ಪ್ರಜಾಪ್ರಭುತ್ವದಲ್ಲಿ ಜಾಗೃತಿ ಎಂಬದು ನಿರಂತರ ಜವಾಬ್ದಾರಿ

KannadaprabhaNewsNetwork |  
Published : Sep 15, 2025, 01:00 AM IST
32 | Kannada Prabha

ಸಾರಾಂಶ

ಸಾರ್ವತ್ರಿಕ ಮತದಾನದ ಹಕ್ಕು’ ನಮ್ಮ ಸ್ವಾತಂತ್ರ್ಯ ಹೋರಾಟದ ಮುಖ್ಯ ತತ್ವಗಳಲ್ಲಿ ಒಂದಾಗಿತ್ತು

ಕನ್ನಡಪ್ರಭ ವಾರ್ತೆ ಮೈಸೂರು

ಬುದ್ಧನ ಕಾಲದಿಂದಲೂ ಗಣಗಳ ರೂಪದಲ್ಲಿ ಅಲ್ಲಲ್ಲಿ ಅಸ್ತಿತ್ವದಲ್ಲಿದ್ದ ಪ್ರಜಾಪ್ರಭುತ್ವದ ಸಂವಾದದ ಮಾದರಿಗಳು, ಕ್ರಮೇಣ ಒಂದು ದೊಡ್ಡ ವ್ಯವಸ್ಥೆಯಾಗಿ ವ್ಯಾಪಿಸಿದವು.

ಜನ ಸಾಮಾನ್ಯರನ್ನು ಕೇಳಿಸಿಕೊಳ್ಳುವುದು, ಅವರೊಂದಿಗೆ ಸಂವಾದ ಮಾಡುವುದು ಒಂದು ವಿಧವಾದರೆ, ಕ್ರಮೇಣ ರಾಜಕೀಯ ವ್ಯವಸ್ಥೆಯಲ್ಲಿ ಜನರ ಪ್ರಾತಿನಿಧ್ಯ, ಕಾನೂನು ರೂಪಿಸುವಲ್ಲಿ ಅವರ ಪಾತ್ರ ಮತ್ತು ಇನ್ನಿತರೆ ವಿಧಾನಗಳಲ್ಲಿ ಅವರ ಭಾಗವಹಿಸುವಿಕೆಯ ಕುರಿತು ಜಾರಿಗೊಂಡ ಪ್ರಾಯೋಗಿಕ ಅಂಶಗಳೂ ಇಲ್ಲಿ ಮುಖ್ಯ ಎನಿಸಿವೆ ಎಂದಿದ್ದಾರೆ.

ಸಾರ್ವತ್ರಿಕ ಮತದಾನದ ಹಕ್ಕು’ ನಮ್ಮ ಸ್ವಾತಂತ್ರ್ಯ ಹೋರಾಟದ ಮುಖ್ಯ ತತ್ವಗಳಲ್ಲಿ ಒಂದಾಗಿತ್ತು. 1928ರಲ್ಲಿ ಮೋತಿಲಾಲ್ ನೆಹರೂ ವರದಿಯನ್ವಯ ಅದು ರೂಪಿತವಾಗಿತ್ತು. 1929ರಲ್ಲಿ ‘ಪೂರ್ಣ ಸ್ವರಾಜ್’ ಘೋಷಣೆಯಾದಾಗಲೂ ಅದನ್ನೇ ಪುನರುಚ್ಚರಿಸಲಾಗಿತ್ತು. ಸಂವಿಧಾನವು ವಯಸ್ಕರ ಮತದಾನ ತತ್ವವನ್ನು 326ನೇ ವಿಧಿಯಲ್ಲಿ ಸೇರಿಸಿತು. 21 ವರ್ಷ ದಾಟಿದ ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಮತದಾರನಾಗಿ ನೋಂದಾಯಿಸಿಕೊಳ್ಳುವ ಹಕ್ಕು ಇದೆ ಎನ್ನುವುದನ್ನು ಅದು ಪ್ರತಿಪಾದಿಸಿತು. ಭಾರತದ ಪೌರತ್ವವು ಜನನ ಹಾಗೂ ವಾಸಸ್ಥಾನದ ಆಧಾರದ ಮೇಲೆ (ವಂಶದ ಹಿನ್ನೆಲೆ ಅಥವಾ ಜನಾಂಗದ ಆಧಾರದ ಮೇಲೆ ಅಲ್ಲ) ನಿರ್ಧಾರವಾಗುತ್ತದೆ ಎಂದು ಸಂವಿಧಾನದ 5ನೇ ವಿಧಿ ಒತ್ತಿ ಹೇಳಿದೆ. ಪೌರತ್ವ ಮುಂದುವರಿಸಿಕೊಂಡು ಹೋಗುವ ಹಾಗೂ ಅದನ್ನು ರಕ್ಷಿಸುವ ಕಾರ್ಯವನ್ನು 10ನೇ ವಿಧಿ ಮಾಡುತ್ತದೆ. ಅದರಂತೆ, ಭಾರತದ ಪ್ರತಿ ನಾಗರಿಕ ಅಥವಾ ಹಾಗೆ ಪರಿಗಣಿತವಾಗಿರುವ ವ್ಯಕ್ತಿ ಅದೇ ಸ್ಥಿತಿಯಲ್ಲಿ ಮುಂದುವರಿಯುತ್ತಾನೆ.

ಮತದಾರರ ಪಟ್ಟಿಗೆ ಜನರು ತಾವೇ ಹೆಸರು ನೋಂದಾಯಿಸುವ ಅವಕಾಶ ನಮ್ಮಲ್ಲಿ ಇದೆಯಾದರೂ, ತಾತ್ವಿಕವಾಗಿ ಅದರ ಹೊಣೆಗಾರಿಕೆ ಚುನಾವಣಾ ಅಧಿಕಾರಿಗಳ ಮೇಲಿದೆ (ಈಗ ಬೂತ್ ಮಟ್ಟದ ಅಧಿಕಾರಿ– ಬಿಎಲ್ಒ ಹಾಗೂ ಚುನಾವಣಾ ನೋಂದಣಾ ಅಧಿಕಾರಿ– ಇಆರ್‌ಒ). ಪ್ರತಿ ವಯಸ್ಕ ನಿವಾಸಿಯನ್ನು ಸಂಪರ್ಕಿಸಿ, ಅರ್ಹರು ಮತದಾರರ ಪಟ್ಟಿಯಿಂದ ಹೊರಗೆ ಉಳಿಯದಂತೆ ಮಾಡುವುದು ಅವರ ಹೊಣೆ ಆಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ ಭಾರತದಲ್ಲಿ ನನ್ನ ಮತ ನನ್ನ ಹಕ್ಕು ಎಂಬ ವಾಕ್ಯವು ಮತದಾನದ ಹಕ್ಕಿನ ಜೊತೆಗೆ ಜನರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅಸ್ತಿತವವನ್ನೂ ಸಹ ನಿರ್ಧರಿಸುತ್ತದೆ. ಇನ್ನು ಸ್ವಾತಂತ್ರ್ಯದ ಆಶಯಗಳಾದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಅಂಶಗಳನ್ನು ಒಳಗೊಂಡ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವ ರೀತಿಯ ಆರೋಗ್ಯಕರ ಅಂಶಗಳು ಇರಬೇಕು, ಅದರ ಇರುವಿಕೆಯ ಪ್ರಾಮುಖ್ಯತೆಯನ್ನು ಜನ ಜನಿತ ಮಾಡಲು ನಮ್ಮ ಸರ್ಕಾರವು ಕಳೆದ 2 ವರ್ಷಗಳಿಂದಲೂ ಗಂಭೀರವಾದ ಪ್ರಯತ್ನ ನಡೆಸುತ್ತಿದ್ದು, ಈ ನಿಟ್ಟಿನಲ್ಲಿ ಹಲವು ಚಟುವಟಿಕೆಯನ್ನು ಕೈಗೊಂಡಿದೆ.

ಹೀಗಾಗಿ ಈ ಬಾರಿಯ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನದ ನೆಪದಲ್ಲಿ ನಾವೆಲ್ಲರೂ ನಮ್ಮ ಹಕ್ಕಿನ ಪ್ರಜ್ಞೆಯ ಜೊತೆ ಪ್ರಜಾಪ್ರಭುತ್ವದ ಆಧಾರ ಸ್ತಂಭಗಳನ್ನು ಕಾಪಾಡುವ ಪ್ರತಿಜ್ಞೆ ಕೈಗೊಳ್ಳೋಣ ಮತ್ತು ನನ್ನ ಮತ ನನ್ನ ಹಕ್ಕು ಕಾರ್ಯಕ್ರಮದಲ್ಲಿ ಭಾಗವಹಿಸೋಣ ಎಂದು ಅವರು ಕರೆ ನೀಡಿದ್ದಾರೆ.

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ