ಸೈಕಲ್‌ನಲ್ಲಿ 11 ಜ್ಯೋತಿರ್ಲಿಂಗ ದರ್ಶನ ಮಾಡಿದ ಸಾಹಸಿ

KannadaprabhaNewsNetwork |  
Published : Jan 18, 2024, 02:03 AM IST
ಸೈಕಲ್ ಮೂಲಕ ಜ್ಯೋತಿರ್ಲಿಂಗಗಳ ದರ್ಶನ ಪಡೆದ ಸಸಾಲಟ್ಟಿಯ ಸುರೇಶ! | Kannada Prabha

ಸಾರಾಂಶ

ರಬಕವಿ-ಬನಹಟ್ಟಿ: ಒಬ್ಬಂಟಿಯಾಗಿ ಸೈಕಲ್ ಮೇಲೆ ಬರೋಬ್ಬರಿ 3200 ಕಿ.ಮೀ ಸಂಚರಿಸಿ 11 ಜ್ಯೋತಿರ್ಲಿಂಗಗಳ ದರ್ಶನ ಮಾಡಿ ಅಪರೂಪದ ಸಾಹಸವನ್ನು ಬೆಳಗಾವಿ ಜಿಲ್ಲೆಯ ಪಾಲಬಾಂವಿ ಗ್ರಾಮದ ಸುರೇಶ ಅಲ್ಲಪ್ಪ ಕಡಪಟ್ಟಿ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ತೇರದಾಳ ತಾಲೂಕಿನ ಸಸಾಲಟ್ಟಿ ಗ್ರಾಮದ ಮೂಕಾಂಬಿಕಾ ದೇವಿ ಸನ್ನಿಧಿಯಿಂದ ಮಹಾಲಯ ಅಮಾವಾಸ್ಯೆಗೂ ಸೈಕಲ್ ಯಾತ್ರೆ ಆರಂಭಿಸಿ ಮುಂಬೈ, ನಾಸಿಕ್‌, ಗುಜರಾತ, ರಾಜಸ್ಥಾನ, ಬನಾರಸ್ ಮಾರ್ಗವಾಗಿ ಕಾಶಿ ತಲುಪಿ ಅಲ್ಲಿ ವಿಶ್ವನಾಥನಿಗೆ ಅಭಿಷೇಕ ಮಾಡಿಸಿ ಅಲ್ಲಿಂದ 11 ಜ್ಯೋತಿರ್ಲಿಂಗಗಳ ದರ್ಶನ ಮಾಡಿದ್ದಾರೆ. ಪ್ರಯಾಣದುದ್ದಕ್ಕೂ ದಿನಕ್ಕೆರಡು ಬಾಳೆಹಣ್ಣು ಹಾಗೂ ಒಂದು ಗ್ಲಾಸ್ ಹಾಲು ಸೇವಿಸಿ 45 ದಿನಗಳ ಕಾಲ ಪ್ರತಿದಿನ 180 ಕಿ.ಮೀ ದೂರವನ್ನು ಸೈಕಲ್ ತುಳಿಯುವ ಮೂಲಕ ಕ್ರಮಿಸಿ ಪ್ರಯಾಣ ಮುಗಿಸಿದ್ದಾರೆ.

ಶಿವಾನಂದ ಪಿ.ಮಹಾಬಲಶೆಟ್ಟಿ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಸಾಹಸ ಮಾಡಲು, ಇಲ್ಲವೆ ದೈವಭಕ್ತಿಯಿಂದ ಭಕ್ತರು ಗುಂಪಾಗಿ ನೂರಾರು ಕಿ.ಮೀ ಪಾದಯಾತ್ರೆ ಮಾಡುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬ ಭಕ್ತ ಒಬ್ಬಂಟಿಯಾಗಿ ಸೈಕಲ್ ಮೇಲೆ ಬರೋಬ್ಬರಿ 3200 ಕಿ.ಮೀ ಸಂಚರಿಸಿ 11 ಜ್ಯೋತಿರ್ಲಿಂಗಗಳ ದರ್ಶನ ಮಾಡಿ ಅಪರೂಪದ ಸಾಹಸ ಮಾಡಿದ್ದಾರೆ.

ಬೆಳಗಾವಿ ಜಿಲ್ಲೆಯ ಪಾಲಬಾಂವಿ ಗ್ರಾಮದ ಸುರೇಶ ಅಲ್ಲಪ್ಪ ಕಡಪಟ್ಟಿ ಇಂತಹ ಸಾಹಸ ಮಾಡಿದವರು. ತೇರದಾಳ ತಾಲೂಕಿನ ಸಸಾಲಟ್ಟಿ ಗ್ರಾಮದ ಮೂಕಾಂಬಿಕಾ ದೇವಿ ಸನ್ನಿಧಿಯಿಂದ ಮಹಾಲಯ ಅಮಾವಾಸ್ಯೆಗೂ ಸೈಕಲ್ ಯಾತ್ರೆ ಆರಂಭಿಸಿ ಮುಂಬೈ, ನಾಸಿಕ್‌, ಗುಜರಾತ, ರಾಜಸ್ಥಾನ, ಬನಾರಸ್ ಮಾರ್ಗವಾಗಿ ಕಾಶಿ ತಲುಪಿ ಅಲ್ಲಿ ವಿಶ್ವನಾಥನಿಗೆ ಅಭಿಷೇಕ ಮಾಡಿಸಿ ಅಲ್ಲಿಂದ 11 ಜ್ಯೋತಿರ್ಲಿಂಗಗಳ ದರ್ಶನ ಮಾಡಿದ್ದಾರೆ. ಪಯಣದ ಮಧ್ಯೆ ಉತ್ತರ ಪ್ರದೇಶದ ಆಗ್ರಾದಲ್ಲಿ ಸೈಕಲ್ ಗಾಲಿಯ ಟ್ಯೂಬ್ ಒಡೆದಾಗ ಅಲ್ಲಿನ ಭಕ್ತರೊಬ್ಬರು ಧನಸಹಾಯ ಮಾಡಿ ಹೊಸ ಟ್ಯೂಬ್ ಹಾಕಿಸಿದರಂತೆ. ಪ್ರಯಾಣದುದ್ದಕ್ಕೂ ದಿನಕ್ಕೆರಡು ಬಾಳೆಹಣ್ಣು ಹಾಗೂ ಒಂದು ಗ್ಲಾಸ್ ಹಾಲು ಸೇವಿಸಿ 45 ದಿನಗಳ ಕಾಲ ಪ್ರತಿದಿನ 180 ಕಿ.ಮೀ ದೂರವನ್ನು ಸೈಕಲ್ ತುಳಿಯುವ ಮೂಲಕ ಕ್ರಮಿಸಿ ಪ್ರಯಾಣ ಮುಗಿಸಿದ್ದಾರೆ.

ಕಾಶಿಯಿಂದ ಹೊರಟು ಬದ್ರಿನಾಥ, ಕೇದಾರನಾಥ, ತುಳಜಾಪುರ ಮಾರ್ಗವಾಗಿ ವಿಜಯಪುರಕ್ಕೆ ತಲುಪಿ ಸವೆಸಿದ ಪಯಣದ ದೂರ ಲೆಕ್ಕ ಹಾಕಿದಾಗ ಬರೋಬ್ಬರಿ 3072 ಕಿ.ಮೀ ಆಗಿತ್ತಂತೆ. ಅಲ್ಲಿಂದ ಮರಳಿ ಸಸಾಲಟ್ಟಿಗೆ ಆಗಮಿಸಿ ಮೂಕಾಂಬಿಕಾ ದೇವಿ ದರ್ಶನ ಪಡೆದು ಪಕ್ಕದಲ್ಲಿಯೇ ಇರುವ ಈರಪ್ಪ ಮಳ್ಳನ್ನವರ ಮನೆಯಲ್ಲಿ ಎರಡು ದಿನ ಉಳಿದು ತಮ್ಮ ಮನೆಗೆ ತೆರಳಿದ್ದಾರೆ.

ಮೂಕಾಂಬಿಕಾ ದೇವಿ ದೇವಸ್ಥಾನ ಕಮಿಟಿಯವರು ಕೇಳಿದಾಗ ತನ್ನ ಸಾಹಸ ಪಯಣದ ಬಗ್ಗೆ ಬಾಯ್ಬಿಟ್ಟಿದ್ದಾನೆಯೇ ಹೊರತು ಎಲ್ಲಿಯೂ ಸೈಕಲ್ ಮೇಲೆ 11 ಜ್ಯೋತಿರ್ಲಿಂಗಗಳ ದರ್ಶನ ಮಾಡಿರುವ ಬಗ್ಗೆ ಹೇಳಿಕೊಂಡು ಪ್ರಚಾರ ಪಡೆಯಲು ಬಯಸಿಲ್ಲ.

ಈ ವಿಚಾರ ತಿಳಿದ ಕಮೀಟಿಯವರು ಸಾಹಸಿ ಸುರೇಶನ ಸತ್ಕರಿಸಿದ್ದಾರೆ. ಈ ವೇಳೆ ಬಿ.ಆರ್. ಮುರಾಬಟ್ಟಿ, ಮುತ್ತಪ್ಪ ಹನಗಂಡಿ, ಬಸಪ್ಪ ಮಳ್ಳನ್ನವರ, ಪ್ರಕಾಶ ಮಾನಶೆಟ್ಟಿ, ಮಡೆಪ್ಪ ಪಾಲಬಾಂವಿ, ಅಶೋಕ ಹುಕ್ಕೇರಿ, ಈರಪ್ಪ ಯಾದವಾಡ ಹಾಗೂ ಶಿವಲಿಂಗ ಹನಗಂಡಿ ಸೇರಿದಂತೆ ಹಲವರಿದ್ದರು.ರಬಕವಿ-ಬನಹಟ್ಟಿಸಾಹಸ ಮಾಡಲು, ಇಲ್ಲವೆ ದೈವಭಕ್ತಿಯಿಂದ ಭಕ್ತರು ಗುಂಪಾಗಿ ನೂರಾರು ಕಿ.ಮೀ ಪಾದಯಾತ್ರೆ ಮಾಡುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬ ಭಕ್ತ ಒಬ್ಬಂಟಿಯಾಗಿ ಸೈಕಲ್ ಮೇಲೆ ಬರೋಬ್ಬರಿ 3200 ಕಿ.ಮೀ ಸಂಚರಿಸಿ 11 ಜ್ಯೋತಿರ್ಲಿಂಗಗಳ ದರ್ಶನ ಮಾಡಿ ಅಪರೂಪದ ಸಾಹಸ ಮಾಡಿ ಭೇಷ್‌ ಎನಿಸಿಕೊಂಡಿದ್ದಾನೆ.

ಬೆಳಗಾವಿ ಜಿಲ್ಲೆಯ ಪಾಲಬಾಂವಿ ಗ್ರಾಮದ ಸುರೇಶ ಅಲ್ಲಪ್ಪ ಕಡಪಟ್ಟಿ ಇಂತಹ ಸಾಹಸ ಮಾಡಿದವರು. ತೇರದಾಳ ತಾಲೂಕಿನ ಸಸಾಲಟ್ಟಿ ಗ್ರಾಮದ ಮೂಕಾಂಬಿಕಾ ದೇವಿ ಇವರ ಆರಾಧ್ಯ ದೇವಿ ದರ್ಶನ ಪಡೆದು 11 ಜ್ಯೋತಿರ್ಲಿಂಗಳ ದರ್ಶನಕ್ಕೆ ಸೈಕಲ್ ಮೂಲಕ ಯಾತ್ರೆ ಆರಂಭಿಸಿದ್ದರು.

ಮೂಲತಃ ವಾಹನ ಚಾಲಕನಾಗಿ ಅನುಭವ ಇದ್ದುದರಿಂದ ಮಾರ್ಗದ ಸಮಸ್ಯೆಯಾಗಿಲ್ಲ. ಮಹಾಲಯ ಅಮಾವಾಸ್ಯೆಗೂ ಮೊದಲೆರಡು ದಿನ ಯಾತ್ರೆ ಆರಂಭಿಸಿದ್ದಾರೆ. ಸಸಾಲಟ್ಟಿಯಿಂದ ಆರಂಭವಾದ ಪಯಣ ಮುಂಬೈ, ನಾಸಿಕ್‌, ಗುಜರಾತ, ರಾಜಸ್ಥಾನ, ಬನಾರಸ್ ಮಾರ್ಗವಾಗಿ ಕಾಶಿ ತಲುಪಿ ಅಲ್ಲಿ ವಿಶ್ವನಾಥನಿಗೆ ಅಭಿಷೇಕ ಮಾಡಿಸಿ ಅಲ್ಲಿಂದ 11 ಜ್ಯೋತಿರ್ಲಿಂಗಗಳ ದರ್ಶನ ಮಾಡಿ ಬರುವ ಮೂಲಕ ಅಸಾಧ್ಯವೆನಿಸುವ ಸಾಹ ಮೆರೆದಿದ್ದಾನೆ.

ಪಯಣದ ಮಧ್ಯೆ ಉತ್ತರ ಪ್ರದೇಶದ ಆಗ್ರಾದಲ್ಲಿ ಸೈಕಲ್ ಗಾಲಿಯ ಟ್ಯೂಬ್ ಒಡೆದಾಗ ಅಲ್ಲಿನ ಭಕ್ತರೊಬ್ಬರು ಧನಸಹಾಯ ಮಾಡಿ ಹೊಸ ಟ್ಯೂಬ್ ಹಾಕಿಸಿದರಂತೆ. ಪ್ರಯಾಣದುದ್ದಕ್ಕೂ ದಿನಕ್ಕೆರಡು ಬಾಳೆಹಣ್ಣು ಹಾಗೂ ಒಂದು ಗ್ಲಾಸ್ ಹಾಲು ಸೇವಿಸಿ 45 ದಿನಗಳ ಕಾಲ ಪ್ರತಿದಿನ 180 ಕಿ.ಮೀ ದೂರವನ್ನು ಸೈಕಲ್ ತುಳಿಯುವ ಮೂಲಕ ಕ್ರಮಿಸಿ ಪ್ರಯಾಣ ಮುಗಿಸಿದ್ದಾರೆ.----ವಯಸ್ಸಿದ್ದಾಗ ದುಡಿದು ಆಸ್ತಿ ಗಳಿಸಿ ಜೀವನದ ಕೊನೆಯ ಕಾಲದಲ್ಲಿ ತೀರ್ಥಕ್ಷೇತ್ರಗಳ ಪ್ರಯಾಣ ಮಾಡುವುದು ಸ್ವಾಭಾವಿಕ. ಆದರೆ ನನಗೆ ಆಸ್ತಿ-ಪಾಸ್ತಿ ಗಳಿಸುವ ಯಾವ ವಿಚಾರವೂ ಇಲ್ಲ. ಇಳಿವಯಸ್ಸಿನವರೆಗೂ ಬದುಕಿರುತ್ತೆನೆಂಬ ಭರವಸೆಯೂ ಇಲ್ಲದ ಈ ದಿನಗಳಲ್ಲಿ ವಯಸ್ಸಿದ್ದಾಗಲೇ ಪಣ್ಯಕ್ಷೇತ್ರಗಳ ಪ್ರವಾಸ ಕೈಗೊಳ್ಳಬೇಕೆಂದು ವಿಚಾರ ಮಾಡಿದೆ. ಆಗ ಅಡ್ಡಿಯಾಗಿದ್ದು ಹಣ. ಅಷ್ಟೊಂದು ಹಣ ನನ್ನ ಬಳಿ ಇರಲಿಲ್ಲ. ಅತ್ಯಂತ ಕಡಿಮೆ ಖರ್ಚಿನ ಸೈಕಲ್ ಪ್ರಯಾಣ ಮಾಡುವ ವಿಚಾರ ಮಾಡಿದೆ. ದಾನಿಗಳು ಅಲ್ಲಲ್ಲಿ ಹಣ ಸಹಾಯ ಮಾಡಿದರು. ಅದರಲ್ಲೂ ವಿಶೇಷವಾಗಿ ಮೂಕಾಂಬಿಕಾ ಕಮೀಟಿಯವರು ನನ್ನ ಬೆಂಬಲಕ್ಕೆ ನಿಂತರು.

-ಸುರೇಶ ಕಡಪಟ್ಟಿ ಸಾಹಸಿ ಸೈಕಲ್ ಸವಾರ`

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ