ವಕೀಲಿಕೆ ಅತ್ಯಂತ ಗೌರವಯುತ ವೃತ್ತಿ: ಅಧ್ಯಕ್ಷ ಅನೀಸ

KannadaprabhaNewsNetwork |  
Published : Jan 09, 2024, 02:00 AM IST
8ಎಚ್‌ಯುಕೆ-2 | Kannada Prabha

ಸಾರಾಂಶ

ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರದಲ್ಲಿ ಅಧ್ಯಕ್ಷ ಅನೀಸ ಅಭಿಪ್ರಾಯಪಟ್ಟು, ವಕೀಲಿಕೆ ಅತ್ಯಂತ ಗೌರವಯುತ ವೃತ್ತಿ ಎಂದಿದ್ದಾರೆ.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ವಕೀಲಿಕೆ ಅತ್ಯಂತ ಗೌರವಯುತ ವೃತ್ತಿಯಾಗಿದ್ದು, ಕಲಿಕೆ ವಕೀಲ ವೃತ್ತಿಯ ಬಹುಮುಖ್ಯ ಭಾಗವಾಗಿದೆ. ಸಂವಿಧಾನ ರಚನೆಯಿಂದ ಹಿಡಿದು ದೇಶಾದ್ಯಂತ ಯಾವುದೇ ಕಾನೂನು ರಚನೆಯಾದಲ್ಲಿ, ದೇಶದ ಅತ್ಯುನ್ನತ ಹುದ್ದೆ ಅಲಂಕರಿಸುವುದರಲ್ಲಿ ವಕೀಲರ ಪಾತ್ರ ಮಹತ್ವದ್ದಾಗಿದೆ ಎಂದು ನ್ಯಾಯವಾದಿಗಳ ಸಂಘದ ನೂತನ ಅಧ್ಯಕ್ಷ ಅನೀಸ ವಂಟಮೂರಿ ಅಭಿಪ್ರಾಯಪಟ್ಟರು.

ಪಟ್ಟಣದ ವಕೀಲರ ಭವನದಲ್ಲಿ ಸೋಮವಾರ ಏರ್ಪಡಿಸಿದ ಹುಕ್ಕೇರಿ ನ್ಯಾಯವಾದಿಗಳ ಸಂಘಕ್ಕೆ 2023-25ರ ಅವಧಿಗೆ ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಸಮಾರಂಭದಲ್ಲಿ ಮಾತನಾಡಿದ ಅವರು, ವಕೀಲರು ಅಧ್ಯಯನ ಮಾಡುವುದು ಅಗತ್ಯ. ಕಠಿಣ ಪರಿಶ್ರಮ ಅನುಸರಿಸದಿದ್ದರೆ ಯಶಸ್ಸು ನಮ್ಮ ಕೈ ಹಿಡಿಯುವುದಿಲ್ಲ ಎಂದರು.

ಪ್ರಕರಣಗಳನ್ನು ನ್ಯಾಯಾಲಯದ ಮುಂದೆ ತರುವ ಪರಿಣಾಮಕಾರಿ ಪ್ರಯತ್ನದಲ್ಲಿ ಹಿರಿಯ ವಕೀಲರಲ್ಲಿರುವ ತಾಳ್ಮೆ, ಪರಿಣತಿ, ಕಿರಿಯ ವಕೀಲರಲ್ಲಿ ಕಂಡು ಬರುತ್ತಿಲ್ಲ. ಬದ್ಧತೆಯಿಂದ ಕಾರ್ಯನಿರ್ವಹಿಸುವುದು ನಮ್ಮ ಕರ್ತವ್ಯ. ವಕೀಲರು ಹಾಗೂ ಸಿಬ್ಬಂದಿ ಪರಸ್ಪರ ಸಹಕಾರ, ಸೌಹಾರ್ದತೆಯಿಂದ ಕಾರ್ಯನಿರ್ವಹಿಸಿದರೆ ನ್ಯಾಯಾಂಗ ವ್ಯವಸ್ಥೆಗೆ ಘನತೆ ಬರುತ್ತದೆ ಎಂದು ತಿಳಿಸಿದರು.

ವರದಿ ವಾಚಿಸಿದ ನಿಕಟಪೂರ್ವ ಅಧ್ಯಕ್ಷ ರಾಜೀವ ಚೌಗಲಾ ಮಾತನಾಡಿ, ಈ ವೃತ್ತಿಯನ್ನು ಅತ್ಯಂತ ಗೌರವದಿಂದ ಮುಂದುವರಿಸಬೇಕು. ಅದನ್ನೂ ಯಾವುದೇ ಕಾರಣಕ್ಕೂ ಬಿಡಬಾರದು. ತಮ್ಮ ಅಧಿಕಾರವಧಿಯ ಕಾರ್ಯಚಟುವಟಿಕೆ ವಿವರಿಸಿ, ಸಂಘವು ಆರ್ಥಿಕವಾಗಿ ಸದೃಢವಾಗಿದ್ದು ಹೊಸ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳಲು ಅನುಕೂಲವಾಗಲಿದೆ ಎಂದರು.

ಅಪರ ಸರ್ಕಾರಿ ಅಭಿಯೋಜಕ ಅನಿಲ ಕರೋಶಿ, ಸಂಘದ ನೂತನ ಉಪಾಧ್ಯಕ್ಷ ಬಿ.ಎಂ.ಜಿನರಾಳಿ, ಸಹಕಾರ್ಯದರ್ಶಿ ವಿಠ್ಠಲ ಗಸ್ತಿ, ಖಜಾಂಚಿ ಅಂಬರೀಶ ಬಾಗೇವಾಡಿ, ಮಹಿಳಾ ಪ್ರತಿನಿಧಿ ಅನೀತಾ ಕುಲಕರ್ಣಿ, ನ್ಯಾಯವಾದಿಗಳಾದ ಪಿ.ಎಸ್.ಮುತಾಲಿಕ, ಕೆ.ಎಲ್.ಜಿನರಾಳಿ, ಡಿ.ಕೆ.ಅವರಗೋಳ, ಬಿ.ಕೆ.ಮಗೆನ್ನವರ, ಬಿ.ಬಿ.ಸನದಿ, ರಾಜೇಂದ್ರ ಮೋಶಿ, ಎಸ್.ಎಸ್.ಮರಿನಾಯಿಕ, ಉಮೇಶ ಪಾಟೀಲ, ಎನ್.ಐ.ದೇಮನ್ನವರ, ಎಂ.ಕೆ.ಪಾಟೀಲ, ಎ.ಬಿ.ತೊದಲ, ಆಶಾ ಸಿಂಗಾಡಿ, ಎಚ್.ಎಲ್.ಪಾಟೀಲ, ಪಿ.ಎ.ಪಲ್ಲೇದ, ಕುಮಾರ ಬೆಂಕಿ, ರೂಪಾ ಬಡಗಾಂವಿ ಮತ್ತಿತರರು ಉಪಸ್ಥಿತರಿದ್ದರು.

ನ್ಯಾಯವಾದಿ ಕೆ.ಪಿ.ಶಿರಗಾಂವಕರ ನಿರೂಪಿಸಿದರು. ಇದೇ ಸಂದರ್ಭದಲ್ಲಿ ನಿರ್ಗಮಿತ ಮತ್ತು ನೂತನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ