ಮಹರ್ಷಿ ವಾಲ್ಮೀಕಿ ಪ್ರಗತಿಶೀಲ ಗುಣ ಅಳವಡಿಸಿಕೊಳ್ಳಿ

KannadaprabhaNewsNetwork | Published : Oct 28, 2024 1:00 AM

ಸಾರಾಂಶ

ನಾಯಕನಹಟ್ಟಿ: ರಾಮಾಯಣ ಮನುಕುಲದ ಮಾರ್ಗದರ್ಶಿ ಆಗಿದೆ. ಮನುಷ್ಯರ ವ್ಯಕ್ತಿತ್ವ ಹೇಗಿರಬೇಕು, ಹೇಗೆ ಬದುಕುಬೇಕು ಎಂಬುದಾಗಿ ರಾಮನ ಪಾತ್ರದ ಮೂಲಕ ರಾಮಾಯಣ ಚಿತ್ರಿಸಿರುವ ಮಹರ್ಷಿ ವಾಲ್ಮೀಕಿಯ ಪ್ರಗತಿಪರ ಗುಣವನ್ನು ನಾವು ನಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ರಾಜ್ಯ ದ್ರಾಕ್ಷಾರಸ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಡಾ.ಬಿ.ಯೋಗೇಶ್ ಬಾಬು ಹೇಳಿದರು.

ನಾಯಕನಹಟ್ಟಿ: ರಾಮಾಯಣ ಮನುಕುಲದ ಮಾರ್ಗದರ್ಶಿ ಆಗಿದೆ. ಮನುಷ್ಯರ ವ್ಯಕ್ತಿತ್ವ ಹೇಗಿರಬೇಕು, ಹೇಗೆ ಬದುಕುಬೇಕು ಎಂಬುದಾಗಿ ರಾಮನ ಪಾತ್ರದ ಮೂಲಕ ರಾಮಾಯಣ ಚಿತ್ರಿಸಿರುವ ಮಹರ್ಷಿ ವಾಲ್ಮೀಕಿಯ ಪ್ರಗತಿಪರ ಗುಣವನ್ನು ನಾವು ನಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ರಾಜ್ಯ ದ್ರಾಕ್ಷಾರಸ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ ಡಾ.ಬಿ.ಯೋಗೇಶ್ ಬಾಬು ಹೇಳಿದರು. ಸಮೀಪದ ಗುಂತಕೋಲಮ್ಮನಹಳ್ಳಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭವನ್ನು ಉದ್ಘಾಟಸಿ ಮಾತನಾಡಿದ ಅವರು, ರಾಮಾಯಣ ರಚನೆಗೂ ಮುಂಚೆ ಸದ್ಗುಣ ಮತ್ತು ಸನ್ಮಾರ್ಗ ಸೂಚಿಸುವ ಮಹತ್ವದ ಗ್ರಂಥಗಳು ಇರಲಿಲ್ಲ. ರಾಜಾಶ್ರಯದಲ್ಲಿ ರಚಿತವಾದ ಗ್ರಂಥಗಳೆಲ್ಲವೂ ವೈಭವೋಪೇತವಾಗಿ ರಾಜರ ಗುಣಗಾನ ಮಾಡುವಂತಿದ್ದವು. ರಾಜಾ ಪ್ರತ್ಯಕ್ಷ ದೈವ ಎಂಬುದಾಗಿ ಸೂಚಿಸುತ್ತವೆ. ಆದರೆ, ಒಬ್ಬ ಮನುಷ್ಯ ಸಮಾಜ ಮೆಚ್ಚುವಂತೆ ಬದುಕು ನಡೆಸುವುದು ಹೇಗೆ ಎಂಬುದನ್ನು ಮಾತ್ರ ರಾಮಾಯಣ ಕಲಿಸಿಕೊಡುತ್ತದೆ. ಹಾಗಾಗಿ, ಪ್ರತಿಯೊಬ್ಬರೂ ರಾಮಾಯಣ ಓದಬೇಕು ಎಂದು ಕಿವಿಮಾತು ಹೇಳಿದರು. ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಮಾಡುವ ಜತೆಜತೆಗೆ ರಾಮಯಾಣ ಕೂಡ ಜನರನ್ನು ತಲುಪಿಸುವಂತಹ ಕೆಲಸ ಯುವಕರು ಹಮ್ಮಿಕೊಳ್ಳಬೇಕು. ಆಗ, ಮಹರ್ಷಿ ಹಾಗೂ ರಾಮಾಯಣ ಜನರ ಮನಸ್ಸಿಗೆ ತಲುಪಿಸಲು ಸಾಧ್ಯ ಎಂದು ಸಲಹೆ ನೀಡಿದರು. ಅಬ್ಬೇನಳ್ಳಿ ಗ್ರಾಮ ಪಂಚಾಯಿರಿ ಅಧ್ಯಕ್ಷ ಆನಂದಪ್ಪ, ಉಪಾಧ್ಯಕ್ಷೆ ಅನಿತಾ ಜಯಣ್ಣ, ಗ್ರಾಮ ಪಂಚಾಯಿತಿ ಸದಸ್ಯರಾದ ಮಂಜಮ್ಮ, ದುರ್ಗೇಶ, ಸಿದ್ದಲಿಂಗಮ್ಮ, ಗುಂಡಯ್ಯ, ಮಾಜಿ ಅಧ್ಯಕ್ಷ ಶಂಕರ್ ಸ್ವಾಮಿ, ಮೊಳಕಾಲ್ಮೂರು ಜೆಡಿಎಸ್ ತಾಲ್ಲೂಕು ಘಟಕ ಅಧ್ಯಕ್ಷ ಕರಿಬಸಪ್ಪ, ಗ್ರಾ.ಪಂ. ಮಾಜಿ ಗ್ರಾಮ ಸದಸ್ಯ ಬಿ ಚಂದ್ರಣ್ಣ, ಬೂಟ್ ತಿಪ್ಪೇಸ್ವಾಮಿ, ಕೆ.ಟಿ.ಮಲ್ಲಿಕಾರ್ಜುನ, ಎನ್.ತಿಪ್ಪೇಸ್ವಾಮಿ, ಮಾಜಿ ಉಪಾಧ್ಯಕ್ಷ ಆರ್.ಬಸಪ್ಪ, ಪ್ರಕಾಶ್, ಮೀಸೆ ಓಬಯ್ಯ, ಶಿವ ತಿಪ್ಪೇಸ್ವಾಮಿ, ವಾಲ್ಮೀಕಿ ಇದ್ದರು.

Share this article