- ದೈವಜ್ಞ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ರಜತ ಮಹೋತ್ಸವ ಸಂಭ್ರಮ ಕಾರ್ಯಕ್ರಮ
ಕೆಲವು ಸಹಕಾರಿ ಆಡಳಿತ ಮಂಡಳಿಗಳು ಠೇವಣಿಯನ್ನು ಮನಸ್ಸಿಗೆ ಬಂದಂತೆ ಬಳಸುವುದು, ವೈಯಕ್ತಿಕ ಹಿತಾಸಕ್ತಿಗೆ ಅನುಗುಣವಾಗಿ ಅದನ್ನು ಬೇರೆ ಕಡೆ ಹೂಡಿಕೆ ಮಾಡುವುದು ದುರ್ಬಳಕೆ ಎನಿಸುತ್ತದೆ. ಇದರಿಂದ ಸದಸ್ಯ ಬಂಧುಗಳು ಭದ್ರತೆ ಯಿಲ್ಲದೆಡೆ ಸಹಕಾರಿ ಕ್ಷೇತ್ರಕ್ಕೆ ಹೂಡಿಸುವುದನ್ನು ಕೈಬಿಟ್ಟು ನಿರಾಸಕ್ತಿ ವಹಿಸುತ್ತಾರೆ ಎಂದು ಎಚ್ಚರಿಸಿದರು. ಸಾಲ ಸೌಲಭ್ಯ ನೀಡುವಾಗ ಸಹಕಾರಿ ಸಂಸ್ಥೆಯವರು ನಗದು ವ್ಯವಹಾರ ಮಾಡದೆ ಬ್ಯಾಂಕಿನ ಮೂಲಕ ವ್ಯವಹಾರ ಮಾಡಬೇಕು. ಇಲ್ಲವಾದರೆ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಸಹಕಾರ ಸಂಸ್ಥೆಯಲ್ಲಿ ಕೆಲಸ ಮಾಡುವವರು ಕ್ಷೇತ್ರಕ್ಕೆ ಕಳಂಕ ಬಾರದಂತೆ ವಿಶ್ವಾಸಾರ್ಹತೆ, ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ಅಳವಡಿಸಿಕೊಂಡು ಕೆಲಸ ಮಾಡಬೇಕು ಎಂದು ಹೇಳಿದರು.ಸೌಹಾರ್ದ ಸಹಕಾರಿ ಸದಸ್ಯರ ಠೇವಣಿ ಹಣಕ್ಕೆ ಮೋಸ ಆಗದಂತೆ ನೋಡಿಕೊಳ್ಳಬೇಕು. ಸೌಹಾರ್ದ ಕಾಯ್ದೆ ವಿರುದ್ಧವಾಗಿ ಯಾವುದೇ ಸಂಸ್ಥೆ ನಡೆಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಆರ್ಥಿಕ ಶಿಸ್ತು ಕಾಪಾಡಿಕೊಂಡು ಹೋಗುವ ಮೂಲಕ ಬಡವರ ಏಳಿಗೆ ಹೊಂದುವುದು ಸೌಹಾರ್ದ ಸಹಕಾರಿ ಉದ್ದೇಶ ಎಂದರು.ರಾಜ್ಯ ದೈವಜ್ಞ ಬ್ರಾಹ್ಮಣ ಸಂಘದ ಅಧ್ಯಕ್ಷ ರವಿ ಗಾಂವ್ಕರ್ ಮಾತನಾಡಿ, ರಾಜ್ಯದಲ್ಲಿ ಸುಮಾರು 5 ಲಕ್ಷ ಜನಸಂಖ್ಯೆ ಹೊಂದಿರುವ ಸಮುದಾಯವನ್ನು ಕೇವಲ 80 ಸಾವಿರವೆಂದು ಬಿಂಬಿಸಲಾಗುತ್ತಿದೆ. ಹೀಗಾಗಿ ಜನಗಣತಿ ಸಮಯದಲ್ಲಿ ಸಮಾಜದ ಬಂಧುಗಳು ಎಚ್ಚರಿಕೆ ವಹಿಸಬೇಕು. ಜೊತೆಗೆ ರಾಜ್ಯ ಸಂಘದಲ್ಲಿ ಸದಸ್ಯರಾಗುವ ಮೂಲಕ ಸರ್ಕಾರದ ಸವಲತ್ತು ಪಡೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.ಸಂಘದ ಸಲಹೆಗಾರ ಅಶೋಕ್ ಆರ್.ರಾಯ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ಹಲವಾರು ಏರುಪೇರಿನ ನಡುವೆ ದೈವಜ್ಞ ಸಂಘ ಇಂದು ರಜತ ಮಹೋತ್ಸವ ಆಚರಿಸುತ್ತಿದೆ. ಸಂಘ ಆರಂಭದಲ್ಲಿ ಕೆಲವೇ ಜನರಿಂದ ಸ್ಥಾಪಿಸಿಕೊಂಡಿತ್ತು. ಇದೀಗ 12 ಕೋಟಿ ಹೆಚ್ಚು ವಹಿವಾಟು ನಡೆಸುವ ಮೂಲಕ ಸದಸ್ಯ ಸ್ನೇಹಿಯಾಗಿ ಉನ್ನತಿ ಹೊಂದುತ್ತಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷೆ ಶಾಲಿನಿ ಅಶೋಕ್ ರಾಯ್ಕರ್ ವಹಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕಿ ಟಿ.ಎಲ್.ರಮೇಶ್, ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕರಾದ ಎಸ್.ಕೆ.ಮಂಜುನಾಥ್, ಭಾರತಿ.ಜಿ.ಭಟ್, ಜಿಲ್ಲಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ವೈ.ಎಸ್.ಸುಬ್ರಹ್ಮಣ್ಯ, ಲೆಕ್ಕ ಪರಿಶೋಧಕ ಸತ್ಯನಾರಾಯಣ್, ಸಂಘದ ಉಪಾಧ್ಯಕ್ಷ ಎಚ್.ಕೆ. ಸುರೇಶ್‌ಭಟ್, ನಿರ್ದೇಶಕರಾದ ತಾರಾಮತಿ, ಸಿ.ಆರ್.ಸುಧೀರ್, ಮಹೇಂದ್ರ, ಶ್ರೀಕಾಂತ್ ಉಪಸ್ಥಿತರಿದ್ದರು.
14 ಕೆಸಿಕೆಎಂ 2ಚಿಕ್ಕಮಗಳೂರಿನ ಎಂ.ಎಲ್.ವಿ.ರೋಟರಿ ಸಭಾಂಗಣದಲ್ಲಿ ಭಾನುವಾರ ನಡೆದ ದೈವಜ್ಞ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ರಜತ ಮಹೋತ್ಸವ ಸಂಭ್ರಮ ಕಾರ್ಯಕ್ರಮವನ್ನು ಜಿ. ನಂಜನಗೌಡ ಉದ್ಘಾಟಿಸಿದರು. ರವಿ ಗಾಂವ್ಕರ್, ಶಾಲಿನಿ ಅಶೋಕ್ ರಾಯ್ಕರ್, ಟಿ.ಎಲ್.ರಮೇಶ್ ಇದ್ದರು.