‘ಸಾಂತ್ವನ ಸಂಚಾರ’ದಲ್ಲಿ ಆಡಿ ನಲಿದ ವಾತ್ಸಲ್ಯ ವಂಚಿತ ಮಕ್ಕಳು

KannadaprabhaNewsNetwork |  
Published : Dec 15, 2024, 02:03 AM IST
ಪಿಲಿಕುಳ ಪ್ರಾಣಿ ಸಂಗ್ರಹಾಲಯದಲ್ಲಿ ಮಕ್ಕಳು. | Kannada Prabha

ಸಾರಾಂಶ

ವಾತ್ಸಲ್ಯ ವಂಚಿತ 82 ಅನಾಥ ಮಕ್ಕಳಿಗೆ ಕೋಸ್ಟಲ್‌ ಫ್ರೆಂಡ್ಸ್‌ ಸಂಘಟನೆ ವತಿಯಿಂದ ಶನಿವಾರ ಜಿಲ್ಲೆಯ ವಿವಿಧೆಡೆ ಪ್ರವಾಸ ‘ಸಾಂತ್ವನ ಸಂಚಾರ’ ಏರ್ಪಡಿಸಲಾಗಿತ್ತು. ಮಕ್ಕಳು ತಮ್ಮ ಸಮಕಾಲೀನ ಗೆಳೆಯರ ಜತೆ ಬೆರೆತು ಆಡಿ ನಲಿದು ಸಂಭ್ರಮಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ವಾತ್ಸಲ್ಯ ವಂಚಿತ 82 ಅನಾಥ ಮಕ್ಕಳಿಗೆ ಕೋಸ್ಟಲ್‌ ಫ್ರೆಂಡ್ಸ್‌ ಸಂಘಟನೆ ವತಿಯಿಂದ ಶನಿವಾರ ಜಿಲ್ಲೆಯ ವಿವಿಧೆಡೆ ಪ್ರವಾಸ ‘ಸಾಂತ್ವನ ಸಂಚಾರ’ ಏರ್ಪಡಿಸಲಾಗಿತ್ತು. ಮಕ್ಕಳು ತಮ್ಮ ಸಮಕಾಲೀನ ಗೆಳೆಯರ ಜತೆ ಬೆರೆತು ಆಡಿ ನಲಿದು ಸಂಭ್ರಮಿಸಿದರು.

ಅನಾಥ ಮಕ್ಕಳ ಸ್ಥಿತಿಗತಿಗಳ ಬಗ್ಗೆ ಸರ್ವೇ ನಡೆಸಿ 82 ಮಕ್ಕಳನ್ನು ಈ ಸಾಂತ್ವನ ಸಂಚಾರಕ್ಕೆ ಆಯ್ಕೆ ಮಾಡಲಾಗಿತ್ತು. ಬೆಳಗ್ಗೆ ಉಪಹಾರದ ಬಳಿಕ ಆರಂಭಗೊಂಡ ಪ್ರವಾಸ ಸಂಜೆವರೆಗೂ ನಡೆಯಿತು.

ಮಧ್ಯಾಹ್ನದವರೆಗೆ ಪಿಲಿಕುಳ ನಿಸರ್ಗಧಾಮದಲ್ಲಿ ಸುತ್ತಾಟ, ವಿಜ್ಞಾನ ಕೇಂದ್ರ ದರ್ಶನ, ತಾರಾಲಯದಲ್ಲಿ 3ಡಿ ಚಿತ್ರ ವೀಕ್ಷಣೆ, ಮಧ್ಯಾಹ್ನ ಉಳ್ಳಾಲದ ರೆಸಾರ್ಟ್‌ನಲ್ಲಿ ಸುತ್ತಾಟ, ಸಹ ಭೋಜನ, ಸಂಜೆಯವರೆಗೆ ಆಟೋಟ ಸ್ಪರ್ಧೆ, ಮನರಂಜನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಮಕ್ಕಳು ಬಳಿಕ ಮ್ಯಾಜಿಕ್ ಶೋ ವೀಕ್ಷಿಸಿ ಪುಳಕಗೊಂಡರು. ರಾತ್ರಿ ಸಮಾರೋಪ ಸಮಾರಂಭ, ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ, ಬಳಿಕ ಊಟ ಮುಗಿಸಿ ಮಕ್ಕಳನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲಾಯಿತು.

ಸಾಂತ್ವನ ಸಂಚಾರಕ್ಕೆ ಮಕ್ಕಳನ್ನು ಕರೆತರಲು, ವಾಪಸ್ ಕಳುಹಿಸಿ ಕೊಡಲು ವಾಹನ ವ್ಯವಸ್ಥೆ, ಹೆಣ್ಣುಮಕ್ಕಳ ನಿಗಾ ವಹಿಸಲು ಮಹಿಳಾ ಸ್ವಯಂ ಸೇವಕರ ನಿಯೋಜಿಸಲಾಗಿತ್ತು. ತುರ್ತುಸೇವೆಗೆ ಒಂದು ಆ್ಯಂಬುಲೆನ್ಸ್ ಮತ್ತು ವೈದ್ಯರನ್ನು ನಿಯೋಜಿಸಲಾಗಿದ್ದು, ಮಕ್ಕಳಿಗೆ ಸಮವಸ್ತ್ರ ಮಾದರಿಯ ಟಿ-ಶರ್ಟ್, ಹ್ಯಾಟ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಕೊನೆಗೆ ಎಲ್ಲ ಮಕ್ಕಳು ಅವರ ಕುಟುಂಬಸ್ಥರಿಗೆ ತಲಾ 10 ಸಾವಿರ ರು. ಮೌಲ್ಯದ ಕಿಟ್ ನೀಡಲಾಯಿತು. ಎಲ್ಲ ಖರ್ಚು ವೆಚ್ಚವನ್ನು ಕೋಸ್ಟಲ್ ಫ್ರೆಂಡ್ಸ್ ಮಂಗಳೂರು ತಂಡದ 73 ಮಂದಿ ಸದಸ್ಯರೇ ಭರಿಸಿದ್ದಾರೆ ಎಂದು ಕೋಸ್ಟಲ್‌ ಫ್ರೆಂಡ್ಸ್‌ ಸಂಘಟನೆಯ ಅಧ್ಯಕ್ಷ ಶರೀಫ್‌ ಅಬ್ಬಾಸ್‌ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾದಾಪುರ ಸೋಮವಾರಪೇಟೆ ಹೋಬಳಿ ಕೇಂದ್ರದಿಂದ ಬೇರ್ಪಡಿಸಿ
ಸಮಾನತೆ ಸಾರಿದ ಮಡಿವಾಳ ಮಾಚಿದೇವ