ಕನ್ನಡಪ್ರಭ ವಾರ್ತೆ ಕುರುಗೋಡು
ಗ್ರಾಮದಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸದ ಪರಿಣಾಮ ಕಲುಷಿತ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಪರಿಣಾಮ ಸೊಳ್ಳೆಗಳ ಸಂಖ್ಯೆ ಹೆಚ್ಚುತ್ತಿದೆ. ಜನರು ಸೊಳ್ಳೆ ಕಡಿತದಿಂದ ಬರುವ ಡೆಂಘೀ, ಮಲೇರಿಯಾ, ಚಿಕೂನ್‌ಗುನ್ಯಾ ರೋಗ ಭೀತಿಯಲ್ಲಿ ಬದುಕುವಂತಾಗಿದೆ ಎಂದು ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಎ. ಪಂಪಾಪತಿ ಆರೋಪಿಸಿದರು.
ಕಲುಷಿತ ನೀರಿನ ಜತೆಗೆ ಮಳೆಯ ನೀರು ಗ್ರಾಮದ ತಗ್ಗು ಪ್ರದೇಶಗಳಲ್ಲಿ ಸಂಗ್ರಹವಾಗುತ್ತಿದೆ. ಕೂಡಲೇ ಕಲುಷಿತ ನೀರು ಸಂಗ್ರಹವಾಗದಂತೆ ಕ್ರಮಕೈಗೊಳ್ಳಬೇಕು. ಸೊಳ್ಳೆ ನಿಯಂತ್ರಣಕ್ಕೆ ಫಾಗಿಂಗ್ ಮಾಡಬೇಕು ಎಂದು ಒತ್ತಾಯಿಸಿದರು.ಮುಖಂಡರಾದ ಜಗದೀಶ್ ನೇಮಕಲ್, ಕೆ. ಬಸಣ್ಣ, ಶೇಖಣ್ಣ, ನಾಗರಾಜ, ಶಿವಪ್ಪ, ಜಿನ್ನದ ಶೇಖಣ್ಣ, ನಿಂಗಪ್ಪ, ಬಸಣ್ಣ, ಗಂಗಾಧರ, ಮಾರೇಶ್, ಗಾದಿಲಿಂಗಪ್ಪ, ವೆಂಕಟೇಶ ಗೌಡ ಮತ್ತು ಶಂಭು ಇದ್ದರು.