ಕನ್ನಡಪ್ರಭ ವಾರ್ತೆ ಕೋಲಾರತಾಲೂಕಿನ ಅಬ್ಬಣಿ ಅರಣ್ಯ ಒತ್ತುವರಿಗೆ ಸಂಬಂಧಿಸಿದಂತೆ ರೈತರ ಅಹವಾಲು ಕೇಳದೆ ಕಚೇರಿಯಿಂದ ಕಾಲ್ಕಿತ್ತ ಎಡಿಎಲ್‌ಅರ್ ಹನುಮಂತರಾಯಪ್ಪ ಅವರನ್ನು ಕೆಲಕಾಲ ರೈತರು ಹಾಗೂ ಸಂಯುಕ್ತ ಹೋರಾಟ ಸಮಿತಿ ಮುಖಂಡರು ತರಾಟೆ ತೆಗೆದುಕೊಂಡ ಘಟನೆ ನಗರದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಶುಕ್ರವಾರ ನಡೆಯಿತು. ಅಧಿಕಾರಿಯ ಬಳಿ ರೈತರು ಸಮಸ್ಯೆ, ಅರಣ್ಯ ಒತ್ತುವರಿಗೆ ಸಂಬಂಧಿಸಿದಂತೆ ಹಾಗೂ ಹೈಕೋರ್ಟ್ ಆದೇಶದಂತೆ ಅರಣ್ಯ ಇಲಾಖೆ, ಕಂದಾಯ ಇಲಾಖೆ, ಮತ್ತು ರೈತರ ಒಳಗೊಂಡಂತೆ ಜಂಟಿ ಸರ್ವೆಗೆ ಸಂಬಂಧಿಸಿದಂತೆ ಮಾತನಾಡುವಾಗ ರೈತರನ್ನು ಕಡೆಗಣಿಸಿ ಹೊರಟಿದ್ದ ಹನುಮಂತರಾಯಪ್ಪರನ್ನು ಅಡ್ಡಗಟ್ಟಿದ ರೈತ ಮುಖಂಡರು ಎಚ್ಚರಿಕೆ ನೀಡಿದರು.ಊಟಕ್ಕೆ ಹೊರಟ ಎಡಿಎಲ್‌ಆರ್
ದಾಖಲೆ ನೀಡುವ ಭರವಸೆ
ರೈತರ ಆಕ್ರೋಶ ಅರಿತ ಎಡಿಎಲ್‌ಆರ್ ಕೆಲವೇ ಸಮಯ ಬಿಟ್ಟು ವಾಪಸ್ ಬಂದು ರೈತರನ್ನು ಸಮಾಧಾನಪಡಿಸಿ ದಾಖಲೆಗಳನ್ನು ಎರಡು ದಿನದಲ್ಲಿ ಕೊಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಹೋರಾಟ ಸಮಿತಿ ಮುಖಂಡರಾದ ಅಬ್ಬಣಿ ಶಿವಪ್ಪ , ಟಿ.ಎಂ.ವೆಂಕಟೇಶ್, ಪಾತಕೊಟ ನವೀನ್ ಕುಮಾರ್, ಕೋಟಿಗಾನಹಳ್ಳಿ ಗಣೇಶ್ ಗೌಡ, ಹರಟಿ ಪ್ರಕಾಶ್, ವೆಂಕಟರಾಮಪ್ಪ, ವೆಂಕಟೇಶಗೌಡ ಇದ್ದರು.