ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಡ್ರೈಯರ್ ಬಳಸಿ ಹೂವುಗಳನ್ನು ಒಣಗಿಸುವ ಪದ್ಧತಿ, ಹೂವಿನ ಪುಡಿ ತಯಾರಿಕೆ ಹಾಗೂ ಅಗರಬತ್ತಿ ಹೊಸೆಯುವಿಕೆಯ ಪದ್ಧತಿಯನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿಕೊಟ್ಟರು. ಸ್ವಸಹಾಯ ಸಂಘದ ಮಹಿಳೆಯರು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.
ದೊಡ್ಡಬಳ್ಳಾಪುರ: ಭಾರತೀಯ ಕೃಷಿ ಸಂಶೋಧನಾ ಪರಿಷತ್ತು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಹಾಡೋನಹಳ್ಳಿಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರ ಆವರಣದಲ್ಲಿ ಸ್ವಸಹಾಯ ಸಂಘದ ಮಹಿಳೆಯರಿಗೆ ತ್ಯಾಜ್ಯ ಹೂವುಗಳನ್ನು ಬಳಸಿ, ಅಗರಬತ್ತಿ ಮತ್ತು ಧೂಪ
ತಯಾರಿಕೆಯ ಬಗ್ಗೆ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಗೃಹ ವಿಜ್ಞಾನ ವಿಭಾಗದ ಅಧ್ಯಾಪಕಿ ಮೇಘನ.ಎಸ್.ವಿ ಮಾತನಾಡಿ, ಮಹಿಳೆಯರಿಗೆ ದೇವಸ್ಥಾನಗಳಿಂದ ಹಾಗೂ ವಿವಿಧ ಕಾರ್ಯಕ್ರಮಗಳ ನಂತರ ಬಳಸಿದ ಹೂವುಗಳನ್ನು ವ್ಯರ್ಥಮಾಡುವ ಬದಲು ಅಗರಬತ್ತಿ ತಯಾರಿಕೆಯಲ್ಲಿ ಬಳಸುವುದರಿಂದ ಪರಿಸರದ ಸ್ವಚ್ಛತೆಯನ್ನು ಕಾಪಾಡುವುದರ ಜೊತೆಗೆ ಹೆಚ್ಚಿನ ಆದಾಯ ಗಳಿಸಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಡ್ರೈಯರ್ ಬಳಸಿ ಹೂವುಗಳನ್ನು ಒಣಗಿಸುವ ಪದ್ಧತಿ, ಹೂವಿನ ಪುಡಿ ತಯಾರಿಕೆ ಹಾಗೂ ಅಗರಬತ್ತಿ ಹೊಸೆಯುವಿಕೆಯ ಪದ್ಧತಿಯನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿಕೊಟ್ಟರು. ಸ್ವಸಹಾಯ ಸಂಘದ ಮಹಿಳೆಯರು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.