ಮುರಳೀಧರ್ ಶಾಂತಳ್ಳಿಕನ್ನಡಪ್ರಭವಾರ್ತೆ ಸೋಮವಾರಪೇಟೆಸೋಮವಾರಪೇಟೆ ತಾಲೂಕು, ಕಸಬಾ ಹೋಬಳಿಯ ಕ.ಸಾ.ಪ ವತಿಯಿಂದ ಸೋಮವಾರ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನ ಐಗೂರು- ಕಾಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಿರ್ಮಾಣವಾಗಿರುವ ದಿ.ಶ್ರೀಮತಿ ಕೊಡಗಿನ ಗೌರಮ್ಮ ಭವ್ಯ ವೇದಿಕೆಯಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.ಗ್ರಾಮೀಣ ಭಾಗದಲ್ಲಿ ತಾಲೂಕು ಸಮ್ಮೇಳನ ಅದ್ಧೂರಿಯಲ್ಲಿ ನಡೆಸಲು ಅನೇಕ ಕನ್ನಡ ಮನಸ್ಸುಗಳು ಹಗಲು ರಾತ್ರಿ ಶ್ರಮ ಪಟ್ಟಿದ್ದಾರೆ. ಸ್ವಾಗತ ಸಮಿತಿ ಗೌರವಾಧ್ಯಕ್ಷರಾದ ಶಾಸಕ ಡಾ.ಮಂತರ್‌ಗೌಡ, ಕ.ಸಾ.ಪ. ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್, ತಾಲೂಕು ಅಧ್ಯಕ್ಷ ಎಸ್.ಡಿ.ವಿಜೇತ್, ಹೋಬಳಿ ಅಧ್ಯಕ್ಷ ನಂಗಾರು ಕೀರ್ತಿಪ್ರಸಾದ್, ಸಮ್ಮೇಳನದ ಮಹಾ ಪೋಷಕ ಟಿ.ಪಿ.ರಮೇಶ್ ಸೇರಿದಂತೆ ಎಲ್ಲಾ ಸಮಿತಿಯವರ ಸಹಕಾರ ಹಾಗೂ ವಿಶೇಷವಾಗಿ ಹಣಕಾಸು ಸಮಿತಿ ಅಧ್ಯಕ್ಷ ರಾಯ್ ನೇತೃತ್ವದ ಹಣಕಾಸು ಸಮಿತಿ ಕಾರ್ಯದಿಂದ ಸಮ್ಮೇಳನ ಅದ್ಧೂರಿಯಾಗಿ ನಡೆಸಲು ಸಹಕಾರಿಯಾಗಿದೆ. ಸ್ವಾಗತ ಸಮಿತಿ, ಹಣಕಾಸು ಸಮಿತಿ, ಆಹಾರ ಸಮಿತಿ, ವೇದಿಕೆ ನಿರ್ಮಾಣ ಮತ್ತು ನಿರ್ವಹಣೆ ಸಮಿತಿ, ಮೆರವಣಿಗೆ ಸಮಿತಿ, ಸಾಂಸ್ಕೃತಿಕ ಸಮಿತಿ, ಪ್ರಚಾರ ಸಮಿತಿ, ದ್ವಾರ ಅಲಂಕಾರ ಸಮಿತಿ, ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ, ಸ್ಮರಣ ಸಂಚಿಕೆ ಸಮಿತಿಗಳ ಅಧ್ಯಕ್ಷ ಮತ್ತು ಪದಾಧಿಕಾರಿಗಳು ಅದ್ಧೂರಿ ಸಮ್ಮೇಳನಕ್ಕಾಗಿ ಶ್ರಮಿಸುತ್ತಿದ್ದಾರೆ. ಕನ್ನಡ ಹಬ್ಬದ ಯಶಸ್ವಿಗಾಗಿ ಹೆಚ್ಚಿನ ಕನ್ನಡಾಭಿಮಾನಿ ದಾನಿಗಳು ಧನ ಸಹಾಯ ಮಾಡಿದ್ದಾರೆ.ಫೆ.9 ರ ಬೆಳಗ್ಗೆ 6.30 ಗಂಟೆಗೆ ಶಾಲಾ ಮೈದಾನದಲ್ಲಿ ತಾಲೂಕು ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ರಾಷ್ಟ್ರಧ್ಜಜಾರೋಹಣ ನೆರವೇರಿಸಲಿದ್ದಾರೆ. ಜಿಲ್ಲಾಧ್ಯಕ್ಷ ಕೇಶವ ಕಾಮತ್ ಕನ್ನಡ ಧ್ವಜಾರೋಹಣ ಮಾಡಲಿದ್ದಾರೆ.ಗಣ್ಯರ ಹೆಸರಿನ ನೆನಪಿನ ದ್ವಾರಗಳ ಉದ್ಘಾಟನೆ ನಡೆಯಲಿದೆ. 9. 50ಕ್ಕೆ ದಿ.ಕೆ.ಟಿ.ಪೂವಯ್ಯ ಜ್ಞಾಪಕಾರ್ಥವಾಗಿ ಕೆ.ಪಿ. ಅಕ್ಕಮ್ಮ, ದಿ.ಗುಂಡಿಕುಟ್ಟಿ ಮಂಜುನಾಥಯ್ಯ ಜ್ಞಾಪಕಾರ್ಥ ರಾಜೇಂದ್ರ ಕುಮಾರ್, ದಿ.ಮಲ್ಲಚೀರ ಪಟೇಲ್ ಸೋಮಯ್ಯ, ಮಲ್ಲಪ್ಪ, ಲಿಂಗಪ್ಪ, ಬೆಳ್ಳಿಯಪ್ಪ, ಚಂಗಪ್ಪ, ಎಂ.ಬಿ.ಸುರೇಶ್, ಎಂ.ಬಿ.ದೇವರಾಜ್, ಎಂ.ಎಲ್.ಅಪ್ಪಚ್ಚು, ಎಂ.ಎಲ್.ಕೃಪಾಲ್ ಅವರು ಜ್ಞಾಪಕಾರ್ಥವಾಗಿ ಎಂ.ಬಿ.ಪೂವಯ್ಯ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ.ಸಂಪಿಗೆಕೊಲ್ಲಿ ದಿ.ಡಿ.ಎಸ್.ದೇವಯ್ಯ ಮತ್ತು ದಿ.ಪೂವಮ್ಮ ದಂಪತಿಗಳ ಜ್ಞಾಪಕಾರ್ಥ ಹನುಮಂತ ಅಂಗಡಿ, ಮೂಲೆಮಜಲು ದಿ.ಸೋಮಣ್ಣ ತಂಗಮ್ಮ ಜ್ಞಾಪಕಾರ್ಥ ಪಿ.ಕೆ. ಗಣಪತಿ, ದಿ.ನಂಗಾರು ಬೋಪಯ್ಯ ಸೀತಮ್ಮ ದಂಪತಿಗಳು ಹಾಗು ನಂಗಾರು ಗೋಪಾಲ ಮಾಸ್ಟರ್, ಚಿಣ್ಣಪ್ಪ ಅವರುಗಳ ಜ್ಞಾಪಕಾರ್ಥ ನಂಗಾರು ರಾಮಚಂದ್ರ, ದಿ.ಮುಕ್ಕಾಟಿರ ಮಾದಪ್ಪ ಹಾಗು ದಿ.ಮಚ್ಚಂಡ ನಾಚಪ್ಪ ಅವರುಗಳ ಜ್ಞಾಪಕಾರ್ಥ ಮಚ್ಚಂಡ ಅಶೋಕ್, ದಿ.ಕಾಳೇರಮ್ಮೆರ ಅಯ್ಯಣ್ಣ, ನಾಣಯ್ಯ, ಗೋಪಾಲ ಮತ್ತು ಪಾಲಾಕ್ಷ ಅವರುಗಳ ಜ್ಞಾಪಕಾರ್ಥವಾಗಿ ಮೂಡಗದ್ದೆ ಟಿ.ದಾಮೋಧರ್, ದಿ.ಸಿ.ಕೆ.ಕಾಳಪ್ಪ ಅವರ ಜ್ಞಾಪಕಾರ್ಥ ಎಂ.ಎಲ್,ನಾಗೇಶ್, ದಿ.ಮಣವಟ್ಟಿರ ಅಪ್ಪಯ್ಯ ಅಕ್ಕವ್ವ ದಂಪತಿ ಹಾಗು ಅಯ್ಯಣ್ಣ, ಮಂದಣ್ಣ, ಬೆಳ್ಳಿಯಪ್ಪ ಜ್ಞಾಪಕಾರ್ಥ ಮಣವಟ್ಟೀರ ಶಾರದ ಮಂದಣ್ಣ, ದಿ.ಎ.ಎಂ.ಬೆಳ್ಳಿಯಪ್ಪ, ದಿ.ಎ.ಕೆ.ಸುಬ್ಬಯ್ಯ ಮತ್ತು ದಿ ಈಶ್ವರಿ ಮೇದಪ್ಪ ಅವರ ಜ್ಞಾಪಕಾರ್ಥ ವಿ.ಪಿ.ಶಶಿಧರ್ ಅವರುಗಳು ನೆನಪಿನ ದ್ವಾರಗಳನ್ನು ಉದ್ಘಾಟಿಸಲಿದ್ದಾರೆ.ಸಮ್ಮೇಳನಾಧ್ಯಕ್ಷರ ಮೆರವಣಿಗೆ: 10ಗಂಟೆಗೆ ಐಗೂರು ಕಬ್ಬಿಣ ಸೇತುವೆಯಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ಇಒ ಪರಮೇಶ ಕುಮಾರ್ ಮೆರವಣಿಗೆ ಉದ್ಘಾಟಿಸಲಿದ್ದಾರೆ. ವೇದಿಕೆ ಉದ್ಘಾಟನೆ ನಂಗಾರು ಕೀರ್ತಿ ಪ್ರಸಾದ್ ನೆರವೇರಿಸಲಿದ್ದಾರೆ. 10. 30ಕ್ಕೆ ವೇದಿಕೆಯಲ್ಲಿ ಸಮ್ಮೇಳನ ಉದ್ಘಾಟನೆ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು, ಸಚಿವ ಶಿವರಾಜ್ ಎಸ್ ತಂಗಡಗಿ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ಸಂಸದ ಯದವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಮಾಜಿ ಸಚಿವರಾದ ಬಿ.ಎ.ಜೀವಿಜಯ, ಎಂ.ಪಿ.ಅಪ್ಪಚ್ಚು ರಂಜನ್ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.ಕನ್ನಡ ಕೃತಿಗಳ ಬಿಡುಗಡೆ, ಸಮ್ಮೇಳನಾಧ್ಯಕ್ಷರ ಭಾಷಣ, ವಿಚಾರಗೋಷ್ಠಿ, ಉಪನ್ಯಾಸ, ಬಹಿರಂಗ ಅಧಿವೇಶನ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಗುತ್ತದೆ. 7 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.ಸಮ್ಮೇಳನಾಧ್ಯಕ್ಷರ ಪರಿಚಯ: ಸಮ್ಮೇಳನಾಧ್ಯಕ್ಷರಾದ ಹಿರಿಯ ಸಾಹಿತಿ ಸೋಮವಾರಪೇಟೆಯ ಜಲಜಾ ಶೇಖರ್ ಅವರು ಶೈಕ್ಷಣಿಕ, ಸಾಹಿತ್ಯ ಅಲ್ಲದೆ ಸಾಮಾಜಿಕ ಮತ್ತು ಸಹಕಾರ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಶಿಕ್ಷಕರಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಸುಮಾರು 30 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿಯೂ ಇವರು ಕೆಲಸ ಮಾಡುತ್ತಿದ್ದು, ಇಲ್ಲಿಯವರೆಗೆ ಏಳು ಪುಸ್ತಕಗಳನ್ನು ಹೊರತಂದಿದ್ದು ಇವರ ಎಂಟನೆಯ ಪುಸ್ತಕವು ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಗೊಳ್ಳಲಿದೆ. ವಿಚಾರದೆಡೆಗೆ, ನೆಲಮುಗಿಲು, ಅಗ್ನಿಕುಂಡ, ಪ್ರತೀಕ್ಷ, ವಿಲೋಕನ ವೈಚಾರಿಕ ಲೇಖನಗಳು, ದೂರ ತೀರ ಯಾನ ಪ್ರವಾಸ ಕಥನ, ಕನ್ನಡಿಯ ಬಿಂಬ ಕೃತಿಗಳನ್ನು ರಚಿಸಿದ್ದಾರೆ. ಹಲವಾರು ಸಾಹಿತ್ಯ ಸಮ್ಮೇಳನಗಳಲ್ಲಿ ವಿಚಾರ ಮಂಡನೆ, ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಸನ್ಮಾನವನ್ನು ಪಡೆದುಕೊಂಡಿದ್ದಾರೆ.ನನ್ನ ಜೀವನದ ಅದ್ಭುತದ ಕ್ಷಣಕ್ಕೆ ಕಾರಣೀಭೂತವಾಗಲಿರುವ 9ನೇ ಸಮ್ಮೇಳನಕ್ಕೆ ದುಡಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಐಗೂರಿನಂತ ಪ್ರದೇಶದಲ್ಲಿ ಕನ್ನಡದ ಕಲರವವನ್ನು ಮೂಡಿಸಿದ ಎಲ್ಲಾ ಕನ್ನಡ ಮನಸುಗಳಿಗೂ ಕೂಡ ಧನ್ಯವಾದಗಳು, ಶಾಸಕರ ಹಾಗೂ ದಾನಿಗಳ ಸಹಕಾರ, ಜಿಲ್ಲಾ ಸಮಿತಿ, ತಾಲೂಕು ಸಮಿತಿ, ಹೋಬಳಿ ಸಮಿತಿಯ ಎಲ್ಲರ ಶ್ರಮದಿಂದ ಅದ್ದೂರಿಯ ಸಮ್ಮೇಳನ ನಡೆಸಲು ಸಾಧ್ಯವಾಗಿದೆ. ಎಲ್ಲರ ಶ್ರಮ ಸಾರ್ಥಕವಾಗಿದೆ.
ನಿಜವಾಗಿಯೂ ಇದೊಂದು ಐತಿಹಾಸಿಕ ಸಮ್ಮೇಳನ, ಗ್ರಾಮೀಣ ಪ್ರದೇಶದಲ್ಲಿ ಎಲ್ಲರೂ ಅತ್ಯಂತ ಹುರುಪಿನಿಂದ ಕರ್ತವ್ಯ ನಿರ್ವಹಿಸಿ, ಎಲ್ಲರ ಸಹಕಾರದೊಂದಿಗೆ, ತನು, ಮನ, ಧನ ಸಹಕಾರ ಅಲ್ಲದೇ ಹೋಬಳಿ, ತಾಲೂಕು ಘಟಕ ಹಾಗೆಯೇ ಸಮ್ಮೇಳನದ ಎಲ್ಲಾ ಸಮಿತಿಯವರ ಕಾಯಕಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಿಜವಾಗಿಯೂ ಎಲ್ಲಾ ಸಮಿತಿಗಳ ಶ್ರಮಕ್ಕೆ ಅಭಿನಂದನೆಗಳು. ನನ್ನ ಜೀವನದ ಅತ್ಯಂತ ಯಶಸ್ವಿ ಸಾಹಿತ್ಯ ಸಮ್ಮೇಳನಕ್ಕೆ ಐಗೂರು ಗ್ರಾಮ ಸಾಕ್ಷಿಯಾಗಿದೆ. ಸಮ್ಮೇಳನ ಯಶಸ್ಸಿಗೆ ಮಾಜಿ ಅಧ್ಯಕ್ಷರಾದ ರಮೇಶಣ್ಣನವರ ಸಹಕಾರ ಅಪಾರ.
ಕೇಶವ ಕಾಮತ್, ಜಿಲ್ಲಾ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್, ಕೊಡಗು