11ರಂದು ರಂಭಾಪುರಿ ಪೀಠದಲ್ಲಿ ಕೃಷಿ ಸಮ್ಮೇಳನ ಉದ್ಘಾಟನೆ

KannadaprabhaNewsNetwork | Published : Mar 5, 2025 12:31 AM

ಸಾರಾಂಶ

ಬಾಳೆಹೊನ್ನೂರು, ಎನ್.ಆರ್.ಪುರ ತಾಲೂಕು ಪತ್ರಕರ್ತರ ಸಂಘದ ಸಹಯೋಗದಲ್ಲಿ ಮಾ.11ರ ಮಂಗಳವಾರ ವಿಶೇಷ ಕೃಷಿ ಸಮ್ಮೇಳನ ಹಾಗೂ ಕಾಫಿ, ಅಡಕೆ ಬೆಳೆಗಾರರ ಚಿಂತನ-ಮಂಥನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ರವಿಚಂದ್ರ ಎಸ್‌ಟಿಡಿ ತಿಳಿಸಿದ್ದಾರೆ.

ಆಹ್ವಾನ ಪತ್ರಿಕೆ ಬಿಡುಗಡೆಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ರವಿಚಂದ್ರಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಎನ್.ಆರ್.ಪುರ ತಾಲೂಕು ಪತ್ರಕರ್ತರ ಸಂಘದ ಸಹಯೋಗದಲ್ಲಿ ಮಾ.11ರ ಮಂಗಳವಾರ ವಿಶೇಷ ಕೃಷಿ ಸಮ್ಮೇಳನ ಹಾಗೂ ಕಾಫಿ, ಅಡಕೆ ಬೆಳೆಗಾರರ ಚಿಂತನ-ಮಂಥನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ರವಿಚಂದ್ರ ಎಸ್‌ಟಿಡಿ ತಿಳಿಸಿದ್ದಾರೆ.ಪಟ್ಟಣದ ಜೇಸಿ ವೃತ್ತದ ಗಣಪತಿ ದೇವಸ್ಥಾನದಲ್ಲಿ ಮಂಗಳವಾರ ಸಮ್ಮೇಳನದ ಆಹ್ವಾನ ಪತ್ರಿಕೆ ಹಾಗೂ ಬ್ಯಾನರ್ ಬಿಡುಗಡೆಗೊಳಿಸಿ ಮಾತನಾಡಿದರು. ಮಾ.11ರಂದು ಬೆಳಿಗ್ಗೆ 11ಕ್ಕೆ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಸಮ್ಮೇಳನ ಆರಂಭಗೊಳ್ಳಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಶಾಸಕ ಟಿ.ಡಿ.ರಾಜೇಗೌಡ, ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ. ಆರತಿಕೃಷ್ಣ, ಮಾಜಿ ಸಚಿವ ಎಚ್.ಡಿ.ರೇವಣ್ಣ, ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ದೇವವೃಂದ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.

ಮಧ್ಯಾಹ್ನ 2 ಕ್ಕೆ ಕಾಫಿ ಬೆಳೆಯ ಕುರಿತು ವಿಶೇಷ ಗೋಷ್ಠಿ, ಉಪನ್ಯಾಸ ನಡೆಯಲಿದ್ದು, ಕೆಜಿಎಫ್ ಖಜಾಂಚಿ ಎಂ.ಕೆ. ಸುಂದರೇಶ್, ಕಾಫಿ ಮಂಡಳಿ ಸದಸ್ಯ ಎ.ಜಿ.ದಿವಿನ್‌ರಾಜ್, ಡಾ.ಎಚ್.ಎಸ್.ಕೃಷ್ಣಾನಂದ, ಸಿಸಿಆರ್‌ಐ ಸಂಶೋಧನಾ ನಿರ್ದೇಶಕ ಡಾ. ಸೆಂಥಿಲ್‌ಕುಮಾರ್ ಭಾಗವಹಿಸಲಿದ್ದಾರೆ. ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ಭವಿಷ್ಯದಲ್ಲಿ ಭಾರತೀಯ ಕಾಫಿ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ.ಮಧ್ಯಾಹ್ನ 3 ಕ್ಕೆ ಅಡಕೆ ಬೆಳೆ ಕುರಿತು ಗೋಷ್ಠಿ ನಡೆಯಲಿದ್ದು, ಪ್ರಾಂತ್ಯ ಅಡಕೆ ಬೆಳೆಗಾರ ಸಂಘದ ಅಧ್ಯಕ್ಷ ತಲವಾನೆ ಪ್ರಕಾಶ್, ಕಾಫಿ ಮಂಡಳಿ ಸದಸ್ಯ ಜಿ.ಎಸ್.ಮಹಾಬಲರಾವ್ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ. ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಅಡಕೆ ಬೆಳೆಗಾರರ ಸಮಸ್ಯೆ, ಪರಿಹಾರ ಕುರಿತು, ಗ್ರೀನ್ ಬಯೋಟೆಕ್ ವ್ಯವಸ್ಥಾಪಕ ನಿರ್ದೇಶಕ ಡಾ.ನವೀನ್ ಮಿಸ್ಕಿತ್ ಕೃಷಿಯಲ್ಲಿ ಮಣ್ಣಿನ ಫಲವತ್ತತೆ ಮತ್ತು ಸಂರಕ್ಷಣೆ ವಿನೂತನ ವಿಧಾನದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.ಸಂಜೆ 6.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪಗೌಡ ದರ್ಶನಾಪುರ, ಶಾಸಕ ಎಚ್.ಕೆ.ಸುರೇಶ್, ಜೆ.ಟಿ.ಪಾಟೀಲ, ಸಿ.ಟಿ.ರವಿ, ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಪ್ರವಾಸೋದ್ಯಮ ನಿಗಮ ಅಧ್ಯಕ್ಷ ಎಂ.ಶ್ರೀನಿವಾಸ್ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.ಸಮ್ಮೇಳನದ ಅಂಗವಾಗಿ ವಿಶೇಷ ಕೃಷಿ ಸಂಬಂಧಿತ ಯಂತ್ರೋಪಕರಣ ಹಾಗೂ ಇತರೆ ಆಕರ್ಷಕ ಮಳಿಗೆಗಳ ಪ್ರದರ್ಶನ ಮತ್ತು ಮಾರಾಟ ಸಹ ಆಯೋಜಿಸಲಾಗಿದೆ. ಇದರೊಂದಿಗೆ ಕಾಫಿ, ಅಡಕೆ ಬೆಳೆಗಾರರ ತೋಟದ ಮಣ್ಣಿನ ಮಾದರಿಯನ್ನು ಕಾಫಿ ಸಂಶೋಧನಾ ಕೇಂದ್ರದ ನುರಿತ ವಿಜ್ಞಾನಿಗಳು ಸ್ಥಳದಲ್ಲಿಯೇ ಪರೀಕ್ಷಿಸಿ ಬೆಳೆಗಾರರು ತಮ್ಮ ಜಮೀನಿನಲ್ಲಿ ಕೈಗೊಳ್ಳ ಬೇಕಾದ ಕ್ರಮಗಳ ಕುರಿತು ವರದಿ ನೀಡಲಿದ್ದಾರೆ.ಕೊಪ್ಪದ ಎ.ಎಲ್.ಎನ್.ರಾವ್ ಆಯುರ್ವೇದ ಆಸ್ಪತ್ರೆ ನುರಿತ ವೈದ್ಯಾಧಿಕಾರಿಗಳ ತಂಡದಿಂದ ಬೆಳೆಗಾರರು, ಸಾರ್ವಜನಿಕರಿ ಗಾಗಿ ಉಚಿತ ಆರೋಗ್ಯ ತಪಾಸಣೆ, ಸಮಾಲೋಚನಾ ಶಿಬಿರ ಸಹ ನಡೆಯಲಿದೆ.

ಪತ್ರಕರ್ತರ ಸಂಘದ ಅಧ್ಯಕ್ಷ ಸಚಿನ್‌ಕುಮಾರ್, ಕಾರ್ಯದರ್ಶಿ ನಾಗರಾಜಭಟ್, ಸ್ವಾಗತ ಸಮಿತಿ ಗೌರವಾಧ್ಯಕ್ಷ ಎಂ.ಎಸ್. ಚನ್ನಕೇಶವ್, ಹಿರಿಯಣ್ಣ, ಟಿ.ಎಂ.ಉಮೇಶ್, ಸಿ.ಪಿ.ರಮೇಶ್, ಇಬ್ರಾಹಿಂ ಶಾಫಿ, ಚೈತನ್ಯ ವೆಂಕಿ, ಸಿ.ಟಿ.ರೇವತಿ, ವಿದ್ಯಾಶೆಟ್ಟಿ, ಬಿ.ಸಿ.ಸಂತೋಷ್‌ಕುಮಾರ್, ಕೆ.ಸಿ.ವೆಂಕಟೇಶ್, ಕೆ.ಆರ್.ಬೂದೇಶ್, ಸಿ.ವಿ.ಸುನೀಲ್, ಪ್ರಭಾಕರ್ ಪ್ರಣಸ್ವಿ, ವಿ.ಅಶೋಕ್, ಜಗದೀಶ್ ಅರಳೀಕೊಪ್ಪ, ರತ್ನಾಕರ್ ಗಡಿಗೇಶ್ವರ, ಎಚ್.ಉಮೇಶ್, ಸತೀಶ್ ಜೈನ್, ಯಜ್ಞಪುರುಷಭಟ್, ಮೋಹನ್, ಸತೀಶ್ ಅರಳೀಕೊಪ್ಪ ಮತ್ತಿತರರು ಹಾಜರಿದ್ದರು.

೦೪ಬಿಹೆಚ್‌ಆರ್ ೧:

ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ಮಾ.೧೧ರಂದು ನಡೆಯಲಿರುವ ಕೃಷಿ ಸಮ್ಮೇಳನದ ಆಹ್ವಾನಪತ್ರಿಕೆ, ಬ್ಯಾನರನ್ನು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ರವಿಚಂದ್ರ ಬಿಡುಗಡೆಗೊಳಿಸಿದರು. ಚನ್ನಕೇಶವ್, ಹಿರಿಯಣ್ಣ, ಉಮೇಶ್, ಸಿ.ಟಿ.ರೇವತಿ, ವೆಂಕಟೇಶ್, ಪ್ರಭಾಕರ್ ಇದ್ದರು.

Share this article