ಕೃಷಿ ಪರಿಕರಗಳ ಮಾರಾಟಗಾರರು ಸೇವಾ ಬದ್ಧತೆ ಪ್ರದರ್ಶಿಸಬೇಕು: ಹಂಸವೇಣಿ

KannadaprabhaNewsNetwork |  
Published : Jun 07, 2025, 12:58 AM IST
6ಕೆಕೆಡಿಯು2.. | Kannada Prabha

ಸಾರಾಂಶ

ಕಡೂರುಕೃಷಿ ಪರಿಕರಗಳ ಮಾರಾಟಗಾರರು ಕಾನೂನುಗಳನ್ನು ಪಾಲಿಸಿ ರೈತರಿಗೆ ಅನುಕೂಲವಾಗುವಂತೆ ತಮ್ಮ ವ್ಯವಹಾರದಲ್ಲಿ ಸೇವಾ ಬದ್ಧತೆ ಪ್ರದರ್ಶಿಸಬೇಕು ಎಂದು ಕೃಷಿ ಇಲಾಖೆ ಉಪನಿರ್ದೇಶಕಿ ಹಂಸವೇಣಿ ಹೇಳಿದರು.

ಅರಿವಿನ ಮನೆ ರೈತ ಸಭಾಂಗಣದಲ್ಲಿ ಕೃಷಿ ಇಲಾಖೆಯಿಂದ ನಡೆದ ತಾಲೂಕಿನ ಕೃಷಿ ಪರಿಕರ ಮಾರಾಟಗಾರರ ಸಭೆ ಉದ್ಘಾಟಿಸಿ

ಕನ್ನಡಪ್ರಭ ವಾರ್ತೆ, ಕಡೂರು

ಕೃಷಿ ಪರಿಕರಗಳ ಮಾರಾಟಗಾರರು ಕಾನೂನುಗಳನ್ನು ಪಾಲಿಸಿ ರೈತರಿಗೆ ಅನುಕೂಲವಾಗುವಂತೆ ತಮ್ಮ ವ್ಯವಹಾರದಲ್ಲಿ ಸೇವಾ ಬದ್ಧತೆ ಪ್ರದರ್ಶಿಸಬೇಕು ಎಂದು ಕೃಷಿ ಇಲಾಖೆ ಉಪನಿರ್ದೇಶಕಿ ಹಂಸವೇಣಿ ಹೇಳಿದರು.ಶುಕ್ರವಾರ ಪಟ್ಟಣದ ಅರಿವಿನ ಮನೆ ರೈತ ಸಭಾಂಗಣದಲ್ಲಿ ಕೃಷಿ ಇಲಾಖೆಯಿಂದ ನಡೆದ ತಾಲೂಕಿನ ಕೃಷಿ ಪರಿಕರ ಮಾರಾಟಗಾರರ ಸಭೆ ಉದ್ಘಾಟಿಸಿ ಮಾತನಾಡಿದರು. ಪರಿಕರಗಳ ಮಾರಾಟಗಾರರು ಇಲಾಖೆ ನಡುವಿನ ಸಂಪರ್ಕ ಕೊಂಡಿ ಯಾಗಿ ಕಾರ್ಯನಿರ್ವಹಿಸುತ್ತಿರುವುದು ರೈತರ ಅಭಿವೃದ್ಧಿಗೆ ವರದಾನ. ಈಗಾಗಲೇ ತಮ್ಮಗಳ ವ್ಯವಹಾರಿಕ ಹಿತದೃಷ್ಟಿ ಯೊಂದಿಗೆ ರೈತರ ಪ್ರಗತಿಗೂ ಹೆಚ್ಚು ಗಮನ ನೀಡಿದಾಗ ಮಾಡುವ ಕಾರ್ಯದಲ್ಲಿ ಸಫಲರಾಗಲು ಸಾಧ್ಯ ಎಂದರು.ಈಗಾಗಲೇ ಇಲಾಖೆಯಿಂದ ಪ್ರತಿವರ್ಷ ಸರಕಾರದಿಂದ ಜಾರಿಗೊಳ್ಳುವ ನಿಯಾಮಾವಳಿಗಳ ಮಾಹಿತಿ ನೀಡುವ ಮೂಲಕ ತಮ್ಮ ಕಾರ್ಯನಿರ್ವಹಣೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಅನುಸರಿಸುವಂತೆ ನಿರ್ದೇಶನ ನೀಡಲಾಗುತ್ತದೆ. ಕಾಳಸಂತೆ ಮಾರಾಟ ದಲ್ಲಿ ಕಳಪೆಮಟ್ಟದ ಬಿತ್ತನೆ ಬೀಜ, ಕಳೆನಾಶಕ ನೀಡಿ ರೈತರಿಗೆ ವಂಚಿಸುತ್ತಿರುವ ಪ್ರಕರಣಗಳು ಸಾಕಷ್ಟಿವೆ. ಇವುಗಳಿಗೆ ಕಡಿವಾಣ ಹಾಕಲು ಪರಿಕರಗಳ ಮಾರಾಟಗಾರರು ಸನ್ನದ್ಧರಾಗಬೇಕು. ಪ್ರತಿಯೊಂದು ಮಾರಾಟಗಳಿಗೆ ಪರವಾನಗಿ ಪಡೆದು ಕೊಂಡು ಪಾರದರ್ಶಕತೆ ಮಾರಾಟದಿಂದ ರೈತರಿಗೆ ನ್ಯಾಯ ದೊರಕಿಸಿಕೊಡಲು ಶ್ರಮಿಸಬೇಕು ಎಂದರು.ಜಾರಿದಳದ ಸಹಾಯಕ ಕೃಷಿ ನಿರ್ದೇಶಕ ತಿಮ್ಮನಗೌಡ ಪಾಟೀಲ್ ಮಾತನಾಡಿ, ಸಮರ್ಪಕ ದಾಖಲೆಗಳನ್ನು ಪರಿಕರ ಗಳ ಮಾರಾಟಗಾರರು ತಮ್ಮ ಮಳಿಗೆಗಳಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು. ಯೂರಿಯಾ ಗೊಬ್ಬರವನ್ನು ನಿಗಧಿತದ ಒಂದು ಬ್ಯಾಗ್ ₹266 ದರಕ್ಕಿಂತ ಹೆಚ್ಚು ಮಾರಾಟ ಮಾಡುವುದು ಕಾನೂನು ಬಾಹೀರ. ಕೇಂದ್ರ ಸರಕಾರದಿಂದ ಸಬ್ಸಿಡಿ ದರದಲ್ಲಿ ಸಿಗುವ ಯೂರಿಯಾ ವನ್ನು ರೈತರಿಗೆ ಮಾತ್ರ ಮಾರಾಟ ಮಾಡಬೇಕು. ಅನ್ಯವ್ಯಕ್ತಿಗಳಿಗೆ ಸಬ್ಸಿಡಿ ಯೂರಿಯಾ ಗೊಬ್ಬರ ಮಾರಾಟ ಮಾಡಿರುವುದು ಕಂಡುಬಂದಲ್ಲಿ ಕೂಡಲೇ ಕಾನೂನು ಕ್ರಮ ವಹಿಸಲಾಗುತ್ತದೆ. ಇಂತಹ ಪ್ರಕರಣಗಳಲ್ಲಿ ಈಗಾಗಲೇ 3 ಮಳಿಗೆಗಳನ್ನು ಸೀಜ್ ಮಾಡಲಾಗಿದೆ. ಮಾರಾಟಗಾರರು ನಿಗಧಿತ ಮಳಿಗೆ ಬಿಟ್ಟು ಪ್ರತ್ಯೇಕ ಸ್ಥಳದಲ್ಲಿ ಪರಿಕರಗಳನ್ನು ಮಾರಾಟ ಮಾಡಿದರೆ ಪರವಾನಗಿ ಪಡೆಯುವುದು ಕಡ್ಡಾಯ. ಸರಕಾರದಿಂದ ಅನುಮೋದಿತಗೊಂದ ಸಿಐಆರ್‍ಬಿ ನೋಂದಣಿಯಾಗಿರುವ ಕೀಟನಾಶಕ ಮಾರಾಟ ಮಾಡಬೇಕು ಎಂದರು.ಜಿಲ್ಲೆಗಳಿಗೆ ಪೂರ್ವನಿಗಧಿಯಂತೆ ರಸಗೊಬ್ಬರ ಹಂಚಿಕೆ ಮಾಡಲಾಗಿದೆ. ಆದರೆ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಅನುಮತಿ ಇಲ್ಲದೆ ಬೇರೆ ಜಿಲ್ಲೆಗಳಿಗೆ ರಸಗೊಬ್ಬರ ಮಾರಾಟ ಮಾಡುವಂತಿಲ್ಲ. ಪ್ರತಿ ತಿಂಗಳು ಮಾರಾಟಗಾರರು ತಮ್ಮ ದಾಸ್ತಾನಿನ ಮಾಹಿತಿಯನ್ನು ಕೃಷಿ ಇಲಾಖೆಗೆ ಮಾಹಿತಿ ಸಲ್ಲಿಸಬೇಕು. ಸುರಕ್ಷಿತ ಕೀಟನಾಶಕಗಳ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಬೇಕು. ಕಳಪೆ ಡಿಎಪಿ ಗೊಬ್ಬರ ಸರಬರಾಜುಗೊಂಡರೆ ಮಾರಾಟ ಮಾಡದೆ ಕೂಡಲೇ ಇಲಾಖೆ ಗಮನಕ್ಕೆ ತರಬೇಕು ಎಂದರು.ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ ಎಂ. ಅಶೋಕ್ ಮಾತನಾಡಿ, ರೈತರು ಬೆಳೆದ ಬೆಳೆಯಲ್ಲಿ ಅಭಿವೃದ್ಧಿಗೊಂಡರೆ ಇಲಾಖೆ ಮತ್ತು ಪರಿಕರಗಳ ಮಾರಾಟಗಾರರಿಗೆ ಹೆಚ್ಚು ಖುಷಿಕೊಡಲಿದೆ. ಮಾರಾಟಗಾರರು ದುಡಿಮೆ ಜೊತೆಗೆ ರೈತ ಸ್ನೇಹಿ ಯಾಗಿ ಕಾರ್ಯನಿರ್ವಹಿಸಿದಾಗ ಗೌರವ ಭಾವನೆ ಮೂಡಲಿದೆ. ಈ ನಿಟ್ಟಿನಲ್ಲಿ ಇಲಾಖೆ ಮೂಲಕ ಮುಂಗಾರು ಹಂಗಾಮಿನಲ್ಲಿ ಪರಿಕರಗಳ ಮಾರಾಟಗಾರರು ಕೈಗೊಳ್ಳಬಹುದಾದ ಕ್ರಮಗಳನ್ನು ಅನುಸರಿಸುವಂತೆ ಹಿರಿಯ ಅಧಿಕಾರಿಗಳಿಂದ ಮಾಹಿತಿ ದೊರಕಿಸುವ ಪ್ರಯತ್ನ ಮಾಡಲಾಗಿದೆ ಎಂದರು.ಸಭೆಯಲ್ಲಿ ಕೃಷಿ ಸಹಾಯಕ ನಿರ್ದೇಶಕ ವೆಂಕಟೇಶ್ ಚವ್ಹಾಣ್, ಪರಿಕರಗಳ ಮಾರಾಟಗಾರರ ಸಂಘದ ಅಧ್ಯಕ್ಷ ಚಂದ್ರು, ಕಾರ್ಯದರ್ಶಿ ಕುಮಾರ್, ನಟರಾಜ್, ವಿಕ್ರಮ್, ಸೋಮಶೇಖರ್, ಚಂದ್ರಪ್ಪ, ಎಂ. ಶೀಲಾ, ಹರೀಶ್ ಸೇರಿದಂತೆ ಇಲಾಖೆ ಸಿಬ್ಬಂದಿ ಇದ್ದರು.6ಕೆಕೆಡಿಯು2.

ಕಡೂರು ಪಟ್ಟಣದ ಅರಿವಿನ ಮನೆ ರೈತ ಸಭಾಂಗಣದಲ್ಲಿ ಕೃಷಿ ಇಲಾಖೆಯಿಂದ ನಡೆದ ತಾಲೂಕಿನ ಕೃಷಿ ಪರಿಕರ ಮಾರಾಟಗಾರರ ಸಭೆಯಲ್ಲಿ ಕಾನೂನು ಬಾಹಿರ ಮಾರಾಟದ ವಸ್ತುಗಳ ಭಿತ್ತಿಚಿತ್ರಗಳನ್ನು ಕೃಷಿ ಇಲಾಖೆ ಉಪನಿರ್ದೇಶಕಿ ಹಂಸವೇಣಿ ಬಿಡುಗಡೆಗೊಳಿಸಿದರು. ತಿಮ್ಮನಗೌಡಪಾಟೀಲ್, ಎಂ.ಅಶೋಕ್, ವೆಂಕಟೇಶ್ ಚವ್ಹಾಣ್, ನಟರಾಜ್, ಹರೀಶ್ ಮತ್ತಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''