ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸಿಹಿ ತಿನ್ನಿಸುವ ಮೂಲಕ ಶುಭಕೋರಿದ ಅವರು, ಈ ಬಾರಿ ದೊಡ್ಡಮಗ್ಗೆ ಕಾಲೇಜು ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಶೇ. 100 ಫಲಿತಾಂಶ ಪಡೆದಿದೆ.ಅಲ್ಲದೆ ವಿಜ್ಞಾನ ವಿಭಾಗದಲ್ಲಿಯೂ ಕೂಡ ಶೇಕಡ 97ರಷ್ಟು ಫಲಿತಾಂಶವನ್ನು ಪಡೆದು ದಾಖಲೆ ನಿರ್ಮಿಸಿದೆ. ಇದೇ ನಿಟ್ಟಿನಲ್ಲಿ ತಾಲೂಕಿನ ಎಲ್ಲಾ ಪದವಿ ಪೂರ್ವ ಕಾಲೇಜುಗಳ ಫಲಿತಾಂಶ ಕೂಡ ತೃಪ್ತಿದಾಯಕವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಅರಕಲಗೂಡು
ತಾಲೂಕಿನ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಅತ್ಯುತ್ತಮವಾಗಿ ದ್ವಿತೀಯ ಪಿಯುಸಿ ಫಲಿತಾಂಶ ದೊರೆತಿದ್ದು, ಇದಕ್ಕಾಗಿ ಎಲ್ಲಾ ಕಾಲೇಜುಗಳ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳ ಪೋಷಕರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಶಾಸಕ ಎ.ಮಂಜು ತಿಳಿಸಿದರು.ತಾಲೂಕಿನ ದೊಡ್ಡಮಗ್ಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸಿಹಿ ತಿನ್ನಿಸುವ ಮೂಲಕ ಶುಭಕೋರಿದ ಅವರು, ಈ ಬಾರಿ ದೊಡ್ಡಮಗ್ಗೆ ಕಾಲೇಜು ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಶೇ. 100 ಫಲಿತಾಂಶ ಪಡೆದಿದೆ.ಅಲ್ಲದೆ ವಿಜ್ಞಾನ ವಿಭಾಗದಲ್ಲಿಯೂ ಕೂಡ ಶೇಕಡ 97ರಷ್ಟು ಫಲಿತಾಂಶವನ್ನು ಪಡೆದು ದಾಖಲೆ ನಿರ್ಮಿಸಿದೆ. ಇದೇ ನಿಟ್ಟಿನಲ್ಲಿ ತಾಲೂಕಿನ ಎಲ್ಲಾ ಪದವಿ ಪೂರ್ವ ಕಾಲೇಜುಗಳ ಫಲಿತಾಂಶ ಕೂಡ ತೃಪ್ತಿದಾಯಕವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.ಯಾವುದೇ ಖಾಸಗಿ ಕಾಲೇಜುಗಳಿಗೆ ಕಡಿಮೆ ಇಲ್ಲದಂತೆ ಸರಕಾರಿ ಕಾಲೇಜುಗಳಲ್ಲಿ ಉತ್ತಮ ಅಂಕ ಬರಲು ಶ್ರಮಿಸಿದ ಎಲ್ಲಾ ಉಪನ್ಯಾಸಕರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನಮ್ಮ ಸರಕಾರಿ ಕಾಲೇಜುಗಳಲ್ಲಿ ನುರಿತ ಉಪನ್ಯಾಸಕರ ತಂಡವಿದೆ. ಅಲ್ಲದೆ ಎಲ್ಲಾ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ. ಅಧಿಕ ಹಣವನ್ನು ತೆತ್ತು ಖಾಸಗಿ ಕಾಲೇಜುಗಳಿಗೆ ತಮ್ಮ ಮಕ್ಕಳನ್ನು ದಾಖಲಿಸುವ ಬದಲು ಸರಕಾರಿ ಕಾಲೇಜುಗಳಿಗೆ ಸೇರಿಸುವ ನಿಟ್ಟಿನಲ್ಲಿ ಪೋಷಕರು ಮುಂದಾಗಬೇಕಿದೆ. ನಮ್ಮ ಸರಕಾರಿ ಕಾಲೇಜುಗಳಲ್ಲಿ ಓದಿರುವ ಮಕ್ಕಳು ವೈಯಕ್ತಿಕವಾಗಿ ಸಾಧನೆ ಮಾಡಿದ್ದಾರೆ. ಖಾಸಗಿ ಕಾಲೇಜುಗಳಲ್ಲಿ ಅಗತ್ಯ ಸೌಕರ್ಯಗಳು ಇಲ್ಲ. ಕೇವಲ ವ್ಯಾಮೋಹ ಹಿನ್ನೆಲೆ ಮಕ್ಕಳು ಸರಕಾರಿ ಶಾಲಾ ಕಾಲೇಜುಗಳಿಗೆ ಪ್ರವೇಶ ಪಡೆಯದೇ ಪೋಷಕರಿಗೆ ಅಧಿಕ ಒತ್ತಡ ತಂದು ಖಾಸಗಿ ಕಾಲೇಜುಗಳಿಗೆ ಸೇರುತ್ತಾರೆ. ಅಲ್ಲಿಯೂ ಕೂಡ ಇದೇ ಶಿಕ್ಷಣ.ಇಲ್ಲಿಯೂ ಅದೇ ಶಿಕ್ಷಣ ಕ್ರಮಗಳು ಇವೆ. ಶಿಸ್ತುಬದ್ಧವಾಗಿ ಓದುವ ಮಕ್ಕಳು ಎಲ್ಲಿದ್ದರೂ ಕೂಡ ಉನ್ನತಿ ಸಾಧಿಸುತ್ತಾರೆ. ಅವರಿಗೆ ಸರಿಯಾದ ತಿಳಿವಳಿಕೆ ನೀಡುವ ಜವಬ್ದಾರಿ ಪೋಷಕರಲ್ಲಿ ಇರಬೇಕಿದೆ ಎಂದು ಹೇಳಿದರು.ಈಗಾಗಲೇ ಖಾಸಗಿ ಶಾಲೆ ಮತ್ತು ಕಾಲೇಜುಗಳ ಶಿಕ್ಷಕರು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿರುವ ಮಕ್ಕಳ ಮನೆಗಗಳಿಗೆ ತೆರಳಿ ಶಾಲಾ ಕಾಲೇಜುಗಳಿಗೆ ಸೇರಿಸುವಂತೆ ದುಂಬಾಲು ಬಿದ್ದಿದ್ದಾರೆ. ಇದೇ ನಿಟ್ಟಿನಲ್ಲಿ ಸರಕಾರಿ ಶಾಲಾ ಕಾಲೇಜುಗಳ ಶಿಕ್ಷಕರು ಕೂಡ ಗ್ರಾಮಗಳಿಗೆ ತೆರಳಿ ಸರಕಾರಿ ಶಾಲಾ ಕಾಲೇಜುಗಳಲ್ಲಿ ಸಿಗುವ ಸವಲತ್ತುಗಳ ಕುರಿತು ಪೋಷಕರು,ಮಕ್ಕಳಿಗೆ ತಿಳಿಹೇಳುವ ಕೆಲಸ ಕೂಡ ನಡೆಯಬೇಕಿದೆ. ಮಕ್ಕಳಿದ್ದರೇ ಮಾತ್ರ ಸರಕಾರಿ ಶಿಕ್ಷಕರು, ಉಪನ್ಯಾಸಕರು, ಶಿಕ್ಷಣ ಸಂಸ್ಥೆಗಳು ಉಳಿಯಲು ಸಾಧ್ಯ. ಇದನ್ನು ಮನಗಂಡು ನಡೆದುಕೊಳ್ಳಬೇಕಿದೆ ಎಂದು ಅವರು ಕಿವಿಮಾತು ಹೇಳಿದರು.ಮುಂಬರುವ ಎಸ್ಸೆಸ್ಸೆಲ್ಸಿ ಫಲಿತಾಂಶ ಆಶದಾಯಕವಾಗಿದ್ದು, ಆಯಾ ಸರಕಾರಿ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ತೇರ್ಗಡೆಯಾಗುವ ಮಕ್ಕಳನ್ನು ಆಯಾ ಸರಕಾರಿ ಕಾಲೇಜುಗಳಿಗೆ ಸೇರುವಂತೆ ಮನವರಿಕೆ ಮಾಡಬೇಕು. ಯಾವುದೇ ಆಸೆ ಆಮಿಷಗಳಿಗೆ ಒಳಗಾಗಿ ನಡೆದುಕೊಳ್ಳಬಾರದು ಎಂದು ಅವರು ಸೂಚನೆ ನೀಡಿದರು.ಕಾಲೇಜಿನ ಪ್ರಾಂಶುಪಾಲರಾದ ಫರ್ಜಾನಾ ಅಂಜು ಮಾತನಾಡಿ, ದ್ವಿತೀಯ ಪಿಯುಸಿಯಲ್ಲಿ ಶೇ. 96 ಫಲಿತಾಂಶ ಲಭಿಸಿದೆ. ಪರೀಕ್ಷೆಯಲ್ಲಿ ಕುಳಿತಿದ್ದ 81 ವಿದ್ಯಾರ್ಥಿಗಳಲ್ಲಿ 78 ಮಂದಿ ತೇರ್ಗಡೆಯಾಗಿದ್ದಾರೆ. 18 ಮಂದಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಜ್ಲಾನ ವಿಭಾಗದಲ್ಲಿ 28 ವಿದ್ಯಾರ್ಥಿಗಳ ಪೈಕಿ 25 ತೇರ್ಗಡೆಯಾಗಿದ್ದು, 7 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಮತ್ತು ವಾಣಿಜ್ಯ ವಿಭಾಗದಲ್ಲಿ ಶೇ 100 ಫಲಿತಾಂಶ ಬಂದಿದೆ. 14 ವಿಷಯಗಳಲ್ಲಿ 13 ವಿಷಯಗಳು ಶೇ 100 ಫಲಿತಾಂಶ ಬಂದಿದೆ. ಕಲಾ ವಿಭಾಗದಲ್ಲಿ ಎಸ್.ಎಲ್. ಧನಂಜಯ 538, ವಾಣಿಜ್ಯ ವಿಭಾಗದಲ್ಲಿ ಪವಿತ್ರಾ 549, ವಿಜ್ಲಾನ ವಿಭಾಗದಲ್ಲಿ ಆಶಾ 544 ಅಂಕ ಗಳಿಸಿದ್ದಾರೆ. ಶೇ. 100 ಫಲಿತಾಂಶ ಗಳಿಸಲು ಕಾರಣರಾದ ಉಪನ್ಯಾಸಕರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಪಟೇಲ್ ಮಂಜಣ್ಣ, ಲೋಕೇಶ್, ರಾಜಶೇಖರ್, ಉಪನ್ಯಾಸಕರು, ಮುಖಂಡರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.