ಸತ್ಯ ಸಾಯಿ ಗ್ರಾಮದಲ್ಲಿ ಉಚಿತ ರೊಬೊಟಿಕ್ ಶಸ್ತ್ರಚಿಕಿತ್ಸೆ

KannadaprabhaNewsNetwork |  
Published : Sep 15, 2025, 01:00 AM IST
ಸಿಕೆಬಿ-1 ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಬೊಂಡಾಡ ಇಂಜಿನಿಯರಿಂಗ್ ಕಂಪನಿಯ ಅಧ್ಯಕ್ಷ  ಹಾಗೂ ವ್ಯವಸ್ಥಾಪಕ ನಿರ್ದೇಶಕ  ಡಾ ಬೊಂಡಾಡ ರಾಘವೇಂದ್ರ ರಾವ್ ಗೆ ಸದ್ಗುರು ಶ್ರೀ ಮಧುಸೂದನ ಸಾಯಿ  'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ನಾಯಕತ್ವ ಪುರಸ್ಕಾರ' ನೀಡಿ ಗೌರವಿಸಿದರು. | Kannada Prabha

ಸಾರಾಂಶ

ಸತ್ಯ ಸಾಯಿ ಗ್ರಾಮದ ಆರಂಭಿಸಲಿರುವ ರೊಬೊಟಿಕ್ ಶಸ್ತ್ರಚಿಕಿತ್ಸೆಯು ಉತ್ತರ ಅಮೆರಿಕದಂಥ ದೇಶಗಳಲ್ಲಿ ನೀವು ಪಡೆಯಬಹುದಾದ ಸೌಲಭ್ಯಕ್ಕಿಂತಲೂ ಉತ್ತಮವಾಗಿದೆ. ಅದು ಕೂಡ ಎಲ್ಲರಿಗೂ ಉಚಿತವಾಗಿ ನೀಡುವ ಶಸ್ತ್ರಚಿಕಿತ್ಸೆಯಾಗಿದೆ. ನೀವು ಯಾವ ರಾಜ್ಯದವರು, ಯಾವ ಭಾಷೆ ಆರ್ಥಿಕ ಸ್ಥಿತಿ ಕೇಳದೆ ಅಗತ್ಯವಿರುವ ಎಲ್ಲರಿಗೂ ಉಚಿತವಾಗಿ ರೊಬೊಟಿಕ್ ಶಸ್ತ್ರಚಿಕಿತ್ಸೆ ನೀಡಲಾಗುವುದು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ತಾಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಆರಂಭವಾಗಲಿರುವ 600 ಹಾಸಿಗೆಗಳ ಆಸ್ಪತ್ರೆಯಲ್ಲಿ ಉಚಿತ ರೊಬೊಟಿಕ್ ಶಸ್ತ್ರಚಿಕಿತ್ಸೆಯನ್ನು ನೀಡುವ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.

ತಾಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ''''ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ''''ದ 29ನೇ ದಿನದಂದು ಮಾತನಾಡಿ, ನಮ್ಮ ಆಸ್ಪತ್ರೆಯಲ್ಲಿ ಅತ್ಯುನ್ನತ ಗುಣಮಟ್ಟದ ರೊಬೊಟಿಕ್ ಶಸ್ತ್ರಚಿಕಿತ್ಸೆಯನ್ನು ನೀಡಲಾಗುವುದು ಎಂದರು.

ರೊಬೊಟಿಕ್ ಶಸ್ತ್ರಚಿಕಿತ್ಸೆ ಉಚಿತ

ಇಲ್ಲಿನ ರೊಬೊಟಿಕ್ ಶಸ್ತ್ರಚಿಕಿತ್ಸೆಯು ಉತ್ತರ ಅಮೆರಿಕದಂಥ ದೇಶಗಳಲ್ಲಿ ನೀವು ಪಡೆಯಬಹುದಾದ ಸೌಲಭ್ಯಕ್ಕಿಂತಲೂ ಉತ್ತಮವಾಗಿದೆ. ಅದು ಕೂಡ ಎಲ್ಲರಿಗೂ ಉಚಿತವಾಗಿ ನೀಡುವ ಶಸ್ತ್ರಚಿಕಿತ್ಸೆಯಾಗಿದೆ. ನೀವು ಯಾವ ರಾಜ್ಯದವರು, ಯಾವ ಭಾಷೆ ಆರ್ಥಿಕ ಸ್ಥಿತಿ ಕೇಳದೆ ಅಗತ್ಯವಿರುವ ಎಲ್ಲರಿಗೂ ಉಚಿತವಾಗಿ ರೊಬೊಟಿಕ್ ಶಸ್ತ್ರಚಿಕಿತ್ಸೆ ನೀಡಲಾಗುವುದು ಎಂದು ವಿವರಿಸಿದರು.

ನಮ್ಮ ಸ್ಥಳೀಯ ತಂಡಗಳೇ ಬಹುತೇಕ ಎಲ್ಲವನ್ನು ನಿರ್ವಹಿಸುತ್ತವೆ. ಇಲ್ಲಿನ ತಂಡಕ್ಕೆ ಪ್ರೋತ್ಸಾಹ ಮತ್ತು ಮೆಚ್ಚುಗೆಯ ಮಾತುಗಳನ್ನು ಕೇಳಲು ನನಗೆ ತುಂಬಾ ಸಂತೋಷವಾಗುತ್ತದೆ. ಸೆ. 14 ರಿಂದ 5 ದಿನಗಳ ರೋಬೊಟಿಕ್ ತರಬೇತಿ ಕಾರ್ಯಕ್ರಮ ಆರಂಭವಾಗಿದೆ. ರೊಬೊಟಿಕ್ ಶಸ್ತ್ರಚಿಕಿತ್ಸೆ ಹೇಗೆ ನಡೆಯುತ್ತದೆ ಎಂಬುದನ್ನು ಸುಮಾರು 600 ಶಸ್ತ್ರಚಿಕಿತ್ಸಕರು ಮಾಹಿತಿ ಪಡೆಯಲಿದ್ದಾರೆ ಎಂದರು.

ಸಂಸ್ಥೆಗಳ ನಡುವೆ ಒಡಂಬಡಿಕೆ

ಇದೇ ಸಂದರ್ಭದಲ್ಲಿ ರೊಬೊಟಿಕ್ ತರಬೇತಿ ಕಾರ್ಯಕ್ರಮದ ಪಾಲುದಾರಿಕೆ ಕುರಿತು ಎಸ್ಎಸ್ ಇಂಟರ್ ನ್ಯಾಷನಲ್ ಸೆಂಟರ್ ಫಾರ್ ರೊಬೊಟಿಕ್ ಸರ್ಜರಿ ಮತ್ತು ಶ್ರೀ ಮಧುಸೂದನ ಸಾಯಿ ಆರೋಗ್ಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗಳು ಒಡಂಬಡಿಕೆ ಮಾಡಿಕೊಂಡವು.ಉದ್ಯಮಿ ಬೊಂಡಾಡ ಎಂಜಿನಿಯರಿಂಗ್ ಕಂಪನಿಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ ರಾವ್ ಮತ್ತು ಎಸ್‌ಎಸ್‌ ಇನ್ನೊವೇಶನ್ ಕಂಪನಿಯ ಕಾರ್ಯಕಾರಿ ಅಧ್ಯಕ್ಷ ಡಾ ಸುಧೀರ್ ಶ್ರೀವಾತ್ಸವ ಅವರನ್ನು ಪುರಸ್ಕರಿಸಲಾಯಿತು. ಆರೋಗ್ಯ ಕ್ಷೇತ್ರದಲ್ಲಿ ಕೊಡುಗೆ ನೀಡುತ್ತಿರುವ ಸೂರಿನಾಮ್ ದೇಶದ ಗ್ಲೋರಿಯಾ ಬೊತ್ಸೆ ಅವರಿಗೆ ''''ಒಂದು ಜಗತ್ತು ಒಂದು ಕುಟುಂಬ ಮಾನವೀಯ ಪುರಸ್ಕಾರ'''' ನೀಡಿ ಗೌರವಿಸಲಾಯಿತು.

ಸೂರಿನಾಮ್ ದೇಶದ ರಾಮ್ ರಾಮ್ ಸಹೈ, ಟ್ರಿನಿಡಾಡ್‌ನ ರೀಸ್ ಹಾಸ್ಪೆಡೇಲ್ಸ್ ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೇಖಕ ತನ್ನನ್ನು ತಾನು ವಿಮರ್ಶೆಗೊಳಪಡಿಸಿಕೊಳ್ಳಬೇಕು
ಕುಂದಾನಗರಿಯಲ್ಲಿ ಬೆಳಗಾವಿ ಉತ್ಸವ