17ನೇ ವರ್ಷದ ಬಾಲಕಿಯೊಬ್ಬಳು ಪ್ರೀತಿಸಿ ಮದುವೆಯಾಗಿ, ಮಗುವಿಗೆ ಜನ್ಮವಿತ್ತಿರುವ ಅಪರೂಪದ ಘಟನೆಯೊಂದು ಗುಂಡ್ಲುಪೇಟೆಯಲ್ಲಿ ನಡೆದಿದೆ. ಘಟನೆ ಸಂಬಂಧ ಬಾಲಕಿಯ ಪತಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತ ಕಾಲ್ಕಿತ್ತಿದ್ದಾನೆ.
- ಚಿತ್ರದುರ್ಗದ ಹೊಳಲ್ಕೆರೆ ಮೂಲದ ಬಾಲಕಿ
- ಕೋಟೆಕೆರೆ ಗ್ರಾಮದ ಯುವಕನಿಂದ ದೋಖಾ
- ಮಗುವಿನ ತಂದೆ ವಿರುದ್ಧ ಪೋಕ್ಸೋ ಕೇಸ್
- ವಿಷಯ ತಿಳಿಯುತ್ತಿದ್ದಂತೆ ಆರೋಪಿ ಪರಾರಿ
---
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
17ನೇ ವರ್ಷದ ಬಾಲಕಿಯೊಬ್ಬಳು ಪ್ರೀತಿಸಿ ಮದುವೆಯಾಗಿ, ಮಗುವಿಗೆ ಜನ್ಮವಿತ್ತಿರುವ ಅಪರೂಪದ ಘಟನೆಯೊಂದು ಗುಂಡ್ಲುಪೇಟೆಯಲ್ಲಿ ನಡೆದಿದೆ. ಘಟನೆ ಸಂಬಂಧ ಬಾಲಕಿಯ ಪತಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತ ಕಾಲ್ಕಿತ್ತಿದ್ದಾನೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಮೂಲದ ಬಾಲಕಿಯು ಗುಂಡ್ಲುಪೇಟೆ ತಾಲೂಕಿನ ಕೋಟೆಕೆರೆ ಗ್ರಾಮದ ನಿವಾಸಿಯನ್ನು ವರಿಸಿ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಮದುವೆಯಾಗಿದ್ದಳು. ಈಕೆ ಫೆ.25ರಂದು ಸಿಮ್ಸ್ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮವಿತ್ತಿದ್ದಾಳೆ.
ಘಟನೆ ಸಂಬಂಧ ಶಿಕ್ಷಣ ಸಂಯೋಜಕರು ನೀಡಿದ ದೂರಿನ ಮೇರೆಗೆ ಬಾಲಕಿಯ ಪತಿ ವಿರುದ್ಧ ಬೇಗೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ, ಬಾಲ್ಯ ವಿವಾಹ ಪ್ರಕರಣ ದಾಖಲಾಗಿದೆ.
ಬಾಲಕಿ ಪತಿ ಪರಾರಿ:
ತನ್ನ ವಿರುದ್ಧ ಪ್ರಕರಣ ದಾಖಲಾಗಿರುವ ವಿಷಯ ತಿಳಿಯುತ್ತಿದ್ದಂತೆ ಬಾಲಕಿಯ ಪತಿಯು ಗ್ರಾಮದಿಂದ ಕಾಲ್ಕಿತ್ತಿದ್ದಾನೆ. ಆತನ ಹುಡುಕಾಟಕ್ಕೆ ತೆರಳಿದ ಪೊಲೀಸರಿಗೆ ಆತ ಪರಾರಿಯಾಗಿರುವ ವಿಷಯ ಗೊತ್ತಾಗಿದೆ. ಈ ಸಂಬಂಧ ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಫೆ.೨೫ ರಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ೧೦೯೮ ಕ್ಕೆ ಬಾಲ್ಯ ವಿವಾಹ ಸಂಬಂಧ ದೂರು ಬಂದಿದೆ. ನಂತರ ಕೋಟೆಕೆರೆ ಗ್ರಾಪಂ ಪಿಡಿಒ ಮಂಜುನಾಥ್ ರಾವ್, ಮುಖ್ಯ ಶಿಕ್ಷಕಿ ಮಹದೇವಿ ಆರ್, ಕೋಟೆಕೆರೆ ೨ನೇ ಅಂಗನವಾಡಿ ಕೇಂದ್ರದ ಮಹದೇವಮ್ಮ ಎಂ, ಸಿಎಚ್‌ಒ ಸೋನಾ, ಆಶಾ ಕಾರ್ಯಕರ್ತೆ ದಾಕ್ಷಾಯಣಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ರುದ್ರವ್ವ, ಪೊಲೀಸ್ ಪೇದೆ ಸಚಿನ್ ಎಂ.ಎಸ್ ಗ್ರಾಮದಲ್ಲಿ ಮಹಜರು ನಡೆಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.