ಹರಪನಹಳ್ಳಿ: ಕನಕದಾಸರು ಬಹುಮುಖ ಪ್ರತಿಭೆಯಾಗಿದ್ದು, ಜಾತಿ ವ್ಯವಸ್ಥೆ ಹೋಗಲಾಡಿಸಿ ಸಮಾನತೆ ತರಲು ಪ್ರಯತ್ನಿಸಿದ ಕನಕದಾಸರ ಚಿಂತನೆಗಳನ್ನು ಸರ್ವರೂ ಅಳವಡಿಸಿಕೊಳ್ಳಬೇಕು ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.
ಬೀರೇಶ್ವರ ಕುರುಬರ ಸಂಘದ ತಾಲೂಕು ಅಧ್ಯಕ್ಷ ಬಂಡ್ರಿ ಗೋಣಿಬಸಪ್ಪನವರು ಮಾತಾಡಿ, ಕೀರ್ತನೆ, ಸಾಹಿತ್ಯ ವಿಂಡಂಬನೆಗಳ ಮೂಲಕ ಸಮಾಜ ತಿದ್ದುವ ಪ್ರಯತ್ನ ಮಾಡಿದರು ಎಂದು ಹೇಳಿದರು.
ಉಪನ್ಯಾಸ ನೀಡಿದ ದಾವಣಗೆರೆಯ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹ ಪ್ರಾದ್ಯಪಕ ಮಲ್ಲಿಕಾರ್ಜುನಗೌಡ ಅವರು ಭಕ್ತಿ ಚಳವಳಿ ದಕ್ಷಿಣ ಭಾರತದಲ್ಲಿ ಅತ್ಯಂತ ಪ್ರಮುಖ ಚಳವಳಿ, ಕರ್ನಾಟಕದಲ್ಲಿ ವಚನ ಹಾಗೂ ದಾಸ ಸಾಹಿತ್ಯ ಪ್ರಮುಖವಾದವು ಈ ಎರಡು ಸಮಾಜ ತಿದ್ದುವ ಕಾರ್ಯ ಮಾಡಿದವು ಎಂದರು.ಕನಕದಾಸರು ಸೇರಿದಂತೆ ಮಹನೀಯರು, ದಾರ್ಶನಿಕರು ಯಾವುದೇ ಒಂದು ಜಾತಿಗೆ ಸೀಮಿತವಲ್ಲ, ಎಲ್ಲಾ ಮಹನೀಯರು ಜಾತಿ ವ್ಯವಸ್ಥೆ ಹೋಗಲಾಡಿಸಲು ಪ್ರಯತ್ನ ಮಾಡಿದಾಗ್ಯು ಜಾತಿ ವ್ಯವಸ್ಥೆ ಹೋಗದಿರುವುದು ಅತ್ಯಂತ ವಿಷಾದದ ಸಂಗತಿ ಎಂದರು.
ತಹಶೀಲ್ದಾರ ಬಿ.ವಿ. ಗಿರೀಶಬಾಬು, ಪುರಸಭಾ ಸದಸ್ಯರಾದ ಎಂ.ವಿ. ಅಂಜಿನಪ್ಪ, ಉದ್ದಾರ ಗಣೇಶ, ಟಿ.ವೆಂಕಟೇಶ, ಲಾಟಿ ದಾದಾಪೀರ, ಭರತೇಶ, ಜಾಕೀರ ಹುಸೇನ್, ವಸಂತಪ್ಪ, ಮುಖಂಡರಾದ ಜಂಬಣ್ಣ, ಗುಂಡಗತ್ತಿ ಕೊಟ್ರಪ್ಪ, ಕಲ್ಲೇರ ಬಸವರಾಜ, ತಾಪಂ ಇಒ ವೈ.ಎಚ್.ಚಂದ್ರಶೇಖರ, ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಸಹಾಯಕ ನಿರ್ದೆಶಕ ಗಂಗಪ್ಪ, ಬಿಇಒ ಲೇಪಾಕ್ಷಪ್ಪ, ಸಹಾಯಕ ಕೃಷಿ ಅಧಿಕಾರಿ ಉಮೇಶ, ಮತ್ತೂರು ಬಸವರಾಜ ಇತರರು ಇದ್ದರು.ಹರಪನಹಳ್ಳಿ ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ಆಯೋಜಿಸಿದ್ದ ಕನಕದಾಸರ ಜಯಂತ್ಯೋತ್ಸವವನ್ನು ಶಾಸಕಿ ಎಂ.ಪಿ.ಲತಾ ಹಾಗೂ ಎಸಿ ಚಿದಾನಂದಗುರುಸ್ವಾಮಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ಚಾಲನೆ ನೀಡಿದರು.