ದೊಡ್ಡಬಳ್ಳಾಪುರ: ಶೈಕ್ಷಣಿಕ ಸೇವಾ ಚಟುವಟಿಕೆಗಳಿಗೆ ಲಯನ್ಸ್ ಸಂಸ್ಥೆ ಪ್ರಧಾನ ಆದ್ಯತೆ ನೀಡಿ ಕೆಲಸ ಮಾಡುತ್ತಿದ್ದು, ಗ್ರಾಮೀಣ ಭಾಗದ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಉತ್ತೇಜಿಸಲಾಗುತ್ತಿದೆ ಎಂದು ಲಯನ್ಸ್ ಜಿಲ್ಲೆ 317ಎಫ್ ಗೌರ್ನರ್ ರಾಜುಚಂದ್ರಶೇಖರ್ ಹೇಳಿದರು.
ಗಡಿ ಗ್ರಾಮವಾದ ಆರೂಢಿಯಲ್ಲಿ ಸರ್ಕಾರಿ ಶಾಲೆ ಆರಂಭವಾಗಿ 120 ವರ್ಷಗಳು ಕಳೆದಿವೆ ಎಂಬುದು ಹೆಮ್ಮೆಯ ವಿಚಾರ. ಇಂತಹ ಪಾರಂಪರಿಕ ಶಾಲೆಗಳು ನಮ್ಮ ಶೈಕ್ಷಣಿಕ ಪ್ರಗತಿಯ ಮಾದರಿಗಳಾಗಿವೆ. ಸಮಕಾಲೀನ ಆಶೋತ್ತರಗಳಿಗೆ ಪೂರಕವಾಗಿ ಮಕ್ಕಳಿಗೆ ಮಾರ್ಗದರ್ಶನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಲಯನ್ಸ್ ಸಂಸ್ಥೆ ತನ್ನ ಸೇವಾ ವಲಯವನ್ನು ವಿಸ್ತರಿಸಿಕೊಂಡಿದೆ ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಸಿ.ನಾಗರಾಜ್ ಮಾತನಾಡಿ, ತಾವು ಓದಿದ ಶಾಲೆಯಲ್ಲಿ ಇಂದು ಸೇವಾ ಚಟುವಟಿಕೆಗಳನ್ನು ಹಮ್ಮಿಕೊಂಡಿರುವುದು ಗಣನೀಯ ವಿಚಾರವಾಗಿದೆ. ಓದಿ ಬೆಳೆದ ವಾತಾವರಣವನ್ನು ಮರೆಯದೆ ಮುಂದಿನ ಪೀಳಿಗೆಯ ಹಿತವನ್ನು ಆದ್ಯತೆಯಾಗಿಟ್ಟುಕೊಂಡು ಕೆಲಸ ಮಾಡುವುದು ಮಾದರಿ ಹಾಗೂ ಸಾರ್ಥಕ ನಡೆಯಾಗಿರುತ್ತದೆ ಎಂದು ತಿಳಿಸಿದರು.ಲಯನ್ಸ್ ಜಿಲ್ಲಾ ಆಡಳಿತಾಧಿಕಾರಿ ಎಂ.ಆರ್.ಶ್ರೀನಿವಾಸ್, ಪರಿಸರ ವಿಭಾಗದ ಸಂಯೋಜಕ ಚಿನ್ನಪ್ಪ ಥಾಮಸ್, ಶೈಕ್ಷಣಿಕ(ಗ್ರಾಮೀಣ) ವಿಭಾಗದ ಸಂಯೋಜಕ ಎಸ್.ಪ್ರಕಾಶ್, ಕನ್ನಡ ಮತ್ತು ಸಂಸ್ಕೃತಿ ಜಿಲ್ಲಾ ಸಂಯೋಜಕ ಪ್ರೊ.ಕೆ.ಆರ್.ರವಿಕಿರಣ್, ಪ್ರಾಂತೀಯ ಅಧ್ಯಕ್ಷ ಜೆ.ಆರ್.ರಾಕೇಶ್, ವಲಯ ಅಧ್ಯಕ್ಷ ಡಾ.ಎಂ.ಶ್ರೀನಿವಾಸರೆಡ್ಡಿ, ಶಾಲಾ ಮುಖ್ಯಶಿಕ್ಷಕ ಸಿದ್ದರಾಮಪ್ಪ, ಶಿಕ್ಷಣ ಸಂಯೋಜಕ ರಾಮಚಂದ್ರ, ಎಸ್‌ಡಿಎಂಸಿ ಅಧ್ಯಕ್ಷ ನರಸೀಯಪ್ಪ, ಆರ್ಯಭಟ ಲಿಯೋ ಲಯನ್ಸ್ ಸಂಸ್ಥೆ ಅಧ್ಯಕ್ಷ ಮನೋಹರ್, ಎಲ್‌ಸಿಡಿ ರಾಯಲ್ಸ್ ಅಧ್ಯಕ್ಷ ರವಿಕುಮಾರ್, ಲಯನ್ಸ್ ಕ್ಲಬ್ ಕಾರ್ಯದರ್ಶಿ ಸುಮ, ಖಜಾಂಚಿ ಹರ್ಷ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.
31ಕೆಡಿಬಿಪಿ2- ದೊಡ್ಡಬಳ್ಳಾಪುರ ತಾಲೂಕಿನ ಆರೂಢಿ ಗ್ರಾಮದಲ್ಲಿ ಲಯನ್ಸ್ ಕ್ಲಬ್ ಆಫ್ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್‌ನಿಂದ ವಿದ್ಯಾರ್ಥಿಗಳಿಗೆ ಪುಸ್ತಕ, ಲೇಖನ ಸಾಮಗ್ರಿ ವಿತರಿಸಲಾಯಿತು.
31ಕೆಡಿಬಿಪಿ3-