ಬೇಡಿಕೆ ಈಡೇರಿಕೆಗಾಗಿ ಕೃಷಿ ಕೂಲಿ ಕಾರ್ಮಿಕರ ಪ್ರತಿಭಟನೆ

KannadaprabhaNewsNetwork |  
Published : Jan 19, 2025, 02:18 AM IST
18ಕೆಎಂಎನ್ ಡಿ27 | Kannada Prabha

ಸಾರಾಂಶ

ವರ್ಷಕ್ಕೆ ಒಂದು ಕುಟುಂಬಕ್ಕೆ ಕೇವಲ 100 ದಿನಗಳ ಕೆಲಸ ನೀಡುತ್ತಿದ್ದು ಇದು ಸಾಲದು. ಇದರ ಬದಲು 200 ದಿನಗಳ ಕೆಲಸ ಕೊಡಬೇಕು. ದಿನಕ್ಕೆ 349 ರು. ಕೂಲಿ ಇದೆ. ಇದನ್ನು ಕನಿಷ್ಠ 600ಕ್ಕೆ ಹಚ್ಚಳ ಮಾಡಬೇಕು. ಕೂಲಿ ವೇತನ ನೀಡುವುದು ವಿಳಂಭವಾಗುತ್ತಿದೆ. ವಾರಕ್ಕೊಮ್ಮೆ ಬ್ಯಾಂಕ್ ಮೂಲಕ ಹಣ ಪಾವತಿಸಬೇಕು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಕೂಲಿ ದರ, ಕೂಲಿ ದಿನಗಳ ಹೆಚ್ಚಳಕ್ಕೆ ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರು ಲಕ್ಷ್ಮೀಪುರ ಗ್ರಾಮ ಪಂಚಾಯ್ತಿ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಪ್ರಾಂತ ಕೃಷಿ ಕೂಲಿಕಾರರ ಸಂಘದ ತಾಲೂಕು ಅಧ್ಯಕ್ಷ ಜಿ.ಎಚ್.ಗಿರೀಶ್, ಕೂಲಿಕಾರರು ತಮ್ಮ ಬದುಕಿಗಾಗಿ ಅವಶ್ಯಕ ಬೇಡಿಕೆಗಳನ್ನು ಇಟ್ಟಿದ್ದು ಸಕಾರಾತ್ಮಕವಾಗಿ ಸ್ಪಂದಿಸಿ ಸಹಕರಿಸಿ ಎಂದು ಆಗ್ರಹಿಸಿದರು.

ವರ್ಷಕ್ಕೆ ಒಂದು ಕುಟುಂಬಕ್ಕೆ ಕೇವಲ 100 ದಿನಗಳ ಕೆಲಸ ನೀಡುತ್ತಿದ್ದು ಇದು ಸಾಲದು. ಇದರ ಬದಲು 200 ದಿನಗಳ ಕೆಲಸ ಕೊಡಬೇಕು. ದಿನಕ್ಕೆ 349 ರು. ಕೂಲಿ ಇದೆ. ಇದನ್ನು ಕನಿಷ್ಠ 600ಕ್ಕೆ ಹಚ್ಚಳ ಮಾಡಬೇಕು ಎಂದು ಆಗ್ರಹಿಸಿದರು.

ಕೂಲಿ ವೇತನ ನೀಡುವುದು ವಿಳಂಭವಾಗುತ್ತಿದೆ. ವಾರಕ್ಕೊಮ್ಮೆ ಬ್ಯಾಂಕ್ ಮೂಲಕ ಹಣ ಪಾವತಿಸಬೇಕು. ದಿನಕ್ಕೆ 2 ಬಾರಿ ಫೋಟೋ ತೆಗೆಯುವ ಬದಲು ಒಂದು ಬಾರಿ ತೆಗೆಯುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

ತಮಿಳುನಾಡು, ಕೇರಳದಲ್ಲಿ ಹಿರಿಯ ನಾಗರೀಕರಿಗೆ ನೀಡುತ್ತಿರುವಂತೆ 5 ಸಾವಿರ ರು. ಮಾಶಾಸನ, ಸ್ಮಶಾನ ಇಲ್ಲದ ಗ್ರಾಮಗಳಲ್ಲಿ ಸ್ಮಶಾನದ ವ್ಯವಸ್ಥೆ, ನಿರಾಶ್ರಿತರಿಗೆ ಸೂರು ಇಲ್ಲದೆ ಪರಿತಪಿಸುತ್ತಿದ್ದಾರೆ. ಸಂಕಷ್ಟದಲ್ಲಿರುವವರಿಗೆ ಮನೆ ನಿರ್ಮಿಸಬೇಕು. ರಿಯಾಯ್ತಿ ದರದಲ್ಲಿ ಬ್ಯಾಂಕ್‌ನಲ್ಲಿ ಸಾಲ ಸೌಲಭ್ಯ ನೀಡಲು ಮನವಿ ಸಲ್ಲಿಸಿದರು.

ಪಿಡಿಒ ಸುರೇಶಬಾಬು ಮನವಿ ಸ್ವೀಕರಿಸಿ ಮೇಲಾಧಿಕಾರಿಗಳಿಗೆ ತಮ್ಮ ಬೇಡಿಕೆ ಮನವರಿಕೆ ಮಾಡಲಾಗುವುದು ಎಂದು ಹೇಳಿದರು. ಪ್ರತಿಭಟನೆಯಲ್ಲಿ ಗೋಪಾಲ, ಜಯರಾಂ, ಶಿವಕುಮಾರ, ಪುಟ್ಟರಾಜು, ದೇವರಾಜು, ಜಯಮ್ಮ, ಶಿವಕುಮಾರಿ, ಮಂಜುಳಾ, ಸೋನಿಯಾ, ವಿನೋದಾ, ಜಯಲಕ್ಷ್ಮೀ.ರೂಪಾ, ಪೂಜಾ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!