ಲಕ್ಕವಳ್ಳಿ ಪ್ರಗತಿ ರೈತ ಸಂಘ ಅಧ್ಯಕ್ಷ ನಂದಕುಮಾರ್ । ಯಂತ್ರಶ್ರೀ ಭತ್ತ ನಾಟಿ ಪ್ರಾತ್ಯಕ್ಷಿಕೆ, ತರಬೇತಿ
ರೈತರು ತಮ್ಮ ಭತ್ತದ ಬೇಸಾಯದಲ್ಲಿ ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಹೆಚ್ಚಿನ ಲಾಭ ಪಡೆಯಬೇಕು ಎಂದು ಲಕ್ಕವಳ್ಳಿ ಪ್ರಗತಿ ರೈತ ಸಂಘ ಅಧ್ಯಕ್ಷ ಎಲ್.ಸಿ. ನಂದಕುಮಾರ್ ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ತರೀಕೆರೆಯಿಂದ ಸಮೀಪದ ಲಕ್ಕವಳ್ಳಿ ವಲಯದ ಕೆಸರು ಕೊಪ್ಪ ಗ್ರಾಮದ ಲಿಂಗರಾಜು ಅವರ ಭತ್ತದ ಗದ್ದೆಯಲ್ಲಿ ಯಾಂತ್ರಿಕೃತ ಭತ್ತ ಬೇಸಾಯ, ಯಂತ್ರಶ್ರೀ ಭತ್ತ ನಾಟಿ ಪ್ರಾತ್ಯಕ್ಷಿಕೆ ಹಾಗೂ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯಂತ್ರಶ್ರೀ ಭತ್ತ ನಾಟಿ ಕಾರ್ಯಕ್ರಮ ಯಂತ್ರಗಳ ಕಾರ್ಯವೈಖರಿ ಹಾಗೂ ಅವುಗಳ ಉಪಯೋಗದ ಕುರಿತು ರೈತರಿಗೆ ಮಾಹಿತಿ ನೀಡುವ ಜೊತೆಗೆ ಕಾರ್ಮಿಕರ ಕೊರತೆ ನಿವಾರಿಸುವಲ್ಲಿ ಯಾಂತ್ರೀಕರಣ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ತಾಲೂಕು ಯೋಜನಾಧಿಕಾರಿ ಸದಾಶಿವ ಗೌಡ, ಸಿಎಚ್ಎಸ್.ಸಿ ಚಿಕ್ಕಮಗಳೂರು ವಿಭಾಗೀಯ ಯೋಜನಾಧಿಕಾರಿ ಸೋಮ ನಾಥ್, ಪ್ರಗತಿ ರೈತ ಸಂಘದ ಉಪಾಧ್ಯಕ್ಷ ಹರಿ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ರಮೇಶ್ ಕೆ.ಎಸ್. ಸಿಹೆಚ್.ಎಸ್.ಸಿ ಅಭಿಯಂತರರಾದ ಅವಿನಾಶ್, ಕೃಷಿ ಮೇಲ್ವಿಚಾರಕ ಸಂತೋಷ್, ಸಿಹೆಚ್ಎಸ್.ಸಿ ಪ್ರಬಂಧಕರಾದ ಮಂಜುನಾಥ್, ವಲಯದ ಮೇಲ್ವಿಚಾರಕಿ ಗಂಗಮ್ಮ, ಸೇವಾಪ್ರತಿನಿಧಿ ಸಂಗಮ, ರೈತರಾದ ನಂಜೇಗೌಡ, ಲಿಂಗರಾಜು, ಮಹಾಂತೇಶ್, ಹೋಬಳಿ ವ್ಯಾಪ್ತಿಯ ಕೃಷಿ ಸಖಿಯರು, ರೈತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
31ಕೆಟಿಆರ್.ಕೆ.2ಃ ತರೀಕೆರೆ ಸಮೀಪದ ಕೆಸರುಗೊಪ್ಪ ಗ್ಲಾಮದಲ್ಲಿ ನಡೆದ ಯಂತ್ರಶ್ರೀ ಭತ್ತ ನಾಟಿ ಪ್ರಾತ್ಯಕ್ಷಿಕೆ ಹಾಗೂ ತರಬೇತಿ ಕಾರ್ಯಕ್ರಮವನ್ನು ಲಕ್ಕವಳ್ಳಿ ಪ್ರಗತಿ ರೈತ ಸಂಘ ಅಧ್ಯಕ್ಷ ಎಲ್.ಸಿ. ನಂದಕುಮಾರ್ ಉದ್ಘಾಟಿಸಿದರು. ತಾಲೂಕು ಯೋಜನಾಧಿಕಾರಿ ಸದಾಶಿವ ಗೌಡ, ವಿಭಾಗೀಯ ಯೋಜನಾಧಿಕಾರಿ ಸೋಮನಾಥ್, ಕೃಷಿ ಮೇಲ್ವಿಚಾರಕ ಸಂತೋಷ್ ಮತ್ತಿತರರು ಇದ್ದರು.