ಇಂದಾವರ ಬಳಿ ನಗರಸಭೆ ಘನ ತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕದಲ್ಲಿ ಗೊಬ್ಬರ ತಯಾರಿಕೆ
ನಗರ ಪ್ರದೇಶದಲ್ಲಿ ಸಂಗ್ರಹಿಸುವ ದೈನಂದಿನ ಕಸದ ತ್ಯಾಜ್ಯಗಳನ್ನು ವಿಂಗಡಿಸಿ, ಸಾವಯವ ಗೊಬ್ಬರವನ್ನಾಗಿ ಸಿದ್ಧಪಡಿಸಿ ರಿಯಾಯಿತಿ ದರದಲ್ಲಿ ಕೃಷಿಕರಿಗೆ ಮಾರಾಟ ಮಾಡಲಾಗುತ್ತಿದೆ ಎಂದು ನಗರಸಭಾ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಹೇಳಿದರು.
ತಾಲೂಕಿನ ಇಂದಾವರ ಗ್ರಾಮದ ಬಳಿ ಇರುವ ನಗರಸಭೆ ಘನ ತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕದಲ್ಲಿ ಸಿದ್ಧಪಡಿಸಿರುವ ಸಾವಯವ ಗೊಬ್ಬರವನ್ನು ರಿಯಾಯಿತಿ ದರದಲ್ಲಿ ಶುಕ್ರವಾರ ವಿತರಿಸಿ ಮಾತನಾಡಿದ ಅವರು, ಈ ಗೊಬ್ಬರವನ್ನು ರೈತರಿಗೆ, ಬೆಳೆಗಾರರಿಗೆ ಕೆಜಿಗೆ ₹ 3 ದರದಲ್ಲಿ ನೀಡಲಾಗುವುದು ಎಂದರು.ಟನ್‌ಗಟ್ಟಲೇ ಸಂಗ್ರಹಿಸುವ ಕಸವನ್ನು ವಿಲೇವಾರಿ ಘಟಕದಲ್ಲಿ ಪ್ಲಾಸ್ಟಿಕ್‌ನಿಂದ ಬೇರ್ಪಡಿಸಿ ಟ್ರಾಮರ್ ಯಂತ್ರದ ಸಹಾಯ ದಿಂದ ಮೂರು ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಅಂತಿಮ ಹಂತದಲ್ಲಿ ಸಾವಯವ ಗೊಬ್ಬರ ತಯಾರಿಕೆಯಾಗಲಿದೆ. ಪ್ರಸ್ತುತ 350 ಟನ್‌ಗಳಷ್ಟು ಗೊಬ್ಬರ ಹರಾಜು ಮೂಲಕ ಮಾರಾಟ ಮಾಡಲಾಗಿದೆ ಎಂದು ಹೇಳಿದರು.ಪ್ರಸ್ತುತ ರಸ ಗೊಬ್ಬರವು ಮಾರುಕಟ್ಟೆಯಲ್ಲಿ ದುಬಾರಿಯಾಗಿದೆ. ಆದರೆ, ನಗರಸಭೆ ₹3 ಗಳಿಗೆ ಸೀಮಿತಗೊಳಿಸಿದೆ. ಗೊಬ್ಬರದ ಬೇಡಿಕೆ ಹೆಚ್ಚಾದಂತೆ ನಿಗಧಿತ ದರದಲ್ಲಿ ಕೊಡಲಾಗುವುದು ಎಂದರು.
28 ಕೆಸಿಕೆಎಂ 1ಚಿಕ್ಕಮಗಳೂರು ತಾಲೂಕಿನ ಇಂದಾವರ ಗ್ರಾಮದ ಬಳಿ ಇರುವ ನಗರಸಭೆ ಘನ ತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕದಲ್ಲಿ ಸಿದ್ಧಪಡಿಸಿರುವ ಸಾವಯವ ಗೊಬ್ಬರದ ರಿಯಾಯಿತಿ ಮಾರಾಟಕ್ಕೆ ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಶುಕ್ರವಾರ ಚಾಲನೆ ನೀಡಿದರು. ಪೌರಾಯುಕ್ತ ಬಿ.ಸಿ. ಬಸವರಾಜ್ ಇದ್ದರು.