ಬೇಸಿಗೆ ರಜೆ ಮುಗಿಸಿ ಶಾಲೆಯತ್ತ ಹೆಜ್ಜೆಹಾಕಿದ ಚಿಣ್ಣರು

KannadaprabhaNewsNetwork |  
Published : Jun 01, 2024, 12:45 AM IST
೩೧ಕೆಎಲ್‌ಆರ್-೯ಜಿಲ್ಲೆಯಲ್ಲಿ ಮೇ.೩೧ ರಂದು ಶಾಲೆಗಳು ಆರಂಭಗೊಂಡಿದ್ದು, ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಆರಂಭೋತ್ಸವದ ಅಂಗವಾಗಿ ಶಾಲೆಗೆಬಂದ ಮಕ್ಕಳನ್ನು ಶಿಕ್ಷಕರು ಹೂ ನೀಡಿ ಸ್ವಾಗತಿಸಿದರು. | Kannada Prabha

ಸಾರಾಂಶ

ಮಕ್ಕಳ ಆಗಮನಕ್ಕಾಗಿ ಶಾಲೆಯನ್ನು ಸಿಂಗರಿಸಿದ್ದು, ಕಳೆದೆರಡು ದಿನಗಳಿಂದ ಶಾಲೆಯಲ್ಲಿನ ಅಡುಗೆ ಮನೆ, ಶೌಚಾಲಯ, ತರಗತಿ ಕೊಠಡಿಗಳನ್ನು ಸ್ವಚ್ಚಗೊಳಿಸಿ ಸಿದ್ದಗೊಳಿಸಿದ್ದು, ಇಂದು ಸಂಭ್ರಮದಿಂದ ಶಾಲೆಯತ್ತ ಹೆಜ್ಜೆ ಹಾಕಿದ ಮಕ್ಕಳನ್ನು ಸ್ವಾಗತಿಸಲಾಯಿತು.

ಕನ್ನಡಪ್ರಭ ವಾರ್ತೆ ಕೋಲಾರಬೇಸಿಗೆಯ ರಜೆಯ ಮಜಾ ಮುಗಿಸಿ ಜಿಲ್ಲಾದ್ಯಂತ ಮೇ ೩೧ರಂದು ಶಾಲೆಗಳತ್ತ ಸಂಭ್ರಮದಿಂದ ಹೆಜ್ಜೆ ಹಾಕಿದ ಚಿಣ್ಣರನ್ನು ಶಿಕ್ಷಕರು ಶಾಲೆಗಳಲ್ಲಿ ಇಂದು ಹೂ ನೀಡಿ ಸ್ವಾಗತಿಸಿದ್ದು, ಪಠ್ಯಪುಸ್ತಕ, ಸಮವಸ್ತ್ರ ವಿತರಿಸಿ ಸಿಹಿಯೂಟ ಬಡಿಸಲಾಯಿತು.ತಾಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ತಳಿರು ತೋರಣಳಿಂದ ಅಲಂಕರಿಸಿದ ಶಿಕ್ಷಕರು ಮಕ್ಕಳನ್ನು ಶಾಲೆಯ ಗೇಟ್‌ಬಳಿಯೇ ಹೂ ನೀಡಿ ಸ್ವಾಗತಿಸಲಾಯಿತು.ಮಕ್ಕಳ ಸ್ವಾಗತಕ್ಕೆ ಶಾಲೆ ಶೃಂಗಾರ

ಮಕ್ಕಳ ಆಗಮನಕ್ಕಾಗಿ ಶಾಲೆಯನ್ನು ಸಿಂಗರಿಸಿದ್ದು, ಕಳೆದೆರಡು ದಿನಗಳಿಂದ ಶಾಲೆಯಲ್ಲಿನ ಅಡುಗೆ ಮನೆ, ಶೌಚಾಲಯ, ತರಗತಿ ಕೊಠಡಿಗಳನ್ನು ಸ್ವಚ್ಚಗೊಳಿಸಿ ಸಿದ್ದಗೊಳಿಸಿದ್ದು, ಇಂದು ಸಂಭ್ರಮದಿಂದ ಶಾಲೆಯತ್ತ ಹೆಜ್ಜೆ ಹಾಕಿದ ಮಕ್ಕಳನ್ನು ಸ್ವಾಗತಿಸಲಾಯಿತು. ಕಲಿಕೆ, ಪರೀಕ್ಷೆ, ಫಲಿತಾಂಶದ ನಂತರ ಸಿಕ್ಕ ವಾರ್ಷಿಕ ಬೇಸಿಗೆ ರಜೆ ಮುಗಿಸಿ ಇದೀಗ ಶಾಲೆಗಳತ್ತ ಮುಖ ಮಾಡಿರುವ ಚಿಣ್ಣರು, ಹೊಸ ಪಠ್ಯಪುಸ್ತಕಗಳನ್ನು ಪಡೆದು ಮತ್ತೆ ಕಲಿಕೆಯಲ್ಲಿ ಮಗ್ನರಾಗಲು ಸಿದ್ದರಾಗಿದ್ದು, ಶಾಲಾ ಆರಂಭದ ದಿನವೇ ಮಕ್ಕಳಿಗೆ ಹೊಸ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಿದ್ದು ವಿಶೇಷವಾಗಿತ್ತು.

ತರಗತಿ ಶಿಕ್ಷಕರು ಮೇ.೩೧ರಿಂದಲೇ ಕಡ್ಡಾಯವಾಗಿ ಶಾಲೆಗೆ ಮಕ್ಕಳು ಬರುವಂತೆ ಮೊಬೈಲ್ ಮೆಸೇಜ್‌ಅನ್ನು ಪೋಷಕರಿಗೆ ಕಳುಹಿಸುವ ಮೂಲಕ ಅರಿವು ಮೂಡಿಸಿದ್ದು, ಅನೇಕ ಮಕ್ಕಳು ಇಂದು ಆಗಮಿಸಿದ್ದರು.

ಹಬ್ಬದಂತೆ ಆಚರಣೆ

ಮಕ್ಕಳ ವ್ಯಾಸಂಗದ ಅವಧಿಯಲ್ಲಿ ಶಾಲಾ ಪ್ರಾರಂಭದ ದಿನವನ್ನು ಮಕ್ಕಳ ಮನಸ್ಸಿನಲ್ಲಿ ಸ್ಥಿರವಾಗಿ ನಿಲ್ಲುವ ರೀತಿ ಹಬ್ಬದಂತೆ ಆಚರಿಸಿ ಅವರಲ್ಲಿ ಆಹ್ಲಾದಕರ ವಾತಾವರಣ ಸೃಷ್ಟಿಸುವುದೇ ಶಿಕ್ಷಣ ಇಲಾಖೆ ಉದ್ದೇಶವಾಗಿದ್ದು, ಇಲಾಖೆಯ ಡಿಡಿಪಿಐ ಹಾಗೂ ಬಿಇಇಒ ಅವರ ಸೂಚನೆಯಂತೆ ಶಾಲೆಗಳಲ್ಲಿ ಕ್ರಮ ವಹಿಸಲಾಗಿದೆ.

ಜಿಲ್ಲೆಯಲ್ಲಿ ೧ ರಿಂದ ೭ನೇ ತರಗತಿವರೆಗಿನ ಸರ್ಕಾರಿ ಪ್ರಾಥಮಿಕ ಶಾಲೆಗಳು ಒಟ್ಟು ೧೮೦೨ ಇವೆ, ಹಾಗೂ ೧೨೫ ಸರ್ಕಾರಿ ಪ್ರೌಢಶಾಲೆಗಳಿದ್ದು, ಇಲಾಖೆ ಮಾರ್ಗಸೂಚಿಯಂತೆ ಶಾಲೆಗಳಿಗೆ ತಳಿರು ತೋರಣಗಳಿಂದ ಅಲಂಕರಿಸಿ ಮಕ್ಕಳನ್ನು ಶಾಲೆಗೆ ಆಹ್ವಾನಿಸುವ ಕಾರ್ಯ ಎಲ್ಲಾ ಕಡೆ ನಡೆದಿದೆ. ಜಿಲ್ಲೆಯಲ್ಲಿ ೨೬೫೯ ಶಾಲೆಗಳು

ಉಳಿದಂತೆ ಅನುದಾನಿತ ೪೪ ಪ್ರಾಥಮಿಕ ಹಾಗೂ ೫೯ ಪ್ರೌಢಶಾಲೆಗಳು, ಅನುದಾನರಹಿತ ೩೫೯ ಪ್ರಾಥಮಿಕ ಹಾಗೂ ೨೦೩ ಪ್ರೌಢಶಾಲೆಗಳು ಸೇರಿದಂತೆ ಒಟ್ಟಾರೆ ೧೨೦೪ ಕಿರಿಯ ಪ್ರಾಥಮಿಕ, ೧೦೩೫ಹಿರಿಯ ಪ್ರಾಥಮಿಕ ಹಾಗೂ ೪೨೦ ಪ್ರೌಢಶಾಲೆಗಳು ಸೇರಿದಂತೆ ಒಟ್ಟು ೨೬೫೯ ಶಾಲೆಗಳು ಜಿಲ್ಲೆಯಲ್ಲಿದ್ದು, ಎಲ್ಲಾ ಶಾಲೆಗಳಲ್ಲೂ ಶಾಲಾ ಪ್ರಾರಂಭೋತ್ಸವಕ್ಕೆ ಸೂಚನೆ ನೀಡಲಾಗಿದೆ.ಇವುಗಳ ಜತೆಗೆ ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಜಿಲ್ಲೆಯಲ್ಲಿ ೧೬ಮೊರಾರ್ಜಿದೇಸಾಯಿ, ೪ ಕಿತ್ತೂರು ರಾಣಿ ಚೆನ್ನಮ್ಮ, ೩ ಅಂಬೇಡ್ಕರ್ ಹಾಗೂ ೧ ಏಕಲವ್ಯ ವಸತಿ ಶಾಲೆಗಳಿದ್ದು, ಇಲ್ಲಿಯೂ ೧೨೦೦ಕ್ಕೂ ಹೆಚ್ಚು ಮಕ್ಕಳು ಶಾಲೆಯತ್ತ ಮೇ.೩೧ ರಂದೇ ಆಗಮಿಸಿದ್ದು, ಅಲ್ಲಿಯೂ ಸ್ವಾಗತಿಸಲಾಗಿದೆ.ಇದರ ಜತೆಗೆ ಶ್ರೀನಿವಾಸಪುರ, ಬಂಗಾರಪೇಟೆ, ಮುಳಬಾಗಿಲು ತಾಲ್ಲೂಕುಗಳಲ್ಲಿ ತಲಾ ಒಂದೊಂದು ಕಸ್ತೂರಿ ಬಾ ಶಾಲೆ ಹಾಗೂ ಆದರ್ಶ ಶಾಲೆಗಳು ಇದ್ದು, ಅವುಗಳಲ್ಲೂ ಸಹಾ ಮೇ.೩೧ ರಂದು ಶಾಲಾ ಪ್ರಾರಂಭೋತ್ಸವ ಆಚರಿಸಲಾಗಿದೆ.

PREV

Recommended Stories

ಧರ್ಮಸ್ಥಳ ಗ್ರಾಮದಲ್ಲಿ ಕಳೇಬರ ಸಿಗದಿದ್ರೆ ಮುಸುಕುಧಾರಿ ಲೋಪವಲ್ಲ
ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ 35 ಬೀದಿ ನಾಯಿಗಳ ಬಂಧನ