ನಾನೆಂಬ ಅಹಂಕಾರ ಬಂದ್ರೆ ವಿನಾಶ ಆರಂಭ: ಸಿ.ಟಿ. ರವಿ

KannadaprabhaNewsNetwork |  
Published : Feb 10, 2025, 01:46 AM IST
ನಾನು ಹೋಗಿ ನಾವು ಬಂದರೆ ಜಗತ್ತೆ ನಮ್ಮದಾಗುತ್ತದೆ : ಸಿ ಟಿ ರವಿ. | Kannada Prabha

ಸಾರಾಂಶ

ಜಗತ್ತಿನಲ್ಲಿ ನಾನು ಎಂದು ಬದುಕಿದವರು ನಾಲ್ಕೇ ದಿನಕ್ಕೆ ಅಂತ್ಯ ಕಾಣುತ್ತಾರೆ. ಎಲ್ಲಿ ನಾನೇ ಎಂಬ ಅಹಂ ಬಂದರೆ ಅಲ್ಲಿಂದಲೇ ವಿನಾಶ ಶುರು ಆಗುತ್ತದೆ ಎಂದು ವಿಧಾನ ಪರಿಷತ್‌ ಸದಸ್ಯ, ಬಿಜೆಪಿ ಮುಖಂಡರ ಸಿ.ಟಿ. ರವಿ ಹೇಳಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಜಗತ್ತಿನಲ್ಲಿ ನಾನು ಎಂದು ಬದುಕಿದವರು ನಾಲ್ಕೇ ದಿನಕ್ಕೆ ಅಂತ್ಯ ಕಾಣುತ್ತಾರೆ. ಎಲ್ಲಿ ನಾನೇ ಎಂಬ ಅಹಂ ಬಂದರೆ ಅಲ್ಲಿಂದಲೇ ವಿನಾಶ ಶುರು ಆಗುತ್ತದೆ ಎಂದು ವಿಧಾನ ಪರಿಷತ್‌ ಸದಸ್ಯ, ಬಿಜೆಪಿ ಮುಖಂಡರ ಸಿ.ಟಿ. ರವಿ ಹೇಳಿದರು.

ಸ್ಥಳೀಯ ಬಿಜೆಪಿ ಮುಖಂಡ ಮನೋಹರ್ ಶಿರೋಳ ಅವರ ಮನೆಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ವಿಷಯ ಬಂದರೆ ಪಕ್ಷಕ್ಕಿಂತ ಯಾರೂ ದೊಡ್ಡವರಿಲ್ಲ. ರಾಷ್ಟ್ರದ ವಿಷಯದಲ್ಲಿ ದೇಶವೇ ಮುಖ್ಯ ಹೊರತು ಪಕ್ಷ ಅಲ್ಲ, ನಾವು ಅನ್ನುವ ಭಾವ ಬೆಳೆಸಿಕೊಂಡು. ಒಟ್ಟಾಗಿದ್ದರೆ ಮಾತ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ದೇಶ ವಿಶ್ವ ನಾಯಕನಾಗಲು ಸಾಧ್ಯವಿದೆ. ದೆಹಲಿ ಪಕ್ಷಕ್ಕೆ ದೀಪ ಕೆಳಗೆ ಕತ್ತಲೆ ಎನ್ನುವ ನಾಣ್ಣುಡಿಗೆ ಅನ್ವರ್ಥ ಅನ್ನುವ ಹಾಗಿತ್ತು. ೨೭ ವರ್ಷಗಳಿಂದ ದೆಹಲಿ ಬಿಜೆಪಿ ಆಡಳಿತದಿಂದ ದೂರ ಇದ್ದು ಬೇರೆ ಬೇರೆ ಪಕ್ಷಗಳ ಆಡಳಿತಕ್ಕೆ ಒಳಪಟ್ಟಿತ್ತು. ಈ ಬಾರಿ ಚುನಾವಣೆಯಲ್ಲಿ ದೆಹಲಿ ಜನತೆ ನಮ್ಮ ಪಕ್ಷಕ್ಕೆ ಆಶೀರ್ವದಿಸಿದ್ದಾರೆ. ಇದರಿಂದ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬಂದಿದೆ. ದೇಶದ ಮತ್ತು ದೆಹಲಿ ಅಭಿವೃದ್ಧಿ ಮಾಡಲು ಸಹಾಯವಾಗಲಿದೆ. ಜನರನ್ನು ನಾವು ಪ್ರೀತಿಸಿದರೆ ಜನ ನಮ್ಮನ್ನು ಪ್ರೀತಿಸುತ್ತಾರೆ ಎನ್ನುವುದಕ್ಕೆ ದೆಹಲಿ ಫಲಿತಾಂಶದಿಂದ ಮನದಟ್ಟಾಗುತ್ತದೆ. ಜನರ ಕಷ್ಟಗಳಿಗೆ ನಾವು ಹೆಗಲು ಕೊಟ್ಟು ಅವರ ಮಧ್ಯೆ ನಾವು ಬೆಳೆಯಬೇಕು ಅಂದಾಗ ಜನ ನಮ್ಮೊಂದಿಗೆ ಕೈ ಜೋಡಿಸುತ್ತಾರೆ ಎಂದು ಹೇಳಿದರು.

ಇದಕ್ಕೂ ಮುನ್ನ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ಮಹಾಲಿಂಗೇಶ್ವರರ ಜಟೋತ್ಸವ ಮತ್ತು ರಥೋತ್ಸವದಲ್ಲಿ ಭಾಗವಹಿಸಿ ಶ್ರೀಗಳಿಂದ ಆಶೀರ್ವಾದ ಪಡೆದರು. ಈ ವೇಳೆ ಸಂಸದ ಪಿ.ಸಿ. ಗದ್ದಿಗೌಡರ, ಶಾಸಕ ಸಿದ್ದು ಸವದಿ, ಜಮಖಂಡಿ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಮುಖಂಡರಾದ ಸುಭಾಸ ಪಾಟೀಲ, ಶಾಂತಗೌಡ ಪಾಟೀಲ, ಸತೀಶ ಹಜಾರೆ, ಶೇಖರ ಅಂಗಡಿ, ಶ್ರೀಮಂತ ಹಳ್ಳಿ, ಆನಂದ ಕಂಪು, ಸುರೇಶ ಅಕ್ಕಿವಾಟ, ಈರಪ್ಪ ದಿನ್ನಿಮನಿ, ಮಹಾಂತೇಶ ಹಿಟ್ಟಿನಮಠ, ಶಿವಾನಂದ ಅಂಗಡಿ, ಶಂಕರಗೌಡ ಪಾಟೀಲ, ಚನ್ನಪ್ಪ ಪಟ್ಟಣಶೆಟ್ಟಿ, ಸಿದ್ದುಗೌಡ ಪಾಟೀಲ, ಸಂಜು ಬಾರಕೋಲ, ಶಿವಲಿಂಗ ಘಂಟಿ, ಭೀಮಶಿ ಗೌಂಡಿ, ಹನಮಂತ ಜಮಾದಾರ, ಹನಮಂತ ಬುರುಡ, ಶಿವಬಸು ಗೌಂಡಿ, ಪ್ರಶಾಂತ ಮುಕ್ಕೆನ್ನವರ, ಈರಣ್ಣ ಹಲಗತ್ತಿ, ವಿನೋದ ಉಳ್ಳಾಗಡ್ಡಿ, ವಿಷ್ಟುಗೌಡ ಪಾಟೀಲ, ಮಲ್ಲಪ್ಪ ಯರಡ್ಡಿ, ಮಹಾದೇವ ಶಿರೋಳ, ವಿರೇಶ ಶಿರೋಳ, ಉಮೇಶ ಜಾಡಗೌಡರ, ಸಿದ್ದು ಶಿರೋಳ, ಬಸು ಜಗದಾಳ, ಸಂತೋಷ ಶಿರೋಳ, ಬಸು ಮಡಿವಾಳ ಸೇರಿದಂತೆ ಅನೇಕರಿದ್ದರು.

ರಾಜ್ಯದಲ್ಲಿ ಪಕ್ಷದ ಸಂಘಟನೆ ಮುಖ್ಯವಾಗಿದೆ. ರಾಜ್ಯಾಧ್ಯಕ್ಷರ ಬದಲಾವಣೆ ವರಿಷ್ಠರಿಗೆ ಬಿಟ್ಟಿದ್ದು. ನಾನು ಸಾಮಾನ್ಯ ಕಾರ್ಯಕರ್ತನಾಗಿ, ಪಕ್ಷದ ನಿಷ್ಠಾವಂತ ಸೇವಕನಾಗಿ ದುಡಿಯುತ್ತಿದ್ದೇನೆ. ಉಳಿದೆಲ್ಲವೂ ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ. ಮುಂಬರುವ ದಿನಗಳಲ್ಲಿ ಜಗತ್ತಿಗೆ ಭಾರತ ಮಾದರಿ ರಾಷ್ಟ್ರವಾಗಿ ರೂಪುಗೊಳ್ಳಲಿದೆ.

-ಸಿ.ಟಿ. ರವಿ ವಿಧಾನ ಪರಿಷತ್ ಸದಸ್ಯ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಶಕಗಳಲ್ಲೇ ಅಪರೂಪದ ಘಟನೆ ಸ್ಪೀಕರ್‌ ಖಾದರ್‌ ಎದ್ದು ಹೋದರ್‌!
2 ಸಾವಿರ ಬೋಧಕ ಹುದ್ದೆಗಳ ನೇರ ನೇಮಕಾತಿ : ಸುಧಾಕರ್‌