ನಂದಿ ಗಿರಿಧಾಮದಲ್ಲಿ ಕೋತಿ ಕಾಟ

KannadaprabhaNewsNetwork |  
Published : Sep 15, 2025, 01:00 AM IST
ಸಿಕೆಬಿ-2 ಐಸ್ ಕ್ರೀಂ ಕಿತ್ತುಕೊಂಡು ಮರ ವೇರಿ ಸವಿಯುತ್ತಿರುವ ಮಂಗಣ್ಣಸಿಕೆಬಿ-3 ಮತ್ತು 4 ಕೈಯಲ್ಲಿನ ವಸ್ತುಗಳು ಕೊಡದಿದ್ದರೆ ಆಕ್ರಮಣಕ್ಕೆ ಸಿದ್ದವಾಗಿರುವ ಕೋತಿಗಳು | Kannada Prabha

ಸಾರಾಂಶ

ನಂದಿಬೆಟ್ಟದಲ್ಲಿ ಕೋತಿಗಳು ಗೂಂಡಾಗಳಂತೆ ವರ್ತಿಸುತ್ತಿವೆ ಎಂದು ಪ್ರವಾಸಿಗರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಎಲ್ಲೆಲ್ಲೂ ಗುಂಪು ಗುಂಪಾಗಿ ಕಾಣಿಸಿಕೊಳ್ಳುವ ಕೋತಿಗ ಸ್ಥಳಾಂತರಕ್ಕೆ ಸಂಬಂಧಪಟ್ಟೆ ಇಲಾಖೆ ಮುಂದಾಗುವಂತೆ ಒತ್ತಾಯಿಸಿದ್ದಾರೆ. ಪ್ರವಾಸಿಗರನ್ನು ಹಿಂಬಾಲಿಸುವ ಕೋತಿಗಳು ಕ್ಷಣಮಾತ್ರದಲ್ಲಿ ಪ್ರವಾಸಿಗರ ಕೈಯಲ್ಲಿರುವ ವಸ್ತುಗಳನ್ನು ಕಿತ್ತುಕೊಂಡು ಮಾಯವಾಗಿಬಿಡುತ್ತವೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ವಾರಾಂತ್ಯ ಮತ್ತು ಸಾರ್ವತ್ರಿಕ ರಜೆ ಬಂದ್ರೆ ಸಾಕು ಪ್ರವಾಸಿಗರೇ ದಂಡೇ ನಂದಿಗಿರಿಧಾಮಕ್ಕೆ ಹರಿದು ಬರುತ್ತದೆ. ಇಂಥ ಪ್ರವಾಸಿ ತಾಣದಲ್ಲಿ ಕೋತಿಗಳ ಉಪಟಳ ಮಿತಿಮೀರಿದ್ದು, ಪ್ರವಾಸಿಗರ ಮೇಲೆ ದಾಳಿ ನಡೆಸಿ ಆಹಾರ ಪದಾರ್ಥಗಳನ್ನು ಕಿತ್ತುಕೊಂಡು ಹೋಗುತ್ತವೆ. ಈ ಕೋತಿಗಳ ಕಾಟಕ್ಕೆ ಪ್ರವಾಸಿಗರು ಹೈರಾಣಾಗಿದ್ದಾರೆ.

ತಿಂಡಿ-ತಿನಿಸು, ನೀರಿನ ಬಾಟಲ್‌ ಮತ್ತು ಐಸ್ ಕ್ರೀಂ ಹಿಡಿದಿರುವ ಪ್ರವಾಸಿಗರೇನಾದರೂ ಕಂಡರೆ ಸಾಕು ಕೋತಿಗಳು ಅವರ ಕೈಯಲ್ಲಿರೋ ತಿಂಡಿ-ತಿನಿಸು,ನೀರಿನ ಬಾಟಲ್‌ಮತ್ತು ಐಸ್ ಕ್ರೀಂ ಕಿತ್ತುಕೊಂಡು ಮರವೇರಿ ಸವಿಯುತ್ತವೆ. ಪ್ರವಾಸಿಗರ ಬ್ಯಾಗ್ ಕಂಡರೆ ಸಾಕು ಕಿತ್ತುಕೊಳ್ಳಲು ಹೊಂಚು ಹಾಕುತ್ತವೆ.

ಗೂಂಡಾಗಳಂತೆ ವರ್ತನೆ

ನಂದಿಬೆಟ್ಟದಲ್ಲಿ ಕೋತಿಗಳು ಗೂಂಡಾಗಳಂತೆ ವರ್ತಿಸುತ್ತಿವೆ ಎಂದು ಪ್ರವಾಸಿಗರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಎಲ್ಲೆಲ್ಲೂ ಗುಂಪು ಗುಂಪಾಗಿ ಕಾಣಿಸಿಕೊಳ್ಳುವ ಕೋತಿಗ ಸ್ಥಳಾಂತರಕ್ಕೆ ಸಂಬಂಧಪಟ್ಟೆ ಇಲಾಖೆ ಮುಂದಾಗುವಂತೆ ಒತ್ತಾಯಿಸಿದ್ದಾರೆ. ಪ್ರವಾಸಿಗರನ್ನು ಹಿಂಬಾಲಿಸುವ ಕೋತಿಗಳು ಕ್ಷಣಮಾತ್ರದಲ್ಲಿ ಪ್ರವಾಸಿಗರ ಕೈಯಲ್ಲಿರುವ ವಸ್ತುಗಳನ್ನು ಕಿತ್ತುಕೊಂಡು ಮಾಯವಾಗಿಬಿಡುತ್ತವೆ.

ನಂದಿಬೆಟ್ಟಕ್ಕೆ ಸಂತಸದಿಂದ ಸಮಯ ಕಳೆಯಲು ಬರುವ ಪ್ರವಾಸಿಗರು ಕೋತಿಗಳ ಉಪಟಳದಿಂದ ಹೈರಾಣಾಗಿ ಹೋಗಿದ್ದು ಕೋತಿಗಳ ಕಾಟಕ್ಕೆ ಬ್ರೇಕ್ ಹಾಕುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಕೋತಿಗಳ ಕಾಟ ತಪ್ಪಿಸಿ

ನಗರದ ಕಾಂಕ್ರೀಟ್ ಕಾಡಿನಲ್ಲಿ , ವಾಹನಗಳ ಹೊಗೆ ಮತ್ತು ಜನರ ಜಂಜಾಟದಿಂದ ದೂರ ಹೋಗಲು, ಪ್ರಕೃತಿಯ ರಮ್ಯ ಮಡಿಲಲ್ಲಿ ಪರಿಸರದ ಸೊಬಗು ಸವಿಯೋಣ ವೆಂದು ನಂದಿ ಬೆಟ್ಟಕ್ಕೆ ಬಂದರೆ ಇಲ್ಲಿ ಕೋತಿಗಳ ಕಾಟ ಹೇಳತೀರದಾಗಿದೆ. ಸಂಬಂಧಿಸಿದವರು ಈ ಬಗ್ಗೆ ಕ್ರಮ ಕೈಗೊಂಡು ಪ್ರವಾಸಿಗರಿಗೆ ಕೋತಿ ಕಾಟದಿಂದ ಮುಕ್ತಿ ಕೊಡಿಸ ಬೇಕೆಂದು ಪ್ರವಾಸಿಗರು ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೇಖಕ ತನ್ನನ್ನು ತಾನು ವಿಮರ್ಶೆಗೊಳಪಡಿಸಿಕೊಳ್ಳಬೇಕು
ಕುಂದಾನಗರಿಯಲ್ಲಿ ಬೆಳಗಾವಿ ಉತ್ಸವ