ಹೊಸಕೋಟೆ: ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ ಹೊಸಕೋಟೆ ಸರ್ಕಲ್‌ನ ಅಧ್ಯಕ್ಷರಾಗಿ ನಗರದ ಶ್ರೀನಿವಾಸ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ನಾಗರಾಜ್, ಕಾರ್ಯದರ್ಶಿಯಾಗಿ ಜಿ.ಎಂ.ಸೋಮಶೇಖರ್ ಆಯ್ಕೆಯಾಗಿದ್ದಾರೆ.

ಹೊಸಕೋಟೆ ಸರ್ಕಲ್ ನೂತನ ಅಧ್ಯಕ್ಷ ಡಾ.ಕೆ ನಾಗರಾಜ್ ಮಾತನಾಡಿ, ಒಕ್ಕಲಿಗರು ಜಮೀನುಗಳನ್ನು ಮಾರಾಟ ಮಾಡಬೇಡಿ. ಒಕ್ಕಲಿಗ ಸಮುದಾಯ ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಬೆಳೆಯಲು ಆರ್ಥಿಕ ಮಟ್ಟ ಸುಧಾರಿಸಿಕೊಳ್ಳುವುದು ಮುಖ್ಯ. ಉದ್ಯಮಗಳನ್ನು ಸ್ಥಾಪಿಸಿ ಸಮುದಾಯವನ್ನು ಬೆಳೆಸಬೇಕು ಎಂದರು.

ರಾಜ್ಯ ಫಸ್ಟ್ ಸರ್ಕಲ್ ಚೀಪ್ ಮೆಂಟರ್ ಜಯರಾಮ್ ರಾಯಪುರ ಮಾತನಾಡಿ, ಈಗಾಗಲೆ ರಾಜ್ಯದಲ್ಲಿ 17 ಸರ್ಕಲ್ ಮಾಡಲಾಗಿದ್ದು, ಮೈಸೂರಿನಲ್ಲೆ ನಾಲ್ಕು ಸರ್ಕಲ್‌ಗಳಿವೆ. ಮಹಿಳೆಯರು ಕೂಡ ಒಂದು ಪ್ರತ್ಯೇಕ ಸರ್ಕಲ್ ಮಾಡಿಕೊಂಡು ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಹೊಸಕೋಟೆ ಸರ್ಕಲ್ ಕೂಡ ಮಾದರಿಯಾಗಿ ಕೆಲಸ ಮಾಡಬೇಕು ಎಂದರು.

ರಿಯಲ್ ಎಸ್ಟೇಟ್ ವಿಭಾಗಕ್ಕೆ ಶಂಕರ್ ನಾರಾಯಣ್, ಕೃಷ್ಣಮೂರ್ತಿ, ರಾಜಣ್ಣ, ಆರೋಗ್ಯ ವಿಭಾಗಕ್ಕೆ ಗುರು ಪ್ರಸಾದ್, ಪ್ರಶಾಂತ್, ಶಿಕ್ಷಣ ವಿಭಾಗಕ್ಕೆ ದೇವರಾಜ್, ರಾಮನಾಥ್, ಹಾರ್ಡ್ವುಡ್ ಮತು ಪೇಂಟ್ ವಿಭಾಗಕ್ಕೆ ರಘು, ನಟರಾಜ್, ಅಗ್ರಿಟೆಕ್ ವಿಭಾಗಕ್ಕೆ ವೆಂಕಟರಮಣಪ್ಪ, ರಮೇಶ್, ಚಂದ್ರಶೇಖರ್, ನಾರಾಯಣಸ್ವಾಮಿ, ವುಮೆನ್ ಎಂಟ್ರೆಪ್ರೆನರ್ ವಿಭಾಗಕ್ಕೆ ಪುನಿತಾ ರಾಜಶೇಖರ್, ಈವೆಂಟ್ ಮ್ಯಾನೆಜ್‌ಮೆಂಟ್‌ಗೆ ಬಚ್ಚಣ್ಣ, ಪೌಲ್ಟಿçಗೆ ರಾಜಶೇಖರ್, ಎಂಎಸ್‌ಎಫ್‌ಇಗೆ ವೆಂಕಟೇಶಪ್ಪ, ವೆಂಕಟೇಶ್, ಕಾನೂನು ವಿಭಾಗಕ್ಕೆ ಸುಬ್ರಮಣಿ, ಫುಡ್ ಅಂಡ್ ಹಾಸ್ಪಿಟಾಲಿಟಿ ರಾಜೇಶ್, ಹೋಟೆಲ್ ಇಂಡಸ್ಟಿçಗೆ ಸೋಮಶೇಖರ್, ಜಯಂತ್, ಮೀಡಿಯಾ ಮುನಾಂಜಿ, ಶಿವಾರೆಡ್ಡಿ, ತಾಲೂಕು ಸಂಚಾಲಕರಾಗಿ ಸೊಣ್ಣೇಗೌಡ, ಸೋಷಿಯಲ್ ಆರ್ಗನೈಸೇಷನ್‌ಗೆ ಹರೀಶ್, ಅನೂಪ್‌ಗೌಡ ಅವರನ್ನು ಪಧಾಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು.

ಶಾಸಕ ಶರತ್ ಬಚ್ಚೇಗೌಡ, ರಾಜ್ಯಾಧ್ಯಕ್ಷ ಮುನಿರಾಜು, ಜಿಲ್ಲಾಧ್ಯಕ್ಷ ನಟರಾಜ್ ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದರು.


ಫೋಟೋ: 16 ಹೆಚಎಸ್‌ಕೆ 3

ಹೊಸಕೋಟೆಯಲ್ಲಿ ಎಫ್‌ಸಿ-ಫಸ್ಟ್ ಉದ್ಯಮಿ ಒಕ್ಕಲಿಗ ಹೊಸಕೋಟೆ ಸರ್ಕಲ್‌ಗೆ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳನ್ನು ಶಾಸಕ ಶರತ್ ಬಚ್ಚೇಗೌಡ, ರಾಜ್ಯ ಫಸ್ಟ್ ಸರ್ಕಲ್ ಚೀಪ್ ಮೆಂಟರ್ ಜಯರಾಮ್ ರಾಯಪುರ ಅಭಿನಂದಿಸಿದರು.