- ಜಿಲ್ಲಾ ಕಲ್ಯಾಣ ಮಂಟಪ ಸ್ವಚ್ಛತಾ ಕಾರ್ಮಿಕರ ಸಂಘಟನಾ ಸಭೆ
- - -ದಾವಣಗೆರೆ: ಕಲ್ಯಾಣ ಮಂಟಪ ಕೆಲಸಗಾರರಿಗೆ ಮಾಸಿಕ ಪಿಂಚಣಿ ಜಾರಿಗೆ ತರಬೇಕೆಂದು ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಆವರಗೆರೆ ಚಂದ್ರು ಸರ್ಕಾರಕ್ಕೆ ಆಗ್ರಹಪಡಿಸಿದರು.
ದಾವಣಗೆರೆ ಅಶೋಕ ರಸ್ತೆಯ ಪಂಪಾಪತಿ ಭವನದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಕಲ್ಯಾಣ ಮಂಟಪ, ಸಮುದಾಯ ಭವನಗಳ ಸ್ವಚ್ಛತಾ ಕಾರ್ಮಿಕರ ಸಂಘಟನಾ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಕಲ್ಯಾಣ ಮಂಟಪ ಕೆಲಸಗಾರರಿಗೆ ಸರ್ಕಾರ ಕಲ್ಯಾಣ ಮಂಡಳಿಯನ್ನು ಜಾರಿಗೆ ತರುವುದರ ಮೂಲಕ ಅವರಿಗೆ ಆರೋಗ್ಯ ವೆಚ್ಚ, ಅವರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಕಾರ್ಮಿಕರಿಗೆ ಮರಣ ಪರಿಹಾರ, ಅಪಘಾತ ಪರಿಹಾರ, ಮದುವೆಗೆ ಸಹಾಯಧನ ಅವರ ಇಬ್ಬರು ಮಕ್ಕಳಿಗೆ ಮದುವೆ ಸಹಾಯಧನ, ಕೆಲಸಗಾರರಿಗೆ ಪೆನ್ಷನ್ ಮತ್ತಿತರೆ ಸೌಲತ್ತುಗಳನ್ನು ಜಾರಿಗೆ ತರಬೇಕೆಂದು ಸಭೆ ಮೂಲಕ ಒತ್ತಾಯಿಸಿದರು.ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಕಲ್ಯಾಣ ಮಂಟಪ ಮತ್ತು ಸಮುದಾಯ ಭವನಗಳಿವೆ. 2 ಸಾವಿರಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಎಐಟಿಯುಸಿ ನೇತೃತ್ವದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕಲ್ಯಾಣ ಮಂಟಪ ಮತ್ತು ಸಮುದಾಯ ಭವನಗಳ ಕಾರ್ಮಿಕರನ್ನು ಸಂಘಟಿಸಿ ಕಲ್ಯಾಣ ಮಂಡಳಿ ಜಾರಿಗೆ ತರುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದರು.
ಹಿರಿಯ ಕಾರ್ಮಿಕ ಮುಖಂಡರಾದ ಜಿ.ಯಲ್ಲಪ್ಪ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಎಸ್ ಶೇಖರ ನಾಯಕ್, ಎ.ತಿಪ್ಪೇಶ್, ರಂಗಸ್ವಾಮಿ, ಎಚ್.ಎಸ್. ಚಂದ್ರು, ನರೇಗಾ ರಂಗನಾಥ್, ಕೆರನಹಳ್ಳಿ ರಾಜು, ಕಲ್ಯಾಣ ಮಂಟಪಗಳ ಕಾರ್ಮಿಕರಾದ ಬೀರಪ್ಪ, ಶಿವಣ್ಣ, ಮಂಜುಳಾ, ಹೊನ್ನಮ್ಮ, ರಾಧಮ್ಮ, ವನಜಾಕ್ಷಮ್ಮ ಇನ್ನೂ ಮುಂತಾದವರು ಭಾಗವಹಿಸಿದ್ದರು.- - -
-14ಕೆಡಿವಿಜಿ34:ದಾವಣಗೆರೆಯಲ್ಲಿ ನಡೆದ ಕಲ್ಯಾಣ ಮಂಟಪ ಸಮುದಾಯ ಭವನಗಳ ಸ್ವಚ್ಛತಾ ಕಾರ್ಮಿಕರ ಸಂಘಟನಾ ಸಭೆಯಲ್ಲಿ ಆವರಗೆರೆ ಚಂದ್ರು ಮಾತನಾಡಿದರು.