ಲಕ್ಷ್ಮೇಶ್ವರದಲ್ಲಿ ಸಂಭ್ರಮದ ಅಗಸ್ತ್ಯ ತೀರ್ಥ ಜಾತ್ರಾ ಮಹೋತ್ಸವ

KannadaprabhaNewsNetwork |  
Published : Jan 15, 2026, 02:30 AM IST
ಲಕ್ಷ್ಮೇಶ್ವರದಲ್ಲಿ ಅಗಸ್ತ್ಯ ತೀರ್ಥ ಜಾತ್ರಾ ಮಹೋತ್ಸವ ನಡೆಯಿತು. | Kannada Prabha

ಸಾರಾಂಶ

ಪಟ್ಟಣದ ಅಗಸ್ತ್ಯ ತೀರ್ಥದಲ್ಲಿ ಮಕರ ಸಂಕ್ರಮಣದಂದು ಜರುಗುವ ಪುಣ್ಯಕಾಲದಲ್ಲಿ ಕ್ಷೇತ್ರದಲ್ಲಿನ ಅಕ್ಕ- ತಂಗಿಯರ ಹೊಂಡಗಳಲ್ಲಿ ಸ್ನಾನ ಮಾಡುವ ಮೂಲಕ ಭಕ್ತರು ಸಂಕ್ರಾಂತಿ ಆಚರಿಸಿದರು.

ಲಕ್ಷ್ಮೇಶ್ವರ: ಪಟ್ಟಣದಲ್ಲಿ ಪವಿತ್ರ ತೀರ್ಥ ಕ್ಷೇತ್ರಗಳಲ್ಲಿ ಒಂದಾಗಿರುವ ಅಗಸ್ತ್ಯ ತೀರ್ಥದ ಜಾತ್ರಾ ಮಹೋತ್ಸವವು ಜ. 14ರಂದು ಅದ್ಧೂರಿಯಾಗಿ ಜರುಗಿತು.

ಪಟ್ಟಣದ ಅಗಸ್ತ್ಯ ತೀರ್ಥದಲ್ಲಿ ಮಕರ ಸಂಕ್ರಮಣದಂದು ಜರುಗುವ ಪುಣ್ಯಕಾಲದಲ್ಲಿ ಕ್ಷೇತ್ರದಲ್ಲಿನ ಅಕ್ಕ- ತಂಗಿಯರ ಹೊಂಡಗಳಲ್ಲಿ ಸ್ನಾನ ಮಾಡುವ ಮೂಲಕ ಭಕ್ತರು ಸಂಕ್ರಾಂತಿ ಆಚರಿಸಿದರು.ಪಟ್ಟಣದಲ್ಲಿ ಇರುವ ಐದು ತೀರ್ಥ ಕ್ಷೇತ್ರಗಳಲ್ಲಿ ಅಗಸ್ತ್ಯ ತೀರ್ಥವು ಒಂದಾಗಿದೆ. ಇಲ್ಲಿ ಅಗಸ್ತ್ಯ ಮುನಿಗಳ ತಪಸ್ಸು ಮಾಡಿ ಪವಿತ್ರ ಹೊಂಡಗಳನ್ನು ನಿರ್ಮಿಸಿದ್ದರು ಎನ್ನುವ ಐತಿಹ್ಯವನ್ನು ಕ್ಷೇತ್ರ ಹೊಂದಿದೆ. ಮಕರ ಸಂಕ್ರಾಂತಿಯ ಪುಣ್ಯಕಾಲದಲ್ಲಿ ಈ ಹೊಂಡಗಳಲ್ಲಿ ಸ್ನಾನ ಮಾಡಿದರೆ ನಮ್ಮ ಪಾಪಗಳು ದೂರಾಗುತ್ತವೆ ಎನ್ನುವ ನಂಬಿಕೆ ಈ ಭಾಗದಲ್ಲಿ ಜನಜನಿತವಾಗಿದೆ. ಈ ಪವಿತ್ರ ಹೊಂಡಗಳಲ್ಲಿ ವಿವಿಧ ಗ್ರಾಮಗಳಿಂದ ಭಕ್ತರು ಚಕ್ಕಡಿ, ಟ್ರ್ಯಾಕ್ಟರ್‌ಗಳಲ್ಲಿ ಆಗಮಿಸಿ ಸ್ನಾನ ಮಾಡಿದರು. 18ರಂದು ನರಗುಂದದಲ್ಲಿ ಹಿಂದೂ ಸಮ್ಮೇಳನ

ನರಗುಂದ: ಜ.18ರಂದು ಪಟ್ಟಣದ ವೀರ ಬಾಬಾಸಾಹೇಬರ ಅರಮನೆ ಆವರಣದಲ್ಲಿ ಹಿಂದೂ ಸಮ್ಮೇಳನ ನಡೆಯಲಿದೆ ಎಂದು ಹುಬ್ಬಳ್ಳಿಯ ದಿಕ್ಸೂಚಿ ಭಾಷಣಕಾರ ಗೋವಿಂದಪ್ಪ ಗೌಡಪ್ಪಗೊಳ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಾರತ ಹಿಂದೂ ಧರ್ಮದ ಪರಂಪರೆ ಸಾವಿರಾರು ವರ್ಷದ ಇತಿಹಾಸ ಹೊಂದಿದ ದೇಶವಾಗಿದೆ. ಆದ್ದರಿಂದ ದೇಶ ಹಿಂದೂ ರಾಷ್ಟ್ರವೆಂದು ಧೈರ್ಯದಿಂದ ಹೇಳುತ್ತೇನೆ ಎಂದರು.ಹಿಂದೂ ಮತಯಾಚಕವಲ್ಲ, ಧರ್ಮವಾಚಕವಲ್ಲ, ರಾಷ್ಟ್ರವಾಚಕ ರಾಷ್ಟ್ರಸೂಚಕವಾಗಿದೆ. ಭಾರತದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷದ ಹಿನ್ನೆಲೆ ಸಾವಿರಾರು ಹಿಂದು ಸಮಾವೇಶಗಳನ್ನು ನಡೆಸುವ ಗುರಿಯನ್ನು ಹೊಂದಿದೆ ಎಂದರು.

ಕಾರ್ಯಕ್ರಮ ಸ್ವಾಗತ ಸಮಿತಿ ಅಧ್ಯಕ್ಷ ವಾಸಣ್ಣ ಬೋನಗೇರಿ ಮಾತನಾಡಿ, ಸಮಾವೇಶ ಜ. 18ರಂದು ಬಾಬಾ ಸಾಹೇಬರ ಅರಮನೆಯ ಮುಂದಿನ ಮೈದಾನದಲ್ಲಿ ಬೃಹತ್ ಹಿಂದೂ ಸಮಾವೇಶ ಆಯೋಜಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಸದಸ್ಯರು, ಸಮಾಜದವರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಖಾಸಗಿ ಶಾಲೆಗಿಂತ ಅಂಗನವಾಡಿಯಲ್ಲಿ ಉತ್ತಮ ಶಿಕ್ಷಣ
ಯುವತಿ ರಿಶೆಲ್ ಆತ್ಮಹತ್ಯೆ ಪ್ರಕರಣ; ರಾಜಕೀಯ ಬಲದಿಂದ ಆರೋಪಿ ರಕ್ಷಣೆ ಆರೋಪ