ಕ್ರೀಯಾಶೀಲತೆಗೆ ಕ್ರೀಡೆ ಸಹಕಾರಿ: ಡಾ.ಪಾಂಡುರಂಗಮೂರ್ತಿ

KannadaprabhaNewsNetwork |  
Published : Sep 15, 2025, 01:00 AM IST
ಚಿತ್ರದುರ್ಗ ಎರಡನೇ ಪುಟದಟಿಂಟ್ ಬಾಟಂ  | Kannada Prabha

ಸಾರಾಂಶ

ಹೊಳಲ್ಕೆರೆ ತಾಲೂಕುಮಟ್ಟದ ಪದವಿ ಪೂರ್ವ ಕಾಲೇಜು ಕ್ರೀಡಾಕೂಟದಲ್ಲಿ ಜಯಸಾಧಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಮಲ್ಲಾಡಿಹಳ್ಳಿ ಅನಾಥ ಆಶ್ರಮ ಕಾಲೇಜಿನ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಹೊಳಲ್ಕೆರೆ

ಕ್ರಿಯಾಶೀಲತೆಗೆ ಆಟೋಟಗಳು ಸಹಕಾರಿಯಾಗುತ್ತವೆ ಎಂದು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ಆಡಳಿತಾಧಿಕಾರಿ ಡಾ.ಜಿ.ಪಾಂಡುಂಗಮೂರ್ತಿ ತಿಳಿಸಿದರು.

ಅನಾಥ ಆಶ್ರಮದ ಆಶ್ರಯದಲ್ಲಿ ನಡೆಯುತ್ತಿರುವ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಸಮಗ್ರ ಪ್ರಶಸ್ತಿ ಪಡೆದ ತಂಡವನ್ನು ಅಭಿನಂದಿಸುವ ಸಂಬಂಧ ಏರ್ಪಡಿಸಲಾದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶಿಸ್ತುಬದ್ಧವಾಗಿರಲು ಮತ್ತು ಕ್ರಿಯಾಶೀಲವಾಗಿರಲು ಸದಾ ಆಟಗಳಲ್ಲಿ ಭಾಗವಹಿಸುವುದು ಮುಖ್ಯವಾಗುತ್ತದೆ ಎಂದರು.

ಇಂದು ಆಟೋಟಗಳಿಂದ ಮಾನಸಿಕ ನೆಮ್ಮದಿ, ಉಲ್ಲಾಸ, ಮನೋರಂಜನೆ ದೊರೆಯುವುದಲ್ಲದೆ ಭವಿಷ್ಯದಲ್ಲಿ ಉದ್ಯೋಗಕ್ಕೂ ಅವಕಾಶ ಸೃಷ್ಟಿಯಾಗುತ್ತದೆ. ಗ್ರಾಮೀಣ ಪ್ರದೇಶದ ಮಕ್ಕಳು ಇದರಿಂದ ವಂಚಿತರಾಗಬಾರದು ಮತ್ತು ಅನಾಥಸೇವಾಶ್ರಮದ ಆಡಳಿತ ಮಂಡಳಿಯು ಕ್ರೀಡಾಚಟುವಟಿಕೆಗಳಿಗೆ ಬೇಕಾಗುವ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಿಕೊಡುತ್ತದೆ. ಸದುಪಯೋಗ ಪಡಿಸಿಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾರ್ಯೋನ್ಮುಖರಾಗಬೇಕೆಂದರು. ಕಾಲೇಜಿನ ಪ್ರಾಚಾರ್ಯ ಜೆ.ಸಿದ್ಧಲಿಂಗಮ್ಮ ಮಾತನಾಡಿ, ಕಾಲೇಜಿನಲ್ಲಿ ಕ್ರೀಡೆಗೆ ಬೇಕಾದ ಪ್ರೋತ್ಸಾಹ, ಕ್ರೀಡೋಪಕರಣಗಳಿವೆ. ನುರಿತ ದೈಹಿಕ ಶಿಕ್ಷಣ ಉಪನ್ಯಾಸಕರ ಜೊತೆಯಲ್ಲಿ ಇತರೆ ಉಪನ್ಯಾಸಕರ ಸದಾ ಪ್ರೋತ್ಸಾಹ ದೊರೆಯುತ್ತಿರುವುದರಿಂದ ಇಂದು ತಾಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಸಮಗ್ರ ಪ್ರಶಸ್ತಿ ಗಳಿಸಲು ಸಾಧ್ಯವಾಗಿದೆ ಎಂದರು.

ಬಾಲಕರ ವಿಭಾಗದ ಕಬಡ್ಡಿ, ಬಾಲ್ ಬ್ಯಾಡ್ಮಿಂಟನ್, ಹ್ಯಾಂಡ್ ಬಾಲ್‌ನಲ್ಲಿ ಪ್ರಥಮ ಸ್ಥಾನಗಳನ್ನು 100ಮೀ, ಹರ್ಡಲ್ಸ್, ವಾಕ್‌ಅಂಡ್ ರೇಸ್, ಗುಡ್ಡಗಾಡು ಓಟದಲ್ಲಿ ಪಡೆದರೆ ಪುಟ್‌ಬಾಲ್, ಯೋಗ ಮತ್ತು ಷಟಲ್‌ನಲ್ಲಿ ದ್ವಿತೀಯ ಸ್ಥಾನಗಳನ್ನು ಪಡೆದುಕೊಳ್ಳಲಾಗಿದೆ. ಅಲ್ಲದೆ ಬಾಲಕೀಯರ ವಿಭಾಗದಲ್ಲಿ ಖೋಖೋ, ವಾಲಿಬಾಲ್, ಯೋಗ, 15೦೦ಮೀ ಓಟ, ಗುಡ್ಡಗಾಡು ಓಟ ಕಬಡ್ಡಿಯಲ್ಲಿ ಪ್ರಥಮಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದರು. ದೈಹಿಕ ಶಿಕ್ಷಣ ಉಪನ್ಯಾಸಕ ಎಚ್.ಶೇಷಪ್ಪ, ಹಿರಿಯ ಉಪನ್ಯಾಸಕರಾದ ಉಮೇಶ್ ರಾಂಪುರ, ಬಸವರಾಜ್, ಕೆ.ವೀರಣ್ಣ, ರಾಕೇಶ್, ಪ್ರಸನ್ನಕುಮಾರ್, ಶಿವಲಿಂಗಪ್ಪ, ಎನ್ ಸಿಸಿ ಅಧಿಕಾರಿ ಎಚ್.ಟಿ.ರಮೇಶ್, ಅರ್ಥಶಾಸ್ತ್ರ ವಿಭಾಗದ ರಾಣಿ ಉಪಸ್ಥಿತರಿದ್ದರು.

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ