ಯಲಬುರ್ಗಾ: ಸಣ್ಣ ರೈತರು, ಮಹಿಳೆಯರು ಮತ್ತು ಸ್ವಸಹಾಯ ಗುಂಪುಗಳು ಹಾಗೂ ವಂಚಿತ ವರ್ಗಗಳ ಆರ್ಥಿಕ ಸ್ಥಿತಿ ಸುಧಾರಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಸಹಕಾರ ಭಾರತಿ ರಾಷ್ಟ್ರೀಯ ಸಂವರಕ್ಷಕ ರಮೇಶ ವೈದ್ಯೆಜೀ ಹೇಳಿದರು.
ಸ್ವಾವಲಂಬಿ ಸಹಕಾರಿ ಸಂಸ್ಥೆ ನಿರ್ಮಿಸುವುದು ಮತ್ತು ತರಬೇತಿ ಶಿಬಿರ, ಉಪನ್ಯಾಸ ಸರಣಿಗಳು, ಸಮಾವೇಶಗಳು ಮತ್ತು ಜಿಲ್ಲಾ ಮಟ್ಟದ ಅಭ್ಯಾಸ ವರ್ಗಗಳು ಸೇರಿವೆ. ಸಹಕಾರಿ ರಾಜಕೀಯ ಹಸ್ತಕ್ಷೇಪದಿಂದ ದೂರವಿಟ್ಟು, ಸ್ವಾವಲಂಬಿಯಾಗಿ ಬೆಳೆಸಲು ಮತ್ತು ಆರ್ಥಿಕ ಬೆಳವಣಿಗೆ ಗುರಿ ಹೊಂದಲಾಗಿದೆ ಎಂದರು.
ಪಂಚಪರಿವರ್ತನೆ ಬಗ್ಗೆ ಸಂಘದ ಸ್ವಯಂ ಸೇವಕ ವಸಂತ ಪೂಜಾರ ಮಾದನೂರ, ಸಾಲ ವಸೂಲಾತಿಯಲ್ಲಿ ಕಾನೂನಿನ ಬೆಂಬಲ ಹಾಗೂ ವೃತ್ತಿಪರ ಪರಿಣಿತಿಯ ಕೊರತೆ ಬಗ್ಗೆ ಹೊಸಪೇಟೆಯ ನಿವೃತ್ತ ಸಹಾಯಕ ನಿಬಂಧಕ ಲಿಯಾಖತ್ ಅಲಿ ಹೊಸಮನಿ ಉಪನ್ಯಾಸ ನೀಡಿದರು.ಯೋಗಶಿಕ್ಷಕ ಲೋಕೇಶ ಲಮಾಣಿ ನಿರೂಪಿಸಿದರು. ಈ ಸಂದರ್ಭ ಸಹಕಾರ ಭಾರತಿ ತಾಲೂಕಾಧ್ಯಕ್ಷ ವೀರಭದ್ರಯ್ಯ ಹಿರೇಮಠ, ಸಹಕಾರ ಭಾರತಿ ಜಿಲ್ಲಾಧ್ಯಕ್ಷ ರಮೇಶ ಕವಲೂರು, ಜನನಿ ಗ್ರುಪ್ ಆಫ್ ಇನ್ಸ್ಟಿಟ್ಯೂಟ್‌ನ ಅಧ್ಯಕ್ಷ ರಂಗನಾಥ ವಲ್ಮಕೊಂಡಿ, ಫಕೀರಪ್ಪ ತಳವಾರ್, ಶರಣಪ್ಪ ಹ್ಯಾಟಿ, ನಾಗರಾಜ ಅಕ್ಕಿ, ಆನಂದ ಅಕ್ಕಿ, ನೀಲನಗೌಡ ತಲಕುವಗೇರಿ, ಶಶಿಧರ ಶೆಟ್ಟರ್, ಸುರೇಶಗೌಡ ಶಿವನಗೌಡ್ರ, ಶಿವಪ್ಪ ವಾದಿ, ಮಾಂತೇಶ ಬನ್ನಪ್ಪಗೌಡ್ರ, ಪ್ರಸನ್ನ ದೇಸಾಯಿ, ಅನ್ನದಾನೇಶ ಸೇರಿದಂತೆ ಮತ್ತಿತರರು ಇದ್ದರು.
ಸಹಕಾರ ಭಾರತಿ ಜಿಲ್ಲಾ ಹಾಲು ಪ್ರಕೋಷ್ಠದ ಮಂಡಳಿಯ ಅಧ್ಯಕ್ಷರಾಗಿ ಶಿವಪ್ಪ ವಾದಿ, ಉಪಾಧ್ಯಕ್ಷರಾಗಿ ಸುಭಾಷ್‌ಚಂದ್ರ ತಿಪ್ಪಶೆಟ್ಟಿ, ನಾಗರಾಜ ಚಳಗೇರಿ, ಪ್ರಧಾನ ಕಾರ್ಯದರ್ಶಿಯಾಗಿ ನಾಗರಾಜ ಚುಕ್ಕನಕಲ್, ಸಂಘಟನಾ ಕಾರ್ಯದರ್ಶಿ ಶರಣು ಹಾವೇರಿ, ಕಾರ್ಯದರ್ಶಿ ಪ್ರತಾಪ್ ಸಿಂಗ್ ರಾಮ್ ಸಿಂಗ್, ಖಜಾಂಜಿ ರಂಗನಾಥ ವಲ್ಮಕೊಂಡಿ ಹಾಗೂ ಸದಸ್ಯರಾಗಿ ಅಯ್ಯಪ್ಪ ಹೂಗಾರ, ರುದ್ರಪ್ಪ ನಡುವಿನಮನಿ, ಹನುಮಪ್ಪ ಪೂಜಾರ, ಭರತೇಶ ಖಂಡದ, ಮಳಿಂಗರಾಯ ಕಂಬಳಿ, ಶರಣಪ್ಪ ದಾಸನಾಳ, ಬಸವರಾಜ ಅಂಗಡಿ, ನಾಗಪ್ಪ ತಲ್ಲೂರ, ಶಂಕ್ರಪ್ಪ ಚಳಗೇರಿ, ಸಂಕಣ್ಣ ಹುಲಸಗೇರಿ ಆಯ್ಕೆಯಾದರು.