-2023-24ನೇ ಸಾಲಿನ ವಾರ್ಷಿಕ ಮಹಾಸಭೆ ಉದ್ಘಾಟಿಸಿದ ಸೋಮಶೇಖರ ಗೋನಾ ನಾಯಕ
-----ಕನ್ನಡಪ್ರಭ ವಾರ್ತೆ ಯಾದಗಿರಿ
ಕಲಬುರಗಿ-ಯಾದಗಿರಿ ಜಿಲ್ಲೆಗಳಲ್ಲಿ 350ಕ್ಕೂ ಸಹಕಾರ ಸಂಘಗಳು ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುತ್ತಿವೆ. ನಾವು ಕೇಂದ್ರ ಬ್ಯಾಂಕಿನಿಂದ ಸರ್ಕಾರದ ವಿವಿಧ ಯೋಜನೆಗಳ ಲಾಭಗಳನ್ನು ಜನರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದು ಕೆವೈಡಿಸಿಸಿ ಕೇಂದ್ರ ಬ್ಯಾಂಕ್ ಅಧ್ಯಕ್ಷ ಸೋಮಶೇಖರ ಗೋನಾ ನಾಯಕ ಹೇಳಿದರು.ತಾಲೂಕಿನ ಹತ್ತಿಕುಣಿ ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಲ್ಲಿರುವ ಸಂಘದ ಆಡಳಿತ ಮಂಡಳಿಯವರು ಹಾಗೂ ಸಿಬ್ಬಂದಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಪರಿಣಾಮ ಸಂಘವು ಪ್ರತಿವರ್ಷ ಲಾಭದತ್ತ ಹೆಜ್ಜೆ ಹಾಕುತ್ತಿದೆ, ಇದರಂತೆ ಇತರ ಸಂಘಗಳು ಕೂಡ ಕೆಲಸ ಮಾಡಿದಾಗ ಮಾತ್ರ ಕೇಂದ್ರ ಬ್ಯಾಂಕ್‌ಗೆ ಆರ್ಥಿಕ ಶಕ್ತಿ ಸಿಗುತ್ತದೆ. ಅದರಂತೆ ಎಲ್ಲರಿಗೂ ಸಾಲ ಸೌಲಭ್ಯಗಳು ನೀಡಲು ಸಹಕಾರಿಯಾಗುತ್ತದೆ ಎಂದರು.
ಕೆವೈಡಿಸಿಸಿ ಬ್ಯಾಂಕ್ ನಿರ್ದೇಶಕ ಸಿದ್ರಾಮರಡ್ಡಿ ಪಾಟೀಲ್ ಕೌಳೂರ ಮಾತನಾಡಿ, ನಾವು ಪಾರದರ್ಶಕವಾಗಿ ತಾಲೂಕಿನಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇವೆ. ಬರುವ ದಿನಗಳಲ್ಲಿ ಇನ್ನು ಹೆಚ್ಚು ಕೆಲಸ ಮಾಡಿ ನಿಮಗೆ ಆರ್ಥಿಕ ಅನುಕೂಲತೆಗಳನ್ನು ಒದಗಿಸಿಕೊಡುತ್ತೇವೆ ಎಂದು ಭರವಸೆ ನೀಡಿದರು.ಸಂಘದ ನಿರ್ದೇಶಕ ಶರಣಪ್ಪಗೌಡ ಮಾಲಿ ಪಾಟೀಲ್ ಮಾತನಾಡಿದರು. ಸಂಘದ ಸಿಇಒ ಸಂಜೀವಕುಮಾರ ಪುಟಿಗಿ ಸಂಘದ ವಾರ್ಷಿಕ ವರಧಿ ವಾಚಿಸಿದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಮಹಿಪಾಲರಡ್ಡಿ ಪಾಟೀಲ್ ಮಾತನಾಡಿದರು.
ಕೆವೈಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ್, ಸಂಘದ ಉಪಾಧ್ಯಕ್ಷ ತಿಮ್ಮಣ್ಣ ಇದ್ಲಿ, ನಿರ್ದೇಶಕರಾದ ಶರಣಪ್ಪ ಸೋಮಣ್ಣೋರ, ಶರಣಪ್ಪಗೌಡ ಮಾಲಿ ಪಾಟೀಲ್, ಅಮೀನರಡ್ಡಿ ಬಿಳ್ಹಾರ, ಸಾಬರಡ್ಡಿ ತಮ್ಮಣ್ಣೋರ, ಬೋಜಣ್ಣಗೌಡ ಯಡ್ಡಳ್ಳಿ, ಬಾಯಮ್ಮ, ಹಣಮವ್ವ, ಕೆವೈಡಿಸಿಸಿ ಬ್ಯಾಂಕ್‌ನ ಮೇಲ್ವಿಚಾರಕರಾದ ಶಿವರಾಜ ಪಾಟೀಲ್, ತರಬೇತಿ ಶಿಕ್ಷಕಿಯಾದ ಸುಜಾತ, ಬಸವರಾಜಪ್ಪ ನಾಯಕ, ಭೀಮರಡ್ಡಿ ರಾಂಪೂರಳ್ಳಿ, ಶರಣಪ್ಪ ಮೋಟ್ನಳ್ಳಿ ಹೊನಗೇರಾ, ಶರಣಪ್ಪ ಶಂಕ್ರಪ್ಪನೋರ, ಚಂದ್ರಾರಡ್ಡಿ ಬಂದಳ್ಳಿ, ಚಂದ್ರಕಾಂತ ಕವಾಲದಾರ, ಖುದಾನಸಾಬ್ ಸೇರಿದಂತೆ ಇತರರಿದ್ದರು. ಸಾಬಣ್ಣ ಯಾದಗಿರಿ ಸ್ವಾಗತಿಸಿದರು. ಅಲ್ಲಾ ಬಕಾಷ್ ವಂದಿಸಿದರು.-----
23ವೈಡಿಆರ್7: ಯಾದಗಿರಿ ತಾಲೂಕಿನ ಹತ್ತಿಕುಣಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಕಚೇರಿ ಆವರಣದಲ್ಲಿ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಜರುಗಿತು.