ಪರಿಸರ ಪ್ರೇಮಿಗಳು, ನೈಜ ಸಂಶೋಧಕರು ಸೇರಿದಂತೆ ಎಲ್ಲರಿಗೂ ಇಂದಿನ ಕಾಲದಲ್ಲಿ ಚಾರಣ ಮಾಡುವುದು ದುಬಾರಿ ಆಗುತ್ತಿದೆ ಎಂದು ‘ಅಂತಾರಾಷ್ಟ್ರೀಯ ಪರ್ವತ ದಿನಾಚರಣೆ’ ಕಾರ್ಯಕ್ರಮದಲ್ಲಿ ಪ್ರೊ.ಎಂ.ಕೆ. ಶ್ರೀಧರ್ ಅಭಿಪ್ರಾಯಪಟ್ಟರು.

 ಬೆಂಗಳೂರು : ಪರಿಸರ ಪ್ರೇಮಿಗಳು, ನೈಜ ಸಂಶೋಧಕರು ಸೇರಿದಂತೆ ಎಲ್ಲರಿಗೂ ಇಂದಿನ ಕಾಲದಲ್ಲಿ ಚಾರಣ ಮಾಡುವುದು ದುಬಾರಿ ಆಗುತ್ತಿದೆ ಎಂದು ಪ್ರೊ.ಎಂ.ಕೆ. ಶ್ರೀಧರ್ ಅಭಿಪ್ರಾಯಪಟ್ಟರು.

ಅಂತಾರಾಷ್ಟ್ರೀಯ ಪರ್ವತ ದಿನಾಚರಣೆ

ಶನಿವಾರ ನಗರದ ಲಾಲ್ ಬಹದ್ದೂರ್ ಮೌಂಟೆನೀಯರಿಂಗ್ ಇನ್ಸ್‌ಟಿಟ್ಯೂಟ್ ಆಯೋಜಿಸಿದ್ದ ‘ಅಂತಾರಾಷ್ಟ್ರೀಯ ಪರ್ವತ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆ, ಅಧ್ಯಯನ ಉದ್ದೇಶಗಳ ಜೊತೆಗೆ ಹವ್ಯಾಸಕ್ಕಾಗಿಯೂ ಚಾರಣ ಮಾಡಲಾಗುತ್ತದೆ. ಪರಿಸರದ ನೈಜ ಅನುಭವದಿಂದ ಪರಿಸರ ಕಾಳಜಿ ಮೂಡುತ್ತದೆ. ಹಿಮಾಲಯದ ತುದಿ ಮೌಂಟ್ ಎವರೆಸ್ಟ್ ಚಾರಣದ ಶುಲ್ಕ ಅತ್ಯಂತ ದುಬಾರಿ ಎನಿಸುತ್ತದೆ. ರಾಜ್ಯದಲ್ಲೇ ಕುದುರೆಮುಖ ಸೇರಿದಂತೆ ಅನೇಕ ಆಕರ್ಷಕ ತಾಣಗಳಿವೆ. ಸುಸ್ಥಿರ ಚಾರಣಗಳನ್ನು ಆಯೋಜಿಸಲು ಅವಕಾಶಗಳು ಇವೆ ಎಂದು ಹೇಳಿದರು.

ಪಶ್ಚಿಮ ಘಟ್ಟಗಳು ನಮ್ಮ ರಾಜ್ಯ, ದೇಶಕ್ಕೆ ಅತ್ಯಂತ ಅಮೂಲ್ಯ

ಇನ್ಸ್‌ಟಿಟ್ಯೂಟ್‌ನ ಡಾ.ಬಿ.ಆರ್. ರಾಮಚಂದ್ರರಾವ್ ಕಾಳೆ ಮಾತನಾಡಿ, ಪಶ್ಚಿಮ ಘಟ್ಟಗಳು ನಮ್ಮ ರಾಜ್ಯ, ದೇಶಕ್ಕೆ ಅತ್ಯಂತ ಅಮೂಲ್ಯವಾದ, ಮುಖ್ಯವಾದ ನೈಸರ್ಗಿಕ ಉಡುಗೊರೆಯಾಗಿದೆ. ಆದರೆ, ಇತ್ತೀಚೆಗೆ ಗಣಿಗಾರಿಕೆ, ಅರಣ್ಯ ನಾಶದಿಂದ ಅಪಾಯವನ್ನು ಎದುರಿಸುತ್ತಿದೆ. ಮುಂದಿನ ತಲೆಮಾರಿಗೆ ಜೀವನಯೋಗ್ಯ ಪರಿಸರ ಉಳಿಸಲು ಈ ಘಟ್ಟ ಪ್ರದೇಶವನ್ನು ಸುರಕ್ಷಿತವಾಗಿ ಕಾಪಾಡುವ ಅವಶ್ಯಕತೆ ಇದೆ ಎಂದು ಹೇಳಿದರು.