ಶ್ರೀಮಂತಿಕೆಯಲ್ಲಿ ಬೆಳೆದ ಕೃಷಿ ಸಚಿವರಿಗೆ ಆಶಾ ಕಾರ್ಯಕರ್ತರ ಕಷ್ಟ ಗೊತ್ತಿಲ್ಲ: ಡಾ.ಕೆ.ಅನ್ನದಾನಿ

KannadaprabhaNewsNetwork |  
Published : Nov 30, 2026, 02:30 AM IST
29ಕೆಎಂಎನ್ ಡಿ17 | Kannada Prabha

ಸಾರಾಂಶ

ಈ ಹಿಂದೆ ರಾಜರು ಕಂಠಿಹಾರವನ್ನು ಅವರಿಗೆ ಖುಷಿಯಾದಾಗ ಪ್ರಜೆಗಳಿಗೆ ನೀಡುತ್ತಿದ್ದರು. ಆದರೆ, ನೀವು ಸಮಾಜ ಸೇವಕ. ಮಹಾರಾಜನಲ್ಲ. ಮಂತ್ರಿಯಾಗಿ ಆಶಾ ಕಾರ್ಯಕರ್ತೆಯರ ಕಷ್ಟ ಅರ್ಥ ಮಾಡಿಕೊಳ್ಳಬೇಕು. ಬಡವರ ಕಷ್ಟ ಗೊತ್ತಿಲ್ಲ. ಶ್ರೀಮಂತಿಕೆಯಲ್ಲೇ ಬೆಳೆದ ನೀವು, ಜನರ ಕಷ್ಟ ಅರಿತಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಆಶಾ ಕಾರ್ಯಕರ್ತೆಯರ ಕಷ್ಟ ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿಗೆ ಗೊತ್ತಿಲ್ಲ. ಶ್ರೀಮಂತಿಕೆಯಲ್ಲೇ ಬೆಳೆದ ಅವರು ಆಶಾ ಕಾರ್ಯಕರ್ತೆಯರು ಮಾಡುವ ಕೆಲಸ ಮಾಡಿದ್ದರೆ ಗೊತ್ತಿರುತ್ತಿತ್ತು ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಕಿಡಿಕಾರಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಶಾ ಕಾರ್ಯಕರ್ತೆಯರು ತಮ್ಮ ಜೀವನ ನಡೆಸಲು 15 ಸಾವಿರ ವೇತನ ನೀಡುವಂತೆ ಒತ್ತಾಯಿಸಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಅಂಥವರ ಬಗ್ಗೆ ಕಂಠಿಹಾರ ಕೊಡಬೇಕೇ ಎಂದು ಹೇಳುವ ಮೂಲಕ ಅವಹೇಳನ ಮಾಡಿದ್ದಾರೆ ಎಂದು ಟೀಕಿಸಿದರು.

ಈ ಹಿಂದೆ ರಾಜರು ಕಂಠಿಹಾರವನ್ನು ಅವರಿಗೆ ಖುಷಿಯಾದಾಗ ಪ್ರಜೆಗಳಿಗೆ ನೀಡುತ್ತಿದ್ದರು. ಆದರೆ, ನೀವು ಸಮಾಜ ಸೇವಕ. ಮಹಾರಾಜನಲ್ಲ. ಮಂತ್ರಿಯಾಗಿ ಆಶಾ ಕಾರ್ಯಕರ್ತೆಯರ ಕಷ್ಟ ಅರ್ಥ ಮಾಡಿಕೊಳ್ಳಬೇಕು. ಬಡವರ ಕಷ್ಟ ಗೊತ್ತಿಲ್ಲ. ಶ್ರೀಮಂತಿಕೆಯಲ್ಲೇ ಬೆಳೆದ ನೀವು, ಜನರ ಕಷ್ಟ ಅರಿತಿಲ್ಲ ಎಂದು ಲೇವಡಿ ಮಾಡಿದರು.

ಜನರ ಸೇವೆ ಮಾಡಲು ನಿನಗೆ ಮಂತ್ರಿ ಸ್ಥಾನ ಕೊಟ್ಟಿದ್ದಾರೆ. ಆದರೆ, ಸಮುದಾಯಕ್ಕೂ ಏನೂ ಮಾಡಿಲ್ಲ. ಕಂಠಿಹಾರ ಕೊಡಬೇಕೇ ಎಂದು ಹೇಳುವ ನಿಮಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು.

ಆರೋಗ್ಯ ಸಚಿವರಾಗಿರುವ ಯು.ಟಿ.ಖಾದರ್ ಅವರಿಗೆ ಮಾನವೀಯತೆ ಇಲ್ಲ. ಆಶಾ ಕಾರ್ಯಕರ್ತೆಯರು ಇದ್ದರೂ ನಡೆಯುತ್ತೆ, ಇಲ್ಲದಿದ್ದರೂ ನಡೆಯುತ್ತೆ ಎಂದು ಹೇಳುತ್ತೀರಾ. ಹಾಗಾದರೆ ಆಶಾ ಕಾರ್ಯಕರ್ತೆಯರನ್ನು ಕೆಲಸ ತೆಗೆಯುವ ತಾಕತ್ತು ನಿಮಗಿದೆಯೇ? ಎಂದು ಸವಾಲು ಹಾಕಿದರು.

ಶಾಸಕ ಉದಯ್ ವಿರುದ್ಧ ಕಿಡಿ:

ಶಾಸಕ ಉದಯ್ ಕೇಂದ್ರ ಸಚಿವ ಎಚ್.ಡಿ.ಕುಮಸ್ವಾಮಿ ಅವರ ಬಗ್ಗೆ ಪ್ರಶ್ನೆ ಮಾಡುವ ಮಟ್ಟದಲ್ಲಿ ನೀವಿಲ್ಲ. ಕುಮಾರಸ್ವಾಮಿ ಅವರು ಮಾಡಿರುವ ಕೆಲಸವನ್ನು ನೀವು ಈ ಜನ್ಮದಲ್ಲಿ ಮಾಡಲು ಸಾಧ್ಯವಿಲ್ಲ. ಕೆಡಿಪಿ ಸಭೆಯಲ್ಲಿ ಕುಮಾರಸ್ವಾಮಿ ಅವರು ಕೆಲಸಕ್ಕೆ ಬಾರದವರು ಎಂದು ಮಾತನಾಡುತ್ತೀರಿ. ಶ್ರೀಮಂತಿಕೆ ಮದದಿಂದ ಮಾತನಾಡುವುದು ಸರಿಯಲ್ಲ ಆಕ್ರೋಶ ವ್ಯಕ್ತಪಡಿಸಿದರು.

ಶಿಷ್ಟಾಚಾರದಂತೆ ಅಧಿಕಾರಿಗಳು ಹಾಕಿದ್ದಾರೆ. ಬರದಿದ್ದವರ ನಾಮಫಲಕವನ್ನು ಅವರೇ ತೆಗೆಯುತ್ತಾರೆ. ನೀನು ತೆಗೆಸಲು ಅಧಿಕಾರ ಕೊಟ್ಟವರು ಯಾರು?, ಫಲಕ ತೆಗೆಸಲು ನೀನು ಯಾರು ಎಂದು ಪ್ರಶ್ನಿಸಿದ ಅನ್ನದಾನಿ, ದಿಶಾ ಸಭೆಗೆ ನೀವು ಹಾಗೂ ನಿಮ್ಮ ನಾಯಕರು ಎಷ್ಟು ದಿನ ಬಂದಿದ್ದೀರಿ?. ಒಬ್ಬ ಕೇಂದ್ರ ಮಂತ್ರಿಯನ್ನು ಕೀಳಾಗಿ ಮಾತನಾಡುವುದನ್ನು ಬಿಡಬೇಕು. ಕೂಡಲೇ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಿರುವ ಮಾತನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಕ್ರಾಂತಿಕಾರಿ ನಾಯಕ ಬಸವಣ್ಣನವರ ಬಗ್ಗೆ ಪುಸ್ತಕದಲ್ಲಿ ಅವಹೇಳನ ಮಾಡಿರುವ ಲೇಖಕ ರವಿಹಂಜ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಬಸವಣ್ಣನವರ ಒಂದು ವಚನಕ್ಕೆ ನೀವು ಸಮಾನರಲ್ಲ. ವಚನ ಸಾಹಿತ್ಯ ಓದದೇ ಅವರ ಬಗ್ಗೆ ಬರೆಯಲು ಸಾಧ್ಯವಿಲ್ಲ. ಆದರೆ, ಅವರ ಬಗ್ಗೆ ಕಳ್ಳ, ಸುಳ್ಳ, ಮೋಸಗಾರ ಎಂದು ಬಿಂಬಿಸಿರುವುದನ್ನು ಖಂಡಿಸಿದರು.

ಪ್ರಚಾರದ ಗೀಳು ಬಿಟ್ಟು, ಪ್ರಸ್ತುತ ಯುವಜನತೆಗೆ ಬಸವಣ್ಣನವರ ಬಗ್ಗೆ ಕೆಟ್ಟ ಸಂದೇಶ ನೀಡುವುದನ್ನು ಬಿಡಬೇಕು. ಸರ್ಕಾರ ರವಿಹಂಜ್ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಂಡಿರುವುದು ಉತ್ತಮ ಬೆಳವಣಿಗೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಹನುಮಂತು, ಚಂದಳ್ಳಿ ಶ್ರೀಧರ್, ಎಸ್ಸಿ ವಿಭಾಗದ ಅಧ್ಯಕ್ಷ ಸಾತನೂರು ಜಯರಾಮು, ಮುಖಂಡ ಪುಟ್ಟಬುದ್ಧಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನರ ಸಮಸ್ಯೆಗೆ ಅಧಿಕಾರಿಗಳೇ ಮೂಲ ಕಾರಣಕರ್ತರು
ಉತ್ತಮ ಸಮಾಜ ನಿರ್ಮಾಣದ ಹೊಣೆ ನಮ್ಮೆಲ್ಲರ ಮೇಲಿದೆ