ವಾಜಪೇಯಿ ಆದರ್ಶ ಅಳವಡಿಸಿಕೊಳ್ಳಿ: ಕೆ.ಲಕ್ಷ್ಮಣ್

KannadaprabhaNewsNetwork |  
Published : Dec 26, 2024, 01:02 AM IST
ಹರಪನಹಳ್ಳಿಯ ಬಿಜೆಪಿ ಕಚೇರಿಯಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು. ಮಂಡಲ ಅಧ್ಯಕ್ಷ ಲಕ್ಷ್ಮಣ, ನಂಜನಗೌಡ, ಎಂ.ಶಂಕರ ಇತರರಿದ್ದರು. | Kannada Prabha

ಸಾರಾಂಶ

ವಾಜಪೇಯಿ ಅಜಾತಶತ್ರು. ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಆದ ಚಾಪು ಮೂಡಿಸಿದವರು.

ಹರಪನಹಳ್ಳಿ: ಪಟ್ಟಣದ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆಯನ್ನು ಸ್ಥಳೀಯ ಬಿಜೆಪಿ ಮಂಡಲ್‌ ವತಿಯಿಂದ ಆಚರಿಸಲಾಯಿತು.

ಮಂಡಲ ಅಧ್ಯಕ್ಷ ಕೆ.ಲಕ್ಷ್ಮಣ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಾಜಪೇಯಿ ಅಜಾತಶತ್ರು. ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಆದ ಚಾಪು ಮೂಡಿಸಿದವರು. ಇವರ ನಾಯಕತ್ವದಿಂದ ಪಕ್ಷ ಈ ಮಟ್ಟಕ್ಕೆ ಬೆಳೆಯಲು ಕಾರಣವಾಯಿತು. ಅವರ ಆದರ್ಶವನ್ನು ಕಾರ್ಯಕರ್ತರು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ರಾಜ್ಯ ಸೌಹಾರ್ದ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಜಿ.ನಂಜನಗೌಡ ಮಾತನಾಡಿ, ಈ ದೇಶ ಕಂಡ ಅಪರೂಪದ ರಾಜಕಾರಣಿ. ಈ ದೇಶವನ್ನು ಆಳಿದ ಕಾಂಗ್ರೆಸ್ಸೇತರ ಪೂರ್ಣಾವಧಿ ಅಧಿಕಾರ ಅನುಭವಿಸಿದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಇವರದ್ದಾಗಿದೆ ಎಂದರು.

ಉತ್ತಮ ಕವಿ, ವಾಗ್ಮಿ ಸಾಹಿತಿ, ಶಾಂತಿ ಸುವ್ಯವಸ್ಥೆಯನ್ನು ಮೈಗೂಡಿಸಿಕೊಂಡು ರಾಷ್ಟ್ರ ರಾಜಕಾರಣದ ಉತ್ತಮ ಪಟು ಆಗಿದ್ದರು ಎಂದು ಬಣ್ಣಿಸಿದರು.

ಮಂಡಲ ಪ್ರಧಾನ ಕಾರ್ಯದರ್ಶಿ ಎ.ಉದಯಕುಮಾರ್ ಮಾತನಾಡಿ, ವಾಜಪೇಯಿ ಬಾಲ್ಯದಲ್ಲಿ ಶಾಲಾ ಶಿಕ್ಷಕರ ಮಗನಾಗಿ ಬಡ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿ ಪ್ರಧಾನಿ ಹುದ್ದೆಗೆ ಏರಿದವರು. ಇವರ ತಂದೆಯವರ ಆಸೆಯಂತೆ ವಕೀಲ ವೃತ್ತಿ ಇಚ್ಛೆ ಇದ್ದರೂ ವಾಜಪೇಯಿ ಅವರು ಸಮಾಜ ಸೇವೆಯ ರಾಜಕಾರಣದ ವೃತ್ತಿಗೆ ಧುಮುಕಿ ವಿಶ್ವ ಮೆಚ್ಚುವ ನಾಯಕರಾದರು ಎಂದು ಹೇಳಿದರು.

ಪೋಕ್ರಾನ್‌ ಅಣ್ವಸ್ತ್ರ ಪ್ರಯೋಗ, ಕಾರ್ಗಿಲ್‌ ಯುದ್ಧ, ರಾಷ್ಟ್ರೀಯ ಹೆದ್ದಾರಿ ಪ್ರಧಾನ ಮಂತ್ರಿ ಸಡಕ್ ಯೋಜನೆ ಸರ್ವ ಶಿಕ್ಷಣ ಅಭಿಯಾನ ಮುಂತಾದ ಯೋಜನೆಗಳನ್ನು ಜಾರಿಗೆ ತಂದರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾರ್ಯಕರ್ತರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣು ಬ್ರೆಡ್ ವಿತರಿಸಿದರು.

ಜಿಲ್ಲಾ ಎಸ್‌ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಣಿವೆಹಳ್ಳಿ ಮಂಜುನಾಥ್, ಮಂಡಲದ ಉಪಾಧ್ಯಕ್ಷ ಮುದುಕವ್ವನವರ ಶಂಕರ್, ಸಹಕಾರ ಸಮಿತಿ ರಾಜ್ಯ ಸದಸ್ಯ ಜೆ.ಓಂಕಾರಗೌಡ, ಪ್ರಧಾನ ಕಾರ್ಯದರ್ಶಿ ಬಿ.ವೈ. ವೆಂಕಟೇಶ್ ನಾಯಕ್, ಮಹಿಳಾ ಮೊರ್ಚಾ ಅಧ್ಯಕ್ಷೆ ಸ್ವಪ್ನ ಮಲ್ಲಿಕಾರ್ಜುನ, ಕೆ.ಮಂಜುಳಾ, ಬದ್ರಿ ನಾರಾಯಣ್ ಮಲ್ಲಿಕಾರ್ಜುನ ಮಟ್ಟಿ, ನಾಗನಂದ್ ಇನ್ನು ಅನೇಕ ಮುಖಂಡರು ಹಾಗೂಕಾರ್ಯಕರ್ತರು ಉಪಸ್ಥಿತರಿದ್ದರು

ಹರಪನಹಳ್ಳಿಯ ಬಿಜೆಪಿ ಕಚೇರಿಯಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು. ಮಂಡಲ ಅಧ್ಯಕ್ಷ ಲಕ್ಷ್ಮಣ, ನಂಜನಗೌಡ, ಎಂ.ಶಂಕರ ಇತರರಿದ್ದರು.

PREV

Recommended Stories

ಗ್ರಾಪಂ ವ್ಯಾಪ್ತಿ ಎಲ್ಲಾ ಆಸ್ತಿ ತೆರಿಗೆಗೆ ನಿಯಮ ಪ್ರಕಟ
ತರಬೇತಿ ನೀಡಿದಾಕ್ಷಣ ಯುವನಿಧಿ ನಿಲ್ಲಲ್ಲ : ಸಿಎಂ