ವತ್ತು ನೀಡಿದ್ದೀರಾ ಎಂದು ಆರೋಪಿಸಿದರು.
ಮುಖ್ಯಾಧಿಕಾರಿ ತಿಮ್ಮರಾಜು ಪ್ರತಿಕ್ರಿಯಿಸಿ, ನಿಯಮಾನುಸಾರ ಈ-ಸ್ವತ್ತು ನೀಡಲಾಗುತ್ತಿದೆ. ದಾಖಲೆಗಳು ಇಲ್ಲದೇ ಆಧಾರ ರಹಿತ ಆರೋಪ ಮಾಡಬೇಡಿ. ನಿಮಗೇ ಬೇಕಾದವರಿಗೆ ಸಾಕಷ್ಟು ಈ-ಸ್ವತ್ತು ಕೊಡಿಸಿದ್ದೀರಾ, ಆಗ ನಿಮಗೆ ಕಾನೂನು, ನಿಯಮಗಳು ನೆನಪಿಗೆ ಬರಲಿಲ್ಲವೇ ಎಂದು ತಿರುಗೇಟು ನೀಡಿದರು.ಪುರಸಭೆ ಸದಸ್ಯ ಶ್ರೀನಿವಾಸ್ ಆರೋಗ್ಯ ಶಾಖೆಗೆ ಸಂಬಂಧಪಟ್ಟಂತೆ ಬಂದಿರುವ ಆದಾಯ ಹಾಗೂ ಖರ್ಚು-ವೆಚ್ಚದ ಲೆಕ್ಕ ಪತ್ರಗಳ ಪೂರ್ಣ ಮಾಹಿತಿಯನ್ನು ನೀಡುವಂತೆ ಪಟ್ಟು ಹಿಡಿದರು. ಸಭೆಯ ಅಜೆಂಡಾದಲ್ಲಿ ಈ ಮೊದಲೇ ವಿಷಯ ಸೇರ್ಪಡೆ ಮಾಡಿದ್ದರೆ ಅಗತ್ಯ ದಾಖಲಾತಿಗಳನ್ನು ಒದಗಿಸಬಹುದಾಗಿತ್ತು. ತಕ್ಷಣಕ್ಕೆ ಮಾಹಿತಿ ನೀಡಲು ಕಷ್ಟವಾಗುತ್ತದೆ. ಮುಂದಿನ ಸಭೆಯಲ್ಲಿ ಅಗತ್ಯ ದಾಖಲಾತಿಗಳನ್ನು ನೀಡುವುದಾಗಿ ಮುಖ್ಯಾಧಿಕಾರಿ ತಿಮ್ಮರಾಜು ಸಮಜಾಯಿಷಿ ನೀಡಿದರು.
ಬಳಸಿಕೊಳ್ಳುವುದು ಎಷ್ಟು ಸರಿ. ನಮ್ಮ ಗೌರವ ಹಾಳು ಮಾಡುವ ಕೆಲಸ ಮಾಡಿದ್ದಾರೆ. ಈ ಸಂಬಂಧ ನಮ್ಮ ಬಳಿ ದಾಖಲೆ ಇವೆ. ಅಕ್ರಮವಾಗಿ ಜಾಗ ಒತ್ತುವರಿ ಮಾಡಿ ನಿರ್ಮಾಣ ಮಾಡುತ್ತಿರುವ ಕಟ್ಟಡವನ್ನು ನೆಲಸಮ ಮಾಡುವಂತೆ ಪುರಸಭೆ ಸದಸ್ಯ ಮಂಜುನಾಥ್ ಮುಖ್ಯಾಧಿಕಾರಿ ಹಾಗೂ ಅಧ್ಯಕ್ಷರಲ್ಲಿ ಆಗ್ರಹಿಸಿದರು.
ಅಧ್ಯಕ್ಷರ ಮಾತಿಗೆ ಸದಸ್ಯೆ ಡಾ.ಸ್ವಾತಿ ಪ್ರದೀಪ್, ಜ್ಯೋತಿ ಕೆಂಚಪ್ಪ ಸಹ ಧ್ವನಿಗೂಡಿಸಿದರು. ಪುರಸಭೆ ಜಾಗವನ್ನು ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ ಮಾಡುತ್ತಿರುವ ವಾಣಿಜ್ಯ ಮಳಿಗೆಯನ್ನು ನೆಲಸಮ ಮಾಡಲು ಕ್ರಮವಹಿಸಲಾಗುವುದು ಎಂದು ಮುಖ್ಯಾಧಿಕಾರಿ
ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ರಾಜೇಶ್ವರಿ, ಉಪಾಧ್ಯಕ್ಷೆ ಗೀತಾ ಹಾಗೂ ಸದಸ್ಯರು ಹಾಜರಿದ್ದರು.