- ವಿಶೇಷ ದತ್ತು ಸಂಸ್ಥೆ ಅಮೂಲ್ಯ ಕೇಂದ್ರ ಘಟಕ ಉದ್ಘಾಟನೆ । 2-3 ತಿಂಗಳಿನ ಐದು ಅನಾಥ ಕೂಸುಗಳಿಗೆ ನಾಮಕರಣ
ಕನ್ನಡಪ್ರಭ ವಾರ್ತೆ ದಾವಣಗೆರೆ
ಹೆತ್ತವಳಿಗೆ ಬೇಡವಾದ ಶಿಶುವನ್ನು ಆಕೆಗಿಂತಲೂ ಮಿಗಿಲಾಗಿ, ಪ್ರೀತಿಯಿಂದ ಆರೈಕೆ ಮಾಡುವ ಮೂಲಕ ದಾವಣಗೆರೆಯ ದತ್ತು ಸ್ವೀಕಾರ ಕೇಂದ್ರ ಮಾದರಿ ಮಾತೃತ್ವದ ಕೆಲಸ ಮಾಡುತ್ತಿದೆ. ಇಂತಹ ಕಡೆ ತಮ್ಮ ಮಕ್ಕಳ ಜನ್ಮದಿನ, ಹೊಸ ವರ್ಷ, ಹಬ್ಬ ಆಚರಿಸುವ ಮೂಲಕ ಇಲ್ಲಿನ ಮಕ್ಕಳನ್ನೂ ಸಂಭ್ರಮದಲ್ಲಿ ಭಾಗಿದಾರರಾಗಿ ಮಾಡಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.ನಗರದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶೇಷ ದತ್ತು ಸಂಸ್ಥೆ ಅಮೂಲ್ಯ(ಜಿ) ಕೇಂದ್ರ ಘಟಕ-2 ಮತ್ತು ಫಿಜಿಯೋಥೆರಪಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು. ಹೆತ್ತ ತಾಯಿಯೂ ಮಾಡದಷ್ಟು ಆರೈಕೆಯನ್ನು ಇಲ್ಲಿ ಮಕ್ಕಳಿಗೆ ಮಾಡುತ್ತಿರುವುದು ಸಂತಸ ತಂದಿದೆ ಎಂದರು.
ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಜಿಪಂ ಸಿಇಒ ಸುರೇಶ ಬಿ. ಇಟ್ನಾಳ, ಜಿಲ್ಲಾ ಸರ್ಜನ್ ಡಾ.ನಾಗೇಂದ್ರಪ್ಪ, ಡಿಎಚ್‌ಒ ಡಾ.ಷಣ್ಮುಖ್ಪ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕವಿತಾ ಸೇರಿದಂತೆ ಅಧಿಕಾರಿ, ಸಿಬ್ಬಂದಿ, ಕೇಂದ್ರದ ಆಯಾಗಳು, ಸಿಬ್ಬಂದಿ, ಮಕ್ಕಳು ಇದ್ದರು.
- 64 ಮಕ್ಕಳು ಸ್ವದೇಶಿ ದಂಪತಿ, 9 ಮಕ್ಕಳು ವಿದೇಶಿ ದಂಪತಿಯಿಂದ ದತ್ತು ಸ್ವೀಕಾರ ನವಜಾತ ಶಿಶುಗಳನ್ನು ಎಷ್ಟೇ ನಿಗಾವಹಿಸಿ ಪೋಷಿಸಿದರೂ ಅನಾರೋಗ್ಯದಿಂದು ಶಿಶುಗಳು ಬಳಲುತ್ತವೆ. ಆದರೆ, ಈ ದತ್ತು ಕೇಂದ್ರದಲ್ಲಿ ಅಷ್ಟೇ ಸುರಕ್ಷಿತವಾಗಿ ಕೂಸುಗಳನ್ನು ಪೋಷಣೆ ಮಾಡಲಾಗುತ್ತದೆ. ಸೊಳ್ಳೆಗಳ ತಡೆಗೆ ಮೆಸ್, ಹೊಸ ತೊಟ್ಟಿಲು, ಮಕ್ಕಳ ಬಟ್ಟೆ ತೊಳೆಯಲು ವಾಷಿಂಗ್ ಮೆಶಿನ್‌ಗಳಿವೆ. ಆಯಾಗಳು ಮಕ್ಕಳನ್ನು ಹೇಗೆ ಪೋಷಿಸುತ್ತಾರೆ. ಅದರ ಮೇಲೆ ನಿಗಾ ವಹಿಸಲು ಸಿಸಿ ಕ್ಯಾಮೆರಾ ಕಣ್ಗಾವಲು ವ್ಯವಸ್ಥೆ ಸಹ ಇಲ್ಲಿದೆ.
ಮಗುವಿನ ಕುರಿತು ಪತ್ರಿಕೆಗಳಿಗೆ ಮಾಹಿತಿ ನೀಡಲಾಗುತ್ತದೆ. ಅನಂತರ ವಾರಸುದಾರರಿಗಾಗಿ 2 ತಿಂಗಳು ಕಾಯಲಾಗುತ್ತದೆ. ಯಾರೂ ಬಾರದಿದ್ದರೆ ಮಕ್ಕಳ ಸಂರಕ್ಷಣಾ ಸಮಿತಿಯಿಂದ ಈ ಮಗು ಅನಾಥ ಎಂಬುದಾಗಿ ಅನುಮತಿ ಪಡೆದು, ದತ್ತು ಸ್ವೀಕಾರ ಕೇಂದ್ರಕ್ಕೆ ಪಡೆಯಲಾಗುತ್ತದೆ. ಬಳಿಕ ಮಗುವಿನ ವಿವರ ಆನ್‌ಲೈನ್‌ಗೆ ಹಾಕಲಾಗುತ್ತದೆ. ಆನ್‌ಲೈನ್‌ನಲ್ಲೇ ದತ್ತು ಪಡೆಯ ಬಯಸುವ ಪೋಷಕರು ಕೂಡ ತಮ್ಮ ಮಾಹಿತಿ ನಮೂದಿಸುತ್ತಾರೆ. ಅನಂತರ ಪೋಷಕರ ಹಿನ್ನೆಲೆ, ಉದ್ದೇಶಗಳ ಬಗ್ಗೆ ತನಿಖೆ ನಡೆಸಲಾಗುತ್ತದೆ. ಎಲ್ಲವೂ ಸರಿ ಕಂಡುಬಂದಲ್ಲಿ ಸಾಕುವ ಪೋಷಕರಿಗೆ ಮಗುವನ್ನು ದತ್ತು ನೀಡಲಾಗುತ್ತದೆ.
- - - -3ಕೆಡಿವಿಜಿ8.ಜೆಪಿಜಿ: ದಾವಣಗೆರೆಯಲ್ಲಿ ವಿಶೇಷ ದತ್ತು ಸಂಸ್ಥೆ ಅಮೂಲ್ಯ(ಜಿ) ಕೇಂದ್ರ ಘಟಕ-2 ಮತ್ತು ಫಿಜಿಯೋಥೆರಪಿ ಕೇಂದ್ರವನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಉದ್ಘಾಟಿಸಿದರು. -3ಕೆಡಿವಿಜಿ9, 10.ಜೆಪಿಜಿ: ದಾವಣಗೆರೆಯಲ್ಲಿ ವಿಶೇಷ ದತ್ತು ಸಂಸ್ಥೆ ಅಮೂಲ್ಯ(ಜಿ) ಕೇಂದ್ರ ಘಟಕ-2 ಮತ್ತು ಫಿಜಿಯೋಥೆರಪಿ ಕೇಂದ್ರ ಉದ್ಘಾಟಿಸಿದರು. ಅನಂತರ ಐದು ಕೂಸುಗಳ ನಾಮಕರಣ ಸಂಭ್ರಮದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಪಾಲ್ಗೊಂಡರು.