ರಾಜ್ಯದ ಕೆಲ ನಗರಗಳಲ್ಲಿ ಕಲುಷಿತ ಗಾಳಿ ಆತಂಕ

KannadaprabhaNewsNetwork |  
Published : May 06, 2026, 02:00 AM IST
ಗಾಳಿಯ ಗುಣಮಟ್ಟ | Kannada Prabha

ಸಾರಾಂಶ

ರಾಜ್ಯದ ಉಡುಪಿ ಹಾಗೂ ಮಂಗಳೂರು ನಗರಗಳಲ್ಲಿ ಕಳಪೆ ಗುಣಮಟ್ಟ ದಾಖಲಾಗಿದೆ. ಇದರಿಂದಾಗಿ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಬರುವ ಸಂಭವವಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ಹಲವು ದಿನಗಳಿಂದ ಗಾಳಿ ಗುಣಮಟ್ಟದಲ್ಲಿ ಏರಿಳಿತ ಕಂಡುಬಂದಿದ್ದು, ರಾಜ್ಯದ ಉಡುಪಿ ಹಾಗೂ ಮಂಗಳೂರು ನಗರಗಳಲ್ಲಿ ಕಳಪೆ ಗುಣಮಟ್ಟ ದಾಖಲಾಗಿದೆ. ಇದರಿಂದಾಗಿ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಬರುವ ಸಂಭವವಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಕೆಲ ದಿನಗಳಿಂದ ಬೆಂಗಳೂರಿನ ಗಾಳಿ ಗುಣಮಟ್ಟ ಕಳಪೆ ಹಂತ ತಲುಪಿತ್ತು. ಆದರೆ, ಮಂಗಳವಾರ ಸುಧಾರಣೆ ಕಂಡು ಅಪಾಯದಿಂದ ಪಾರಾಗಿದೆ. ದೇಶದ ಉಳಿದ ಯಾವುದೇ ಮೆಟ್ರೋ ಸಿಟಿಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ ಉತ್ತಮ ಮಟ್ಟದಲ್ಲಿದೆ. ಇದರಿಂದಾಗಿ ನಗರದ ಜನರಲ್ಲಿ ಉಂಟಾಗಿದ್ದ ಆತಂಕ ದೂರವಾಗಿದೆ.

ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಹುಬ್ಬಳ್ಳಿ ಏರ್ ಕ್ವಾಲಿಟಿಯಲ್ಲಿ ಸುಧಾರಣೆ ಕಂಡು ಬಂದಿದೆ. ಸದ್ಯ ಹುಬ್ಬಳ್ಳಿ ಏರ್ ಕ್ವಾಲಿಟಿ 52ಕ್ಕೆ ತಲುಪಿದೆ. ಆರೋಗ್ಯಕ್ಕೆ ಮಾರಕವಾಗಿರುವ ಬೆಂಗಳೂರಿನ AQI ಅಂಕೆಗಳಲ್ಲಿ ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಸಣ್ಣ ಏರುಪೇರು ಉಂಟಾಗಿತ್ತು. ಡಬ್ಲ್ಯುಎಚ್‌ಒ ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.ರಾಜ್ಯದ ಪ್ರಮುಖ ನಗರದಲ್ಲಿ ಗಾಳಿಯ ಗುಣಮಟ್ಟ (ಎಕ್ಯುಐ)ಬೆಂಗಳೂರು – 98

ಮಂಗಳೂರು-124

ಮೈಸೂರು – 84

ಬೆಳಗಾವಿ – 42

ಕಲಬುರಗಿ-90

ಶಿವಮೊಗ್ಗ –94

ಬಳ್ಳಾರಿ – 96

ಹುಬ್ಬಳ್ಳಿ- 58

ಉಡುಪಿ –102

ವಿಜಯಪುರ – 99ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

ಉತ್ತಮ- 0-50

ಮಧ್ಯಮ – 50-100

ಕಳಪೆ – 100-150

ಅನಾರೋಗ್ಯಕರ – 150-200

ಗಂಭೀರ – 200 – 300

ಅಪಾಯಕಾರಿ – 300 -500

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

17 ದಿನದಲ್ಲಿ 600 ಟನ್‌ ಮಾವು ಮಾರಾಟ
ಇಂದು ಅನಕೃ, ಪುನೀತ್‌ ಸಭಾಂಗಣ ಲೋಕಾರ್ಪಣೆ