ಬಸವಣ್ಣನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ

KannadaprabhaNewsNetwork | Published : May 29, 2024 12:57 AM

ಸಾರಾಂಶ

ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಾಲೂರು ಮಠದಲ್ಲಿ ಬಸವಜಯಂತಿನ್ನು ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಹನೂರು

ಜಗಜ್ಯೋತಿ ಬಸವೇಶ್ವರರು ನೀಡಿದಂತ ಕೊಡುಗೆ ಅಪಾರವಾದದ್ದು ಪ್ರತಿಯೊಬ್ಬರೂ ಅವರ ಮಾರ್ಗದರ್ಶನದಲ್ಲಿ ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಾಲೂರು ಬೃಹನ್ ಮಠದ ಶ್ರೀಗಳಾದ ಶಾಂತ ಮಲ್ಲಿಕಾರ್ಜುನಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.

ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಸಾಲೂರು ಮಠದಲ್ಲಿ ಬಸವ ಜಯಂತಿ ಕಾರ್ಯಕ್ರಮದ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಾನವತವಾದಿ ಬಸವೇಶ್ವರರು ದೀನ ದಲಿತರ ಉದ್ದಾರಕ್ಕಾಗಿ ನಿಂತವರು. ಅವರು ಸಮಾಜಕ್ಕೆ ನೀಡಿದಂತಹ ಬೋಧನೆಗಳನ್ನು ನೆನಪಿಸುವ ಉಪನ್ಯಾಸಗಳು ಹೆಚ್ಚು ಹೆಚ್ಚಾಗಿ ನಡೆಯಬೇಕಾಗಿದೆ. ಬಸವ ಜಯಂತಿ ಆಚರಿಸುವ ಮತ್ತು ಹಲವರು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಮಹಾ ಮಾನವತವಾದಿ ಬಸವೇಶ್ವರರ ಕೀರ್ತಿಯನ್ನು ಸಾರುವ ಸಮಾಜಕ್ಕೆ ನೀಡಿದ ಬೋಧನೆಗಳು ಮತ್ತು ಸುಧಾರಣೆಗಳ ಮತ್ತು ಮಹಿಳೆಯರ ಸಬಲೀಕರಣಕ್ಕೆ ಉತ್ತೇಜಿಸಿದವರು ಬಸವಣ್ಣ ಆಧ್ಯಾತ್ಮಿಕ ಜ್ಞಾನದ ಅನ್ವೇಷಣೆಯಲ್ಲಿ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಬೋಧನೆಗಳ ಪ್ರಾಮುಖ್ಯತೆ ಬಗ್ಗೆ ಸಮಾಜಕ್ಕೆ ಅವರು ಹಾಕಿಕೊಟ್ಟ ಅಡಿಪಾಯ ಪರಂಪರೆ ಸಮಾಜ ಸುಧಾರಣೆ ಅವರ ರಚಿಸಿದಂತ ಮಹಾಕಾವ್ಯ ರಚನೆಗಳ ಮೂಲಕ ಆಧ್ಯಾತ್ಮಿಕವಾಗಿ ಜ್ಞಾನೋದಯಕ್ಕಾಗಿ ಪ್ರತಿಪಾದಿಸಿದವರು.

ಬಸವಣ್ಣನವರ ಜೀವನ ಆಧಾರಿತ ಕೊಡುಗೆಗಳು ಮತ್ತು ನಿರಂತರ ಪರಂಪರೆಯನ್ನು ಪರಿಶೀಲಿಸುತ್ತದೆ, ಬಸವಣ್ಣನವರ ಬೋಧನೆಗಳನ್ನು ನೆನಪಿಸುವ ವಚನ ಸಾಹಿತ್ಯಗಳು ಜಗಜ್ಯೋತಿ ಬಸವೇಶ್ವರ ಭಕ್ತಿ ಭಂಡಾರಿ ಬಸವಣ್ಣ ಮಹಾ ಮಾನವತವಾದಿ ಎಂದು ಬಣ್ಣಿಸಿದರು ಪ್ರತಿಯೊಬ್ಬರು ಬಸವ ಜಯಂತಿ ಆಚರಿಸುವ ವೇಳೆ ಅವರ ತತ್ವ ಸಿದ್ಧಾಂತಗಳ ಬಗ್ಗೆ ತಿಳಿದುಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಬೇಡಗಂಪಣ ಸಮುದಾಯದ ಹಿರಿಯ ಮುಖಂಡ ಹಾಗೂ ಗೌರವಾಧ್ಯಕ್ಷ ಪುಟ್ಟಣ್ಣ ಪುರಾಣಿ ಮಹೇಶ್ ಭಕ್ತರು ಮತ್ತಿತರರು ಹಾಜರಿದ್ದರು.

Share this article