8 ರು. ಹಾಲಿನ ದರ ಏರಿಕೆಯ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ

KannadaprabhaNewsNetwork |  
Published : Nov 03, 2026, 04:00 AM IST
BJP Protest | Kannada Prabha

ಸಾರಾಂಶ

ರಾಜ್ಯದಲ್ಲಿ ಕ್ರಾಂತಿ ಆಗುವ ಮೊದಲು ಕಾಂಗ್ರೆಸ್‌ನವರು ಅಧಿಕಾರ ಬಿಟ್ಟು ತೊಲಗಲಿ. ಇಲ್ಲದೇ ಇದ್ದರೆ ಏರಿಸಿರುವ ಎಲ್ಲ ಬೆಲೆಯನ್ನು ಕಡಿಮೆ ಮಾಡಿ, ನಮ್ಮ ರೈತರಿಗೆ ನ್ಯಾಯ ಕೊಡಿ ಎಂದು ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ಕ್ರಾಂತಿ ಆಗುವ ಮೊದಲು ಕಾಂಗ್ರೆಸ್‌ನವರು ಅಧಿಕಾರ ಬಿಟ್ಟು ತೊಲಗಲಿ. ಇಲ್ಲದೇ ಇದ್ದರೆ ಏರಿಸಿರುವ ಎಲ್ಲ ಬೆಲೆಯನ್ನು ಕಡಿಮೆ ಮಾಡಿ, ನಮ್ಮ ರೈತರಿಗೆ ನ್ಯಾಯ ಕೊಡಿ ಎಂದು ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.ಹಾಲಿನ ಬೆಲೆ ಏರಿಕೆ ಖಂಡಿಸಿ ಸೋಮವಾರ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ವತಿಯಿಂದ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಳೆದ ಮೂರ್ನಾಲ್ಕು ತಿಂಗಳಲ್ಲಿ ರಾಜ್ಯ ಸರ್ಕಾರದ ಆಡಳಿತ ಶೂನ್ಯಕ್ಕೆ ಬಂದಿದೆ. ಇವತ್ತು ತಳಮಟ್ಟಕ್ಕೆ ಬಂದಿದೆ. ಆ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣ ಆಗಿದೆ ಎಂದು ಟೀಕಿಸಿದರು.ಮುಖ್ಯಮಂತ್ರಿಗಳೇ ಕನ್ನಡ ರಾಜ್ಯೋತ್ಸವದ ಕೊಡುಗೆ ಏನು? ನೀವು ಬಹಳ ದುಡ್ಡಿರುವವರು; ನಿಮ್ಮ ಮನೆಯಲ್ಲಿ ಬಿಸ್ಲೇರಿ ಕುಡಿಯಬಹುದು, ಆದರೆ ನಾವ್ಯಾರೂ ಬಿಸ್ಲೇರಿಯನ್ನು ಕುಡಿಯುವವರಲ್ಲ. ನಾವು ನಮ್ಮ ತಾಯಿ ಕಾವೇರಿಯ ನೀರನ್ನೇ ಕುಡಿಯುತ್ತೇವೆ ಎಂದು ತಿಳಿಸಿದರು.ನಿಮ್ಮ ಅಂತಸ್ತನ್ನು ನೋಡಿ ರಾಜ್ಯದ ಜನರ ಅಂತಸ್ತು ನಿರ್ಧರಿಸಬೇಡಿ. ಹಾಲಿಗೆ ನೀವು ದುಡ್ಡು ಕೊಡಬಹುದು. ಆದರೆ, ಯಾರು ಇವತ್ತು ದುಡಿದು ತಿಂತಿದ್ದಾರೋ, ಯಾರು ಹೋಟೆಲಲ್ಲಿ ಕೆಲಸ ಮಾಡಿ ಚಿಕ್ಕಪುಟ್ಟ ಸಂಬಳ ತಗೊಂಡು ಟ್ಯಾಕ್ಸಿ ಓಡಿಸಿಕೊಂಡು, ಆಟೋರಿಕ್ಷಾ ಓಡಿಸಿಕೊಂಡು, ಬೀದಿ ಬದಿ ವ್ಯಾಪಾರ ಮಾಡಿಕೊಂಡು ಬದುಕುವವರಿಗೆ ಕಷ್ಟವಾಗಿದೆ. ಸಿಕ್ಕಿದ ಸಂಬಳದಲ್ಲಿ ಮನೆ ಬಾಡಿಗೆ ಕಟ್ಟಬೇಕು, ವಿದ್ಯುತ್ ಬಿಲ್ ಕಟ್ಟಬೇಕು, ನೀರಿನ ಬಿಲ್ ಕಟ್ಟಬೇಕು, ನೀವು ಹಾಕಿದಂತ ಕಸದ ಬಿಲ್ ಕಟ್ಟಬೇಕು. ಅದರ ಜೊತೆಗೆ ಪ್ರತಿವರ್ಷ ನೀವು ಏರಿಸುವ ಹಾಲಿನ ದರಕ್ಕೆ, ಮೊಸರಿನ ದರಕ್ಕೆ ದುಡ್ಡು ಕೊಡಬೇಕಾಗಿದೆ ಎಂದು ಆಕ್ಷೇಪಿಸಿದರು.ಹಾಲಿನ ದರವನ್ನು ಈ ಸರ್ಕಾರವು ನಾಲ್ಕು ಬಾರಿ ಏರಿಸಿದೆ. 1 ಲೀ.ಹಾಲಿಗೆ 4 ರು. ಏರಿಸಿದ್ದರು. ಬಳಿಕ 3 ರು. ಏರಿಸಿದ್ದರು. ನಂತರ 2 ರು. ಹೆಚ್ಚಿಸಿದ್ದರು. ಆಮೇಲೆ ಈಗ 8 ರು. ಹೇಳಿದ್ದಾರೆ. ಆದರೆ, ಲೆಕ್ಕ ಮಾಡಿದರೆ ಅದು 12 ರು. ಹೆಚ್ಚಾಗಿದೆ. ಸಿದ್ದರಾಮಯ್ಯ ಅವರು ಮೂರು ಬಾರಿ ನಮಗೆ ಶಾಕ್ ಟ್ರೀಟ್ಮೆಂಟ್ ಕೊಟ್ಟಿದ್ದರು. ಡಿ.ಕೆ.ಶಿವಕುಮಾರ್‌ ಅವರು ಒಂದೇ ಬಾರಿ ‘ದಡಕ್’ ಅಂತ ಶಾಕ್ ಟ್ರೀಟ್‌ಮೆಂಟ್ ಕೊಟ್ಟಿದ್ದಾರೆ. ಇದನ್ನು ನಾವು ನಿರೀಕ್ಷೆ ಮಾಡಿಲ್ಲ ಎಂದರು.

ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಭಾರತಿ ಮಲ್ಲಿಕಾರ್ಜುನ, ಮುಖಂಡರಾದ ಪೂರ್ಣಿಮಾ ಪ್ರಕಾಶ್, ಮಂಜುಳಾ ದೇವಿ ಮತ್ತಿತರ ಮಹಿಳಾ ಮೋರ್ಚಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತೆಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಡ್ಡಂಡ ಕಾರ್ಯಪ್ಪಗೆ ಮಸಿ: 2 ಕೇಸ್‌ ದಾಖಲು
ಕೆಲವೆಡೆ ಕನ್ನಡಡಿಗರೇ ಕನ್ನಡದವಿರೋಧಿಗಳಾಗಿದ್ದಾರೆ: ಡಾ.ರಾಜಪ್ಪ