ಹದಿಹರೆಯದ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಅಗತ್ಯ : ಮಂಜುಳಾ

KannadaprabhaNewsNetwork |  
Published : Jul 27, 2025, 01:49 AM IST
ಚಿಕ್ಕಮಗಳೂರಿನ ಜೆವಿಎಸ್‌ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ನಿವೃತ್ತ ಪ್ರಾಚಾರ್ಯರಿಗೆ ಸನ್ಮಾನ ಸಮಾರಂಭವನ್ನು ಉಪ ನಿರ್ದೇಶಕಿ ಮಂಜುಳ ಅವರು ಉದ್ಘಾಟಿಸಿದರು. ತೇಜಸ್ವಿನಿ, ನಾಗರಾಜ್‌ರಾವ್‌ ಕಲ್ಕಟ್ಟೆ, ರವಿಕಾಂತ್‌ ಇದ್ದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ಪ್ರಾಚಾರ್ಯರು ಮತ್ತು ಉಪನ್ಯಾಸಕರು ಕಾಯ, ವಾಚ, ಮನಸ್ಸಿನಿಂದ ಸೇವೆ ಸಲ್ಲಿಸಬೇಕು. ವೃತ್ತಿ ಇರುವುದೇ ಮಕ್ಕಳ ಅಭಿವೃದ್ಧಿ, ಶ್ರೇಯಸ್ಸಿಗಾಗಿ ಅವುಗಳನ್ನು ಅರ್ಥಮಾಡಿಕೊಂಡು ಶ್ರಮವಹಿಸಿದರೆ ಮಕ್ಕಳಲ್ಲಿರುವ ಪ್ರತಿಭೆಗೆ ಸಹಕಾರಿ ಯಾಗಲಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಕೆ. ಮಂಜುಳ ಹೇಳಿದರು.

ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದಿಂದ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಚಾರ್ಯರಿಗೆ ಸನ್ಮಾನ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಪ್ರಾಚಾರ್ಯರು ಮತ್ತು ಉಪನ್ಯಾಸಕರು ಕಾಯ, ವಾಚ, ಮನಸ್ಸಿನಿಂದ ಸೇವೆ ಸಲ್ಲಿಸಬೇಕು. ವೃತ್ತಿ ಇರುವುದೇ ಮಕ್ಕಳ ಅಭಿವೃದ್ಧಿ, ಶ್ರೇಯಸ್ಸಿಗಾಗಿ ಅವುಗಳನ್ನು ಅರ್ಥಮಾಡಿಕೊಂಡು ಶ್ರಮವಹಿಸಿದರೆ ಮಕ್ಕಳಲ್ಲಿರುವ ಪ್ರತಿಭೆಗೆ ಸಹಕಾರಿ ಯಾಗಲಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಕೆ. ಮಂಜುಳ ಹೇಳಿದರು.

ನಗರದ ಜೆವಿಎಸ್‌ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದಿಂದ ನಡೆದ ಪ್ರತಿಭಾ ಪುರಸ್ಕಾರ ನಿವೃತ್ತ ಪ್ರಾಚಾರ್ಯರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಹದಿಹರೆಯದ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ, ಶಿಕ್ಷಣ ಕೊಡುವ ಜವಾಬ್ದಾರಿ ಕಾಲೇಜುಗಳಿಗಿದೆ. ವಿದ್ಯಾ ಪ್ರತಿಭೆ, ಕ್ರೀಡಾ, ಸಾಂಸ್ಕೃತಿಕ ಪ್ರತಿಭೆಗಳೂ ಸೇರಿದಂತೆ ಎಲ್ಲವೂ ಹೊರ ಬರಲು ಕಾರಣವಾಗಿ ಪ್ರತಿಭಾ ಶಕ್ತಿಯಾಗಿ ರೂಪುಗೊಳ್ಳುತ್ತದೆ. ಪ್ರೇರಣೆಯಾಗುತ್ತದೆ ಎಂದು ಹೇಳಿದರು.

ಕಳೆದ 2 ವರ್ಷದಲ್ಲಿ ದ್ವಿತೀಯ ಪಿಯುಸಿಯಲ್ಲಿ ವಾಣಿಜ್ಯ, ಕಲಾ, ವಿಜ್ಞಾನ ವಿಭಾಗದಲ್ಲಿ ಶಿಕ್ಷಣ ಪಡೆದು ಅತೀ ಹೆಚ್ಚು ಅಂಕ ಪಡೆದ ಜಿಲ್ಲಾ ಮಟ್ಟ, ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಆಹ್ವಾನಿಸಿ ಪ್ರೋತ್ಸಾಹ ಧನದೊಂದಿಗೆ ಗೌರವಿಸುವ ಕೆಲಸವನ್ನು ಪ್ರಾಚಾರ್ಯರ ಸಂಘ ಮಾಡುತ್ತಿರುವುದು ಅಭಿನಂದನೀಯ ಎಂದರು.ಕಳೆದ 35 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಾಚಾರ್ಯರನ್ನು ಕರೆದು ಜಿಲ್ಲಾ ಮಟ್ಟದಲ್ಲಿ ಗೌರವಿಸುತ್ತಿರುವುದು ಅವರಿಗೆ ತೃಪ್ತಿ ನೀಡಿದೆ ಎಂದು ಭಾವಿಸುತ್ತೇನೆ ಎಂದು ತಿಳಿಸಿದರು.ಶಿಕ್ಷಣ ಕ್ಷೇತ್ರ ಅತ್ಯಂತ ಪವಿತ್ರವಾಗಿದ್ದು, ಸಮಾಜದ ಒಳಿತಿಗೆ ಈ ನಮ್ಮ ಕ್ಷೇತ್ರ ಪ್ರಮುಖ ಪಾತ್ರ ವಹಿಸಬೇಕು. ಶಿಕ್ಷಕರು, ಉಪನ್ಯಾಸಕರು, ಪ್ರಾಚಾರ್ಯರು ಸನ್ನಡತೆಯಿಂದ ಸದ್ಗುಣ, ಸಹನೆಯಿಂದ ವರ್ತಿಸಿದರೆ ಸಮಾಜವೂ ಕಲಿಯುತ್ತದೆ ಎಂಬುದನ್ನು ನಂಬಿದ್ದೇನೆ ಎಂದು ಹೇಳಿದರು.ಸಂಘದ ಅಧ್ಯಕ್ಷೆ ತಸ್ನೀಮಾ ಫಾತೀಮಾ ಮಾತನಾಡಿ, ಸಂಘದಿಂದ ಹಲವಾರು ಶಿಕ್ಷಣಕ್ಕೆ ಪೂರಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿದ್ದು, ಕಾಲೇಜಿನಲ್ಲಿ ಪ್ರಾಂಶುಪಾಲರು ಮತ್ತು ಉಪನ್ಯಾಸಕರ ಜವಾಬ್ದಾರಿ ಕರ್ತವ್ಯದ ಜೊತೆಗೆ ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆಯೂ ಚಿಂತನೆ ಮಾಡುವುದು ಅಗತ್ಯ ಎಂದರು.ಸಂಘದ ಎಲ್ಲರ ಸಹಕಾರದೊಂದಿಗೆ ಬ್ಯಾಂಕಿನಲ್ಲಿ ಪ್ರತ್ಯೇಕ ಉಳಿತಾಯ ಖಾತೆ ತೆರೆದು ₹12 ಲಕ್ಷ ನಿಶ್ಚಿತ ಠೇವಣಿ ಇಡಲಾಗಿದ್ದು, ಈ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸದೆ ಸಂಘದ ನಿವೇಶನ ಖರೀದಿಗೆ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.ಕಾರ್ಯದರ್ಶಿ ತೇಜಸ್ವಿನಿ, ಖಜಾಂಚಿ ಎಚ್.ಎಂ.ನಾಗರಾಜರಾವ್, ರಾಜ್ಯ ಪ್ರಾಂಶುಪಾಲ ಸಂಘದ ಜಿಲ್ಲಾ ಪ್ರತಿನಿಧಿ ರವಿಕಾಂತ್, ಉಪಾಧ್ಯಕ್ಷರಾದ ವಿರೂಪಾಕ್ಷ, ಸೋಮಶೇಖರ್, ಮಿನಿ ಥಾಮಸ್, ಸಹ ಕಾರ್ಯದರ್ಶಿ ನಾಗಮಣಿ, ಶಿವಕುಮಾರ್, ಜಯಪ್ಪ, ಪುಟ್ಟಾನಾಯ್ಕ್, ಭಾಗೀರಥಿ ಉಪಸ್ಥಿತರಿದ್ದರು. 26 ಕೆಸಿಕೆಎಂ 1ಚಿಕ್ಕಮಗಳೂರಿನ ಜೆವಿಎಸ್‌ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ನಿವೃತ್ತ ಪ್ರಾಚಾರ್ಯರಿಗೆ ಸನ್ಮಾನ ಸಮಾರಂಭವನ್ನು ಉಪ ನಿರ್ದೇಶಕಿ ಮಂಜುಳ ಅವರು ಉದ್ಘಾಟಿಸಿದರು. ತೇಜಸ್ವಿನಿ, ನಾಗರಾಜ್‌ರಾವ್‌ ಕಲ್ಕಟ್ಟೆ, ರವಿಕಾಂತ್‌ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?