ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಗೊಬ್ಬರವನ್ನು ನಿಗದಿತ ಬೆಲೆಗಿಂತ ಅಧಿಕ ಬೆಲೆಗೆ ಮಾರಾಟ ಮಾಡಿದರೆ ಅಂತಹ ಮಳಗೆಗಳ ಪರವಾನಗಿ ರದ್ದು ಮಾಡಲಾಗುವುದು ಎಂದು ರಸಗೊಬ್ಬರ ಮಾರಾಟಗಾರರಿಗೆ ಎಚ್ಚರಿಕೆ ನೀಡಿದರು. ಪರಿಶೀಲನೆ ಸಮಯದಲ್ಲಿ ರಸಗೊಬ್ಬರ ಅಂಗಡಿ ಮಾರಾಟ ಮಳಿಗೆದಾರರು ರಸಗೊಬ್ಬರ ನಿಯಂತ್ರಣ ಆದೇಶ ಹಾಗೂ ಇತರೆ ನಿಯಮ ಉಲ್ಲಂಘನೆ ಮಾಡಿರುವುದು ಕಂಡು ಬಂದಲ್ಲಿ ಅಂತಹ ಮಾರಾಟದಾರಿಗೆ ನೋಟಿಸ್ ಜಾರಿ ಮಾಡಿ, ಸೂಕ್ತ ಕಾರಣ ನೀಡದಿದ್ದಲ್ಲಿ ಪರವಾನಗಿ ರದ್ದುಗೊಳಿಸಲಾಗುವುದು. ಸಕಾಲದಲ್ಲಿ ಎಲ್ಲಾ ರೈತರಿಗೆ ಕೃಷಿ ಪರಿಕರಗಳನ್ನು ಯೋಗ್ಯ ಬೆಲೆಗೆ ವಿತರಿಸಬೇಕು. ಮಳಿಗೆಯಲ್ಲಿರುವ ದಾಸ್ತಾನು ವಿವರ ಹಾಗೂ ಮಾರಾಟ ದರವನ್ನು ದರದ ಪಟ್ಟಿಯಲ್ಲಿ ಸ್ಪಷ್ಟವಾಗಿ ರೈತರಿಗೆ ಕಾಣುವಂತೆ ನಮೂದಿಸಬೇಕೆಂದು ತಿಳಿಸಿದರು. ಸಂದರ್ಭದಲ್ಲಿ ತಾಲೂಕು ಕೃಷಿ ಅಧಿಕಾರಿ ಆನಂದ ಗೌಡರ ಇದ್ದರು.