ಸೂಕ್ತ ಮಾಹಿತಿ ಪಡೆದು ಕೃಷಿ ಬೆಳೆ ನಿರ್ವಹಣೆಗೆ ಸಲಹೆ

KannadaprabhaNewsNetwork |  
Published : Jun 23, 2024, 02:00 AM IST
ಪೋಟೋ ಕಾಫಿ ಮತ್ತು ಕೃಷಿ ವಿಚಾರ ಸಂಕಿರಣವನ್ನು ಶನಿವಾರಸಂತೆ ಬೆಳೆಗಾರರ ಸಂಘದ ಅಧ್ಯಕ್ಷ ಆರ್.ಪಿ.ಲಕ್ಷ್ಮಣ್ ಉದ್ಘಾಟಿಸುತ್ತಿರುವುದು ಕೋರಮಂಡಲ್ ಸಂಸ್ಥೆಯ ಕಿರಣ್‍ಕುಮಾರ್, ಕಾಫಿ ಮಂಡಳಿ ಸಂಪರ್ಕಾಧಿಕಾರಿ ರಂಜಿತ್ ಕುಮಾರ್, ಡಾ.ನಾಗರಾಜ್, ಪರಮೇಶ್ ಇದ್ದಾರೆ. 2. ಕಿರಣ್‍ಕುಮಾರ್ ಗೊಬ್ಬರ ಉತ್ಪನ್ನ ಬಗ್ಗೆ ಮಾಹಿತಿ. 3. ವಿಚಾರ ಸಂಕಿರಣದಲ್ಲಿ ರೈತರು | Kannada Prabha

ಸಾರಾಂಶ

ಬೆಳೆಗಾರರು ವಿಚಾರ ಸಂಕಿರಣದಲ್ಲಿ ಪಡೆದ ಮಾಹಿತಿ ಸದ್ಬಳಕೆ ಮಾಡಿಕೊಂಡು ಅದರಂತೆ ಕೃಷಿ ಬೆಳೆ ನಿರ್ವಹಣೆಯನ್ನು ಮಾಡುವಂತೆ ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಆರ್‌. ಪಿ. ಲಕ್ಷ್ಮಣ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ಬೆಳೆಗಾರರು ವಿಚಾರ ಸಂಕಿರಣದಲ್ಲಿ ಪಡೆದ ಮಾಹಿತಿ ಸದ್ಬಳಕೆ ಮಾಡಿಕೊಂಡು ಅದರಂತೆ ಕೃಷಿ ಬೆಳೆ ನಿರ್ವಹಣೆಯನ್ನು ಮಾಡುವಂತೆ ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಆರ್.ಪಿ.ಲಕ್ಷ್ಮಣ್ ಸಲಹೆ ನೀಡಿದ್ದಾರೆ.

ಕೋರಮಂಡಲ್ ಇಂಟರ್ ನ್ಯಾಷನಲ್ ಲಿಮಿಟೆಡ್, ಶನಿವಾರಸಂತೆ ಎಪಿಸಿಎಂಎಸ್, ಭಾರತೀಯ ಕಾಫಿ ಮಂಡಳಿ ಹಾಗೂ ಶನಿವಾರಸಂತೆ ಹೋಬಳಿ ಬೆಳೆಗಾರರ ಸಂಘ ಸಂಯುಕ್ತ ಆಶ್ರಯದಲ್ಲಿ ಶನಿವಾರ ಪಟ್ಟಣದ ಎ.ಪಿ.ಸಿ.ಎಂ.ಎಸ್. ಸಭಾಂಗಣದಲ್ಲಿ ನಡೆದ ಕಾಫಿ ಮತ್ತು ಕೃಷಿ ಬೆಳೆಗಾರರಿಗೆ ರಾಸಾಯನಿಕ ಮತ್ತು ಸಾವಯವ ಗೊಬ್ಬರ, ಜೈವಿಕ ಔಷಧಿ, ಕಾಫಿ, ಕಾಳು ಮೆಣಸು, ಮತ್ತು ಕೃಷಿ ಬೆಳೆಗಳ ಕುರಿತಾಗಿ ಕೋರಮಂಡಲ್ ಸಂಸ್ಥೆಯ ಅಧಿಕಾರಿಗಳು, ಕಾಫಿ ಮಂಡಳಿ ಅಧಿಕಾರಿಗಳು ಕೃಷಿ ವಿಜ್ಞಾನಿಗಳಿಂದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಕೋರಮಂಡಲ್ ಇಂಟರ್ ನ್ಯಾಷನಲ್ ಸಂಸ್ಥೆಯ ಹಿರಿಯ ಕೃಷಿ ತಜ್ಞಾಧಿಕಾರಿ ಕಿರಣ್‍ಕುಮಾರ್ ಮಾಹಿತಿ ನೀಡಿ, ಕಾಫಿ ಮತ್ತು ಕೃಷಿ ಬೆಳೆಗಳಿಗೆ ಕೇವಲ ಶಿಫಾರಸು ಮಾಡಿದ ರಸಾಯಿನಿಕ ಗೊಬ್ಬರ ಮತ್ತು ಔಷಧಿಯನ್ನು ಬಳಸುತ್ತಾರೆ. ಮಣ್ಣಿಗೆ ಮತ್ತು ಕೃಷಿ ಬೆಳೆಗಳಿಗೆ ಪೌಷ್ಟಿಕಾಂಶ ಒಳಗೊಂಡಂತಹ ರಸಗೊಬ್ಬರವನ್ನು ಕೊಡುವುದರಿಂದ ಬೆಳೆಯಲ್ಲಿ ಅಧಿಕ ಇಳುವರಿಯ ಜೊತೆಯಲ್ಲಿ ಮಣ್ಣಿನಲ್ಲಿ ಪೌಷ್ಟಿಕಾಂಶ ಹೆಚ್ಚಾಗುತ್ತದೆ ಎಂದರು.

ಕೋರಮಂಡಲ್ ಇಂಟರ್ ನ್ಯಾಷನಲ್ ಸಂಸ್ಥೆಯು ಸ್ಥಾಪನೆಯಾಗಿ 110 ವರ್ಷಗಳಾಗಿದ್ದು ಸಂಸ್ಥೆಯಿಂದ ತಯಾರಾಗುವ ಗೊಬ್ಬರವನ್ನು ವಿವಿಧ 16 ಪೌಷ್ಟಿಕಾಂಶಗಳು ಒಳಗೊಂಡಂತೆ ಮತ್ತು ಸಾವಯವ ಅಂಶಗಳು ಒಳಗೊಂತೆ ಉತ್ಪನ್ನಗೊಳಿಸಲಾಗುತ್ತಿದೆ ಎಂದರು.

ಸೋಮವಾರಪೇಟೆ ಕಾಫಿ ಮಂಡಳಿಯ ಸಂಪರ್ಕಧಿಕಾರಿ ರಂಜಿತ್‍ಕುಮಾರ್ ಮಾಹಿತಿ ನೀಡಿ-ಕಾಫಿ ಬೆಳೆಗಾರರು ಮೂರು ವರ್ಷಕ್ಕೊಮ್ಮೆ ಮಣ್ಣು ಪರೀಕ್ಷೆ ಮಾಡಿಸಿಕೊಂಡು ಮಣ್ಣಿನ ಫಲವತ್ತತೆ ಹೆಚ್ಚಿಸಿಕೊಳ್ಳಬೇಕು. ಸಮಯಕ್ಕೆ ಸರಿಯಾಗಿ ಗೊಬ್ಬರ ಬಳಸಬೇಕು. ವಿಜ್ಞಾನಿಗಳು ನೀಡಿದ ಮಾಹಿತಿಯನ್ನು ಅನುಸರಿಸಿ ತೋಟವನ್ನು ನಿರ್ವಹಣೆ ಮಾಡುವಂತೆ ಸಲಹೆ ನೀಡಿದರು.

ಹಾಸನ ಕೃಷಿ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಡಾ. ನಾಗರಾಜ್ ಕೀಟ ಬಾಧೆ ಕುರಿತು ಮಾಹಿತಿ ನೀಡಿ-ನೈಸರ್ಗಿಕವಾಗಿ ಮತ್ತು ಸಮಗ್ರ ಪದ್ಧತಿಯಿಂದ ನೈಸರ್ಗಿಕವನ್ನು ಉಳಿಸಿಕೊಂಡರೆ ಮಾತ್ರ ಕೀಟ ಬಾಧೆ ಕಡಿಮೆಯಾಗುತ್ತದೆ. ಕೃಷಿ ಬೆಳೆಗಳಿಗೆ ರಸಾಯಿನಿಕ ಗೊಬ್ಬರ, ಔಷಧಿ ಸಿಂಪಡಣೆಯಿಂದ ಭೂಮಿ ಮತ್ತು ನಿಸರ್ಗ ನಾಶವಾಗುತ್ತದೆ. ಈ ನಿಟ್ಟಿನಲ್ಲಿ ಸಾವಯವ ಗೊಬ್ಬರ ಮತ್ತು ಸಾವಯವ ಅಂಶ ಒಳಗೊಂಡಿರುವ ಮತ್ತು ಪೌಷ್ಟಿಕಾಂಶ ಒಳಗೊಂಡಿರುವ ಗೊಬ್ಬರವನ್ನು ಬಳಸುವ ಮೂಲಕ ಸ್ವಲ್ಪ ಮಟ್ಟಿಗೆಯಾದರೂ ಪರಿಸರದ ಮೇಲಾಗುವ ಪರಿಣಾಮವನ್ನು ತಡೆಗಟ್ಟಬಹುದು ಎಂದರು.

ವಿಚಾರ ಸಂಕಿರಣದಲ್ಲಿ ಕೋರಮಂಡಲ್ ಸಂಸ್ಥೆಯ ಕೃಷಿ ವಿಜ್ಞಾನಿ ಡಾ. ರಾಜಶೇಖರ್, ಶನಿವಾರಸಂತೆ ಎಪಿಸಿಎಂಎಸ್ ಅಧ್ಯಕ್ಷ ಪರಮೇಶ್, ಸಿಇಒ ಶಿವರಾಜ್, ಕೋರಮಂಡಲ್ ಸಂಸ್ಥೆಯ ಸಿಬ್ಬಂದಿ ಹಾಜರಿದ್ದರು.

ವಿಚಾರ ಸಂಕಿರಣದಲ್ಲಿ ರೈತರಿಗೆ ಕೋರಮಂಡಲ್ ಉತ್ಪನ್ನಗಳು ಮತ್ತು ಸಂಸ್ಥೆಯು ಕಾಫಿ ಬೆಳೆಗಾಗಿ ತಯಾರಿಸಿರುವ ಕಾಫಿ ಬ್ಲಿಸ್ ಸಾವಯವ ಗೊಬ್ಬರದ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಲಾಯಿತು.

PREV

Recommended Stories

ಪರಿಹಾರ ನೀಡಲು ಸರ್ಕಾರ ಬದ್ಧವಿದೆ
ನಾಯಿ ಕಡಿತಕ್ಕೊಳಗಾಗಿದ್ದರೆನಿರ್ಲಕ್ಷ್ಯ ಬೇಡ, ಚಿಕಿತ್ಸೆ ಪಡೆಯಿರಿ