ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಅವರು ಪಟ್ಟಣದ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಾಸನ ಜಿಲ್ಲಾಧಿಕಾರಿ ಮೀಸಲಾತಿ ಪಟ್ಟಿ ಪ್ರಕಟ ಮಾಡುವ ಮುನ್ನ ಸಾರ್ವಜನಿಕರ ಅಭಿಪ್ರಾಯ ವ್ಯಕ್ತಪಡಿಸಲು ಒಂದು ಅವಕಾಶ ಕೊಡಬಹುದಿತ್ತು. ಆದರೆ ಜಿಲ್ಲಾಧಿಕಾರಿಗಳು ಆ ಕೆಲಸವನ್ನು ಮಾಡದೆ ಏಕ ಪಕ್ಷೀಯ ನಿರ್ಧಾರ ಕೈಗೊಂಡು ಅವೈಜ್ಞಾನಿಕ ಪಟ್ಟಿ ತಯಾರಿಸುವುದು ಹಲವು ಸಮುದಾಯದ ವರ್ಗಕ್ಕೆ ಅನ್ಯಾಯವಾಗಿದೆ ಎಂದರು. ಮೀಸಲಾತಿ ಪಟ್ಟಿ ಅವೈಜ್ಞಾನಿಕವಾಗಿ ತಯಾರಿಸಿರುವ ಹಿನ್ನೆಲೆಯಲ್ಲಿ ಮಾಜಿ ಮಂತ್ರಿ ಎಚ್. ಡಿ. ರೇವಣ್ಣ, ಎ. ಮಂಜು, ಶಾಸಕರಾದ ಎಚ್. ಕೆ. ಕುಮಾರಸ್ವಾಮಿ, ಸ್ವರೂಪ್ ಪ್ರಕಾಶ್ ಪತ್ರಿಕಾಗೋಷ್ಠಿಯ ಮೂಲಕ ಇದನ್ನು ಖಂಡಿಸಿದ್ದಾರೆ. ಕಾರಣ ತಪ್ಪಾಗಿರುವುದನ್ನು ಸರಿಪಡಿಸದಿದ್ದರೆ ಹಲವು ಸಮುದಾಯಕ್ಕೆ ಅನ್ಯಾಯವಾಗುತ್ತದೆ ಎಂಬ ಕಾರಣಕ್ಕೆ ಜಿಲ್ಲಾಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಈಗಲೂ ಕಾಲಾವಕಾಶವಿದ್ದು ಕೂಡಲೇ ಅದನ್ನು ಸರಿಪಡಿಸುವ ಮೂಲಕ ವೈಜ್ಞಾನಿಕ ಮೀಸಲಾತಿ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ಕಳುಹಿಸಿಕೊಡಬೇಕು ಎಂದು ಅಗ್ರಹ ಮಾಡಿದರು.
ಈಗಾಗಲೇ ಅಂಬೇಡ್ಕರ್ ಪ್ರತಿಮೆಯನ್ನು ಉದ್ಘಾಟನೆ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರನ್ನು ದಿನಾಂಕ ಕೇಳಿದ್ದು ಶೀಘ್ರದಲ್ಲೇ ನಿಗದಿ ಮಾಡಿ ತಮಗೆ ತಿಳಿಸುವುದಾಗಿ ಹೇಳಿದ್ದು ಅರ್ಥಪೂರ್ಣವಾಗಿ ಕಾರ್ಯಕ್ರಮವನ್ನು ನಡೆಸಲು ಈಗಾಗಲೇ ನಿರ್ಧರಿಸಲಾಗಿದೆ ಎಂದರು.