ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಅವರು ಪಟ್ಟಣದ ಕೃಷಿ ಇಲಾಖೆ ಕಚೇರಿಯಲ್ಲಿ ಕೆ.ಆರ್. ನಗರ ಮತ್ತು ಸಾಲಿಗ್ರಾಮ ಅವಳಿ ತಾಲ್ಲೂಕಿನ ರೈತ ಮುಖಂಡರು ಮತ್ತು ಕೃಷಿ ಪರಿಕರ ಮಾರಾಟಗಾರರ ಸಭೆ ಉದ್ಘಾಟಿಸಿ ಮಾತನಾಡಿದರು.
ರೈತರು ಭಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕ, ಔಷಧಿ ಸೇರಿದಂತೆ ಕೃಷಿ ಪರಿಕರಗಳನ್ನು ಖರೀದಿಸಿದರೆ ಟ್ರೇಡ್ಸ್ ಮಾಲೀಕರು ಕಡ್ಡಾಯವಾಗಿ ರಶೀದಿನೀಡಿ ಎಂದು ತಾಕೀತು ಮಾಡಿದ್ದರಲ್ಲದೆ, ಟ್ರೇಡ್ ಪರವಾನಿಗೆ ಇಲ್ಲದೆ ಮಾರಾಟ ಮಾಡಿದರೆ ಕಾನೂನಿನ ಪ್ರಕಾರ ಪ್ರಕರಣ ದಾಖಲಿಸಲಾಗುವುದು. ಅಂತಹದು ಕಂಡು ಬಂದರೆ ಕೂಡಲೇ ಕೃಷಿ ಅಧಿಕಾರಿಗಳ ಗಮನಕ್ಕೆ ತನ್ನಿ ಎಂದು ಅವರುಮನವಿ ಮಾಡಿದರು.ಕೆ.ಆರ್. ನಗರ ಮತ್ತು ಸಾಲಿಗ್ರಾಮ ಅವಳಿ ತಾಲೂಕಿನಲ್ಲಿ ಟ್ರೇಡ್ಸ್ ಮಾಲೀಕರು ರಸಗೊಬ್ಬರ ಅಬಾವ ಸೃಷ್ಟಿಸ ಬಾರದು ಒಂದು ವೇಳೆ ಕಂಡು ಬಂದರೆ ಅಂತಹ ಟ್ರೇಡ್ಸ್ ಪರವಾನಿಗೆಯನ್ನು ರದ್ದು ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಷರಿಸಿದರು.
ರಸಗೊಬ್ಬರ ಪಡೆಯಲು ಬರುವ ರೈತರು ಆಧಾರ್ ಕಾರ್ಡ್ ನೀಡಿ ರಸಗೊಬ್ಬರ ವಿತರಿಸಬೇಕು. ರೈತರ ಜೊತೆ ಸಂಯಮದಿಂದ ವರ್ತಿಸಿ ಎಂದು ತಿಳಿಸಿದರು.
ಮುಂಗಾರು ಹಂಗಾಮಿನಲ್ಲಿ ಬೆಳೆಹಾನಿಯಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ರೈತರು ಕಡ್ಡಾಯವಾಗಿ ಪ್ರಧಾನ ಮಂತ್ರಿ ಫಸಲು ಬಿಮಾ ಯೋಜನೆ ಸೌಲಭ್ಯದ ಅನುಕೂಲ ಪಡೆಯಿರಿ ಎಂದು ಮನವಿ ಮಾಡಿದರು.
ಇದಕ್ಕೂ ಮೊದಲು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಉಪಾಧ್ಯಕ್ಷ ಅಂಕನಹಳ್ಳಿ ತಿಮ್ಮಪ್ಪ ಮಾತನಾಡಿ, ತಾಲೂಕಿನಲ್ಲಿ ನಕಲಿ ರಸಗೊಬ್ಬರ ಮಾರಾಟ ಮಾಡುವವರ ವಿರುದ್ದ ಏನು ಕ್ರಮವಹಿಸಿದ್ದಿರಿ. ಕಬ್ಬು ಬೆಳೆಗೆ ಬೆಳೆ ಮಿಮೆ ಅನುಮೋದನೆ ಮಾಡಿಸಿಕೊಡಿ, ಟ್ರೇಡ್ಸ್ ಮಾಲೀಕರಿಗೆ ರೈತರು ಬೆಳೆಯುವ ಬೆಳೆಗಳಿಗೆ ಯಾವ ರಸಗೊಬ್ಬರ ಕೊಡಬೇಕು ಎಂಬುದೇ ಗೊತ್ತಿಲ್ಲ. ಅವರೆಲ್ಲ ರಸಗೊಬ್ಬರ ಮಾರಾಟ ಮಾಡುತ್ತಿದ್ದಾರೆ. ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಿ, ಮಧ್ಯವರ್ತಿ ಹಾವಳಿ ತಪ್ಪಿಸಿ ಎಂದು ಅವರು ಒತ್ತಾಯಿಸಿದರು.
ಕೃಷಿಕಸಮಾಜ ಅಧ್ಯಕ್ಷ ದಿವಾಕರ್, ಅಣ್ಣೇಗೌಡ , ನಿರ್ದೇಶಕರಾದ ಚಂದಗಾಲು ರಾಜಲಕ್ಷ್ಮಿ, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶ್ರೀಕಾಂತ್, ಪ್ರಸನ್ನ, ರೈತ ಮುಖಂಡರಾದ ಅರ್ಜುನಹಳ್ಳಿ ರಾಮಪ್ರಸಾದ್, ಸಿ.ಕೆ. ರವೀಂದ್ರ, ನಾಗೇಶ್, ಟ್ರೇಡರ್ಸ್ ಮಾಲೀಕ ಕುಮಾರ್ ಮೊದಲಾದವರು ಇದ್ದರು.