ಅಜೀಜಅಹ್ಮದ ಬಳಗಾನೂರ
ಬೇಸಿಗೆ ಶಿಬಿರ ಎಂದರೆ ಸಾಂಪ್ರದಾಯಿಕ ನೃತ್ಯ, ನಾಟಕ, ಸಂಗೀತ, ಸಾಂಸ್ಕೃತಿಕ ಚಟುವಟಿಕೆ ಕಲಿಸುವುದು ಸಾಮಾನ್ಯ. ಆದರೆ, ಇಲ್ಲಿನ ಜಿಟಿಟಿಸಿ (ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ)ಯಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಉಚಿತವಾಗಿ ರೋಬೋಟಿಕ್ ಮತ್ತು ಎಐ (ಕೃತಕ ಬುದ್ಧಿಮತ್ತೆ) ಆಧಾರಿತ ಬೇಸಿಗೆ ಶಿಬಿರ ಆಯೋಜಿಸಲಾಗಿದೆ.
ಇಂದು ಪ್ರತಿಯೊಂದು ರಂಗದಲ್ಲೂ ಎಐ (ಕೃತಕ ಬುದ್ಧಿಮತ್ತೆ) ಪ್ರಮುಖ ಪಾತ್ರ ವಹಿಸಿದೆ. ಇಂದಿಗೂ ಹಲವು ಮಕ್ಕಳಲ್ಲಿ ಇದರ ಕುರಿತು ಅರಿವು ಇರುವುದಿಲ್ಲ. ಮಕ್ಕಳಿಗೆ ಎಐ ತಂತ್ರಜ್ಞಾನ ಹೇಗೆಲ್ಲ ಕೆಲಸ ಮಾಡುತ್ತದೆ. ಇದರಿಂದಾಗುವ ಪ್ರಯೋಜನಗಳು ಹಾಗೂ ಏನೆಲ್ಲ ಆವಿಷ್ಕಾರ ಮಾಡಬಹುದಾಗಿದೆ ಎಂಬುದರ ಕುರಿತು ಪ್ರೌಢಶಾಲಾ ಹಂತದಲ್ಲಿರುವ ಮಕ್ಕಳಿಗೆ ಮಾಹಿತಿ ಒದಗಿಸಲು, ಅವರಲ್ಲಿನ ಕಲಿಕಾ ಮಟ್ಟ ಸುಧಾರಣೆಗಾಗಿ ಶಿಬಿರ ಆರಂಭಿಸಲಾಗಿದೆ.10 ದಿನಗಳ ಶಿಬಿರ:
3 ತಂಡ:
ಶಾಲಾ ಶಿಕ್ಷಣದ ನಂತರ ಮಕ್ಕಳು ಹೊಸ ಕೋರ್ಸ್ ಆಯ್ಕೆ ಮಾಡುವಲ್ಲಿ ಸವಾಲು ಎದುರಿಸಬೇಕಾಗುತ್ತದೆ. ಹಾಗಾಗಿ ಮೊದಲೇ ತಾಂತ್ರಿಕ ಅರಿವು ನೀಡಿದರೆ ಮಕ್ಕಳು ಸುಲಭವಾಗಿ ತಾಂತ್ರಿಕ ಕೋರ್ಸ್ ಕಲಿಯಲು ಸಹಕಾರಿಯಾಗಲಿದೆ. ಭವಿಷ್ಯದ ತಂತ್ರಜ್ಞಾನ ಗುರಿಯಾಗಿ ಇಟ್ಟುಕೊಂಡು ಇಂತಹ ಶಿಬಿರ ಆಯೋಜಿಸುತ್ತಿದೆ. ಒಟ್ಟು ಮೂರು ಬ್ಯಾಚ್ ಮಾಡಲಾಗಿದ್ದು, 100 ಮಕ್ಕಳಿಗೆ ತರಬೇತಿ ನೀಡುವ ಉದ್ದೇಶ ಹೊಂದಿದೆ. ಮೊದಲ ಬ್ಯಾಚ್‌ನಲ್ಲಿ 25 ಮಕ್ಕಳು ತರಬೇತಿ ಪಡೆಯುತ್ತಿದ್ದಾರೆ. ಇದರೊಂದಿಗೆ ಮಕ್ಕಳಿಗೆ ಸ್ಪೋಕನ್ ಇಂಗ್ಲಿಷ್ ಸಹ ಹೇಳಿಕೊಡಲಾಗುತ್ತಿದೆ. ಇದು ಸಂಪೂರ್ಣ ಉಚಿತವಾಗಿದ್ದು, ವಿದ್ಯಾರ್ಥಿಗಳು ಇಂತಹ ಶಿಬಿರಗಳ ಪ್ರಯೋಜನ ಪಡೆದುಕೊಳ್ಳುವಂತೆ ಜಿಟಿಟಿಸಿಯ ಪ್ರಾಂಶುಪಾಲ ಮಾರುತಿ ಭಜಂತ್ರಿ "ಕನ್ನಡಪ್ರಭ "ಕ್ಕೆ ತಿಳಿಸಿದರು.ಎಐ ಕಲಿಯಬೇಕೆಂಬ ಆಸೆಯಿತ್ತು. ಈ ಶಿಬಿರದ ಕುರಿತು ಪಾಲಕರಿಗೆ ತಿಳಿಸಿದಾಗ ಖುಷಿಪಟ್ಟು ಕಳಿಸುತ್ತಿದ್ದಾರೆ. ಶಿಕ್ಷಕರು ಸಹ ಹೆಚ್ಚಿನ ಮುತುವರ್ಜಿ ವಹಿಸಿ ತರಬೇತಿ ನೀಡುತ್ತಿದ್ದಾರೆ. ಎಐ ಕಲಿಕೆಗೆ ಈ ಶಿಬಿರ ತುಂಬಾ ಸಹಕಾರಿಯಾಗಿದೆ.