ನಾರಾಯಣ ಗುರುಗಳ ಆದರ್ಶ ಅಳವಡಿಸಿಕೊಳ್ಳಿ: ಹಾಲಪ್ಪ ಆಚಾರ

KannadaprabhaNewsNetwork |  
Published : Sep 19, 2024, 01:58 AM IST
೧೬ವೈಎಲ್‌ಬಿ೧:ಯಲಬುರ್ಗಾದ ಬುದ್ದ ಬಸವ ಅಂಬೇಡ್ಕರ ಭವನದಲ್ಲಿ ಸೋಮವಾರ ಹಮ್ಮಿಕೊಂಡ ಜಗದ್ಗುರು ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮ ಜರುಗಿತು. | Kannada Prabha

ಸಾರಾಂಶ

ಮಹಾನ್‌ ಪುರುಷರು, ಶ್ರೇಷ್ಠ ಸಂತರು, ವೈದ್ಯರು, ಸಂಸ್ಕೃತ ಪಂಡಿತರೂ ಆದ ಶ್ರೀನಾರಾಯಣ ಗುರುಗಳ ಸೇವೆ ಸಮಾಜಕ್ಕೆ ಅಪಾರವಾಗಿದೆ.

ಬ್ರಹ್ಮಶ್ರೀ ಶ್ರೀ ನಾರಾಯಣ ಗುರುಗಳ ಜಯಂತ್ಯುತ್ಸವ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಮಹಾನ್‌ ಪುರುಷರು, ಶ್ರೇಷ್ಠ ಸಂತರು, ವೈದ್ಯರು, ಸಂಸ್ಕೃತ ಪಂಡಿತರೂ ಆದ ಶ್ರೀನಾರಾಯಣ ಗುರುಗಳ ಸೇವೆ ಸಮಾಜಕ್ಕೆ ಅಪಾರವಾಗಿದೆ. ಇವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಾಜಿ ಸಚಿವ ಹಾಲಪ್ಪ ಆಚಾರ ಹೇಳಿದರು.

ಪಟ್ಟಣದ ಬುದ್ಧ, ಬಸವ, ಅಂಬೇಡ್ಕರ್ ಭವನದಲ್ಲಿ ತಾಲೂಕು ಆರ್ಯ ಈಡಿಗ ಸಮಾಜ ವತಿಯಿಂದ ಆಯೋಜಿಸಿದ್ದ ಬ್ರಹ್ಮಶ್ರೀ ಶ್ರೀ ನಾರಾಯಣ ಗುರುಗಳ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಬಹುಜನರ ಉದ್ದಾರಕ್ಕಾಗಿ ತಮ್ಮ ಜೀವನ ಮುಡುಪಾಗಿಟ್ಟ ನಾರಾಯಣ ಗುರುಗಳವರು ಪರಿಶ್ರಮ ಎಂದೂ ಮರೆಯಲು ಸಾಧ್ಯವಿಲ್ಲ. ಎಲ್ಲ ಸಮಾಜದ ಅಭಿವೃದ್ಧಿಗೆ ಶಿಕ್ಷಣವೊಂದೇ ರಾಮಬಾಣವಾಗಿದೆ ಎಂದರು.

ಸಮಾಜದಲ್ಲಿನ ಜಾತ್ಯತೀತ, ಅಸ್ಪೃಶ್ಯತೆ ಹೋಗಲಾಡಿಸಿ ಉನ್ನತ ಶಿಕ್ಷಣ ಹಾಗೂ ಒಗ್ಗಟ್ಟಿನಿಂದ ಉತ್ತಮ ದೇಶ ಕಟ್ಟುವುದಕ್ಕಾಗಿ ಶ್ರೀ ನಾರಾಯಣ ಗುರೂಜಿಯವರು ಜನರಲ್ಲಿ ಜಾಗೃತಿ ಮೂಡಿಸಿದರು. ಜೊತೆಗೆ ಮಲಯಾಳಂ ಭಾಷೆಯಲ್ಲಿ ಆಧ್ಯಾತ್ಮ ವಿಷಯಗಳ ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ ಎಂದು ಹೇಳಿದರು.

ಶಿವಮೊಗ್ಗ ಜಿಲ್ಲೆಯ ತಿರ್ಥಹಳ್ಳಿಯ ರೇಣುಕಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕಾಂಗ್ರೆಸ್ ತಾಲೂಕಾಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಬಿಜೆಪಿ ವಕ್ತಾರ ವೀರಣ್ಣ ಹುಬ್ಬಳ್ಳಿ ಹಾಗೂ ವೀರನಗೌಡ ಬಳೂಟಗಿ ಮಾತನಾಡಿದರು. ತಾಪಂ ಮಾಜಿ ಸದಸ್ಯ ಶರಣಪ್ಪ ಈಳಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕಾ ಈಡಿಗ ಸಮಾಜಾಧ್ಯಕ್ಷ ಮಂಜುನಾಥ ಈಳಿಗೇರ ಅಧ್ಯಕ್ಷತೆ ವಹಿಸಿದ್ದರು.

ಅತಿಥಿಗಳಾಗಿ ಉದ್ಯಮಿಗಳಾದ ಪ್ರದೀಪ್, ಮಹಾಂತೇಶ ಹಾನಗಲ್, ರಾಜಪ್ಪ ಈಳಗೇರ, ವೀರೇಶ ಈಳಗೇರ, ಅಮರೇಶ ಹುಬ್ಬಳ್ಳಿ, ಸುರೇಶ ಈಳಗೇರ, ಆನಂದ ಗುತ್ತೆದಾರ, ಆನಂದ ಈಳಗೇರ, ಕಾಶಿವಿಶ್ವನಾಥ ಕಾರಟಗಿ, ಶ್ರೀನಿವಾಸ ಈಳಿಗೇರ, ಬಸವರಾಜ ಈಳಗೇರ ಸಮಾಜದ ನಾನಾ ತಾಲೂಕುಗಳ ಪದಾಧಿಕಾರಿಗಳು, ಮುಖಂಡರು, ಮಹಿಳೆಯರು, ಯುವಕರು ಇದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ