ಜೀವನದಲ್ಲಿ ವಾಲ್ಮೀಕಿ ಆದರ್ಶ ಅಳವಡಿಸಿಕೊಳ್ಳಿ: ಫಕೀರ ದಿಂಗಾಲೇಶ್ವರ ಶ್ರೀ

KannadaprabhaNewsNetwork |  
Published : Nov 13, 2026, 02:30 AM IST
ಫಕೀರ ದಿಂಗಾಲೇಶ್ವರ ಶ್ರೀಗಳು ಕಾರ್ಯಕ್ರಮ ಉದ್ಘಾಟಿಸಿದರು. | Kannada Prabha

ಸಾರಾಂಶ

ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಕೇವಲ ಮಹಾಕಾವ್ಯವಲ್ಲ, ಅದು ಮಾನವೀಯ ಮೌಲ್ಯಗಳು, ಸತ್ಯ, ಧರ್ಮ, ನ್ಯಾಯ, ತ್ಯಾಗ ಹಾಗೂ ಆದರ್ಶ ಜೀವನದ ಮಾರ್ಗದರ್ಶಿಯಾಗಿದೆ.

ಕನ್ನಡಪ್ರಭ ವಾರ್ತೆ ಶಿರಹಟ್ಟಿಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಕೇವಲ ಮಹಾಕಾವ್ಯವಲ್ಲ, ಅದು ಮಾನವೀಯ ಮೌಲ್ಯಗಳು, ಸತ್ಯ, ಧರ್ಮ, ನ್ಯಾಯ, ತ್ಯಾಗ ಹಾಗೂ ಆದರ್ಶ ಜೀವನದ ಮಾರ್ಗದರ್ಶಿಯಾಗಿದೆ. ಮಹರ್ಷಿ ವಾಲ್ಮೀಕಿ ಅವರ ಆದರ್ಶ ಮತ್ತು ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಫಕೀರೇಶ್ವರ ಮಠದ ಉತ್ತರಾಧಿಕಾರಿ ಶ್ರೀ ಫಕೀರ ದಿಂಗಾಲೇಶ್ವರ ಶ್ರೀಗಳು ಕರೆ ನೀಡಿದರು.ತಾಲೂಕಾ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘ, ವಾಲ್ಮೀಕಿ ಯುವ ಘಟಕ, ಶಹರ ಘಟಕದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಸಾನಿದ್ಯ ವಹಿಸಿ ಆಶೀರ್ವಚನ ನೀಡಿದರು. ಮಹರ್ಷಿ ವಾಲ್ಮೀಕಿ ತಮ್ಮ ಜ್ಞಾನ, ತಪಸ್ಸು ಹಾಗೂ ಸಾಹಿತ್ಯದ ಮೂಲಕ ಇಡೀ ಜಗತ್ತಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರ ಜೀವನವೇ ಪರಿವರ್ತನೆಗೆ ಸಾಕ್ಷಿಯಾಗಿದೆ. ವ್ಯಕ್ತಿಯ ಹಿನ್ನೆಲೆ, ಜಾತಿ ಅಥವಾ ಬಡತನಕ್ಕಿಂತ ಆತನಲ್ಲಿರುವ ಜ್ಞಾನ, ಗುಣ, ನಡತೆ ಮತ್ತು ಸಾಧನೆ ಮುಖ್ಯ ಎಂಬುದನ್ನು ವಾಲ್ಮೀಕಿ ಅವರ ಬದುಕು ಸಾರುತ್ತದೆ ಎಂದರು.ರಾಮಾಯಣದಲ್ಲಿನ ಶ್ರೀರಾಮನ ಆದರ್ಶ ಗುಣಗಳು, ಸೀತೆಯ ತಾಳ್ಮೆ, ಲಕ್ಷ್ಮಣನ ಸಹೋದರ ಪ್ರೀತಿ ಹಾಗೂ ಹನುಮಂತನ ಸೇವಾ ಮನೋಭಾವ ಪ್ರತಿಯೊಬ್ಬರಿಗೂ ಜೀವನದ ಪಾಠವಾಗಿವೆ. ಇಂದಿನ ಸಮಾಜದಲ್ಲಿ ಮಾನವೀಯತೆ, ಸಹೋದರತ್ವ, ಪರಸ್ಪರ ಗೌರವ ಮತ್ತು ಸಾಮರಸ್ಯದ ಮನೋಭಾವ ಬೆಳೆಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.ಮಹರ್ಷಿ ವಾಲ್ಮೀಕಿ ಅವರ ಸಂದೇಶಗಳು ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗಿರದೆ ಸರ್ವ ಸಮಾಜದ ಜನರಿಗೂ ದಾರಿದೀಪವಾಗಿವೆ. ಯುವಜನರು ದುಶ್ಚಟಗಳಿಂದ ದೂರವಿದ್ದು, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ, ಉತ್ತಮ ಸಂಸ್ಕಾರ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಸಾಧನೆಯ ಮೂಲಕ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಗುರುತಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ರಾಜನಹಳ್ಳಿ ವಾಲ್ಮೀಕಿ ಗುರು ಪೀಠದ ಶ್ರೀ ಪ್ರಸನ್ನಾನಂದ ಪುರಿ ಶ್ರೀಗಳು ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರ ಜಯಂತಿಯನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಅವರ ಚಿಂತನೆ ಹಾಗೂ ಆದರ್ಶಗಳನ್ನು ನಮ್ಮ ನಿತ್ಯ ಜೀವನದಲ್ಲಿ ಪಾಲಿಸುವ ಸಂಕಲ್ಪ ಮಾಡಬೇಕು. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಮಾನತೆಯನ್ನು ಬೆಳೆಸುವ ಮೂಲಕ ಮಹರ್ಷಿಗಳ ಆಶಯವನ್ನು ಸಾಕಾರಗೊಳಿಸಬೇಕು ಎಂದು ತಿಳಿಸಿದರು.ವಾಲ್ಮೀಕಿ ಸಮಾಜ ಹಿಂದುಳಿದಿದೆ ಎಂಬ ಕೀಳರಿಮೆ ತೊರೆದು ಸಂಘಟನೆಯೊಂದಿಗೆ ಮುಂದೆ ಬಂದರೆ ವಾಲ್ಮೀಕಿ ಸಮಾಜವು ಅಭಿವೃದ್ದಿಗೊಳ್ಳಲು ಸಾಧ್ಯ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಮುಂದೆ ಬರಬೇಕು ಎಂದರು.

ಸಮಾಜದ ತಾಲೂಕು ಅಧ್ಯಕ್ಷ ಮುತ್ತುರಾಜ ಕುದರಿಮನಿ ಅಧ್ಯಕ್ಷತೆ ವಹಿಸಿದ್ದರು. ಸಣ್ಣವೀರಪ್ಪ ಹಳ್ಳೆಪ್ಪನವರ, ಬಸಣ್ಣ ನಾಯ್ಕರ, ಶಿವನಗೌಡ ಪಾಟೀಲ, ಹುಮಾಯೂನ ಮಾಗಡಿ, ಯಲ್ಲಪ್ಪ ಬಂಗಾರಿ, ಫಕೀರೇಶ ತಳವಾರ, ಮಾರ್ತಂಡಪ್ಪ ಹಾದಿಮನಿ, ಉಮೇಶ ತೇಲಿ, ಮಂಜುನಾಥ ಶಂಕಿನದಾಸರ, ಡಾ. ಪ್ರಕಾಶ ಹೊಸಮನಿ, ರಾಮಣ್ಣ ಕಂಬಳಿ, ಚಂದ್ರು ತಳವಾರ, ಆನಂದ ಕೊಡ್ಲಿ, ರಾಜು ಪುಟ್ಟಪ್ಪ ನಾಯಕ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಗುಲಾಬಿ ಮೆಟ್ರೋ ಮಾರ್ಗ ಉದ್ಘಾಟನೆ
ಚಲ್ಲಘಟ್ಟ ಮೆಟ್ರೋ ಡಿಪೋ ಬಳಿ ಅಂಡರ್‌ಪಾಸ್‌