ಜೋಯಿಡಾ ಸಾಹಿತ್ಯ ಸಮ್ಮೇಳನಕ್ಕೆ ಅಜನಾಳ ಭೀಮಾಶಂಕರ ಸರ್ವಾಧ್ಯಕ್ಷ

KannadaprabhaNewsNetwork |  
Published : Feb 23, 2024, 01:48 AM IST
. | Kannada Prabha

ಸಾರಾಂಶ

ಮಾರ್ಚ್ ೨ರಂದು ನಡೆಯಲಿರುವ ಜೋಯಿಡಾ ತಾಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಜ್ಯೋತಿ ರಾಮ‌ಫುಲೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ, ಹಿರಿಯ ರಂಗಭೂಮಿ ಕಲಾವಿದ, ಸಾಹಿತಿ, ಕಲಾವಿದರಾದ ಶ್ರೀ ಅಜನಾಳ ಭೀಮಾಶಂಕರ ಅವರನ್ನು ಆಯ್ಕೆ ಮಾಡಲಾಗಿದೆ.

ಜೋಯಿಡಾ:

ಮಾರ್ಚ್ ೨ರಂದು ನಡೆಯಲಿರುವ ಜೋಯಿಡಾ ತಾಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಜ್ಯೋತಿ ರಾಮ‌ಫುಲೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ, ಹಿರಿಯ ರಂಗಭೂಮಿ ಕಲಾವಿದ, ಸಾಹಿತಿ, ಕಲಾವಿದರಾದ ಶ್ರೀ ಅಜನಾಳ ಭೀಮಾಶಂಕರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ಪಾಂಡುರಂಗ ಪಟಗಾರ ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಮಿತಿ ಸದಸ್ಯರ ಒಮ್ಮತದ ಅಭಿಪ್ರಾಯದಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಅವರ ಸಮ್ಮತಿಯೊಂದಿಗೆ ಈ ಆಯ್ಕೆ ಮಾಡಲಾಗಿದೆ. ನಿವೃತ್ತ ಶಿಕ್ಷಕ ಶ್ರೀ ಅಜನಾಳ ಭೀಮಾಶಂಕರ (62) ಅವರು ಸಾಹಿತ್ಯ, ರಂಗಕರ್ಮಿ, ನಾಟಕಕಾರರು. ಇವರಿಗೆ ಜೋಯಿಡಾ ತಾಲೂಕಿನ ರಾಮನಗರದಲ್ಲಿ ನಡೆಯುವ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷತೆಯ ಗೌರವ ನೀಡಲಾಗಿದೆ ಎಂದು ತಿಳಿಸಿದ್ದಾರೆ.ಸಭೆಯಲ್ಲಿ ಕಸಾಪ ಅಧ್ಯಕ್ಷ ಪಾಂಡುರಂಗ ಪಟಗಾರ, ಕಾರ್ಯದರ್ಶಿಗಳಾದ ಭಾಸ್ಕರ ಗಾಂವಕರ, ಪ್ರೇಮಾನಂದ ವೆಳಿಪ, ಖಜಾಂಚಿ ತುಳಸಿದಾಸ ವೆಳಿಪ, ನಿಕಟಪೂರ್ವ ಅಧ್ಯಕ್ಷ ಸುಭಾಷ್ ಗಾವಡಾ, ಸದಸ್ಯ ರಾದ ಸುಭಾಷ್ ವೆಳಿಪ್, ಮುತ್ತಪ್ಪ ವಟಾರ್, ಜನಾರ್ಧನ ಹೆಗಡೆ, ಮಾದೇವ ಹಳದನಕರ, ಚಂದ್ರಕಲಾ ಗಾವಡಾ, ಮಲ್ಲಾರ ರಾಣೆ ಇದ್ದರು.ಭೀಮಶಂಕರ್ ಅಜನಾಳರ ಪರಿಚಯ

ಮೂಲತಃ ಜೋಯಿಡಾ ತಾಲೂಕಿನ ಮಾವಳಂಗಿ ಅವರಾಗಿರುವ ಶ್ರೀ ಭೀಮಾಶಂಕರ್ ಅಜನಾಳ್ ಅವರು ಕವನ ಸಂಕಲನ, ನಾಟಕಗಳನ್ನು ಬರೆದಿದ್ದಲ್ಲದೆ ನಟನೆ ಕೂಡ ಮಾಡಿದ್ದಾರೆ. ಸಾಹಿತ್ಯ ಸಂಕಲನಗಳಾದ ಭಾವ ಬೆಳದಿಂಗಳು ಕವನ ಸಂಕಲನ, ಸೋಲಿಲ್ಲದ ಸಾಧ್ವಿ, ಬಾಡದ ಹೂವುಗಳು, ಯಾರ ಹೊಣೆ ನಾಟಕ ಕೃತಿ ರಚಿಸಿದ ಇವರು ಸ್ವತಃ ನಾಟಕ ಅಭಿನಯಕಾರರು, ನಟನಾಕಾರರು ಆಗಿರುತ್ತಾರೆ. ಜನಮೆಚ್ಚಿದ ಶಿಕ್ಷಕ, ಜ್ಯೋತಿ ರಾಮ‌ಫುಲೆ ಇದು ಇವರ ಶೈಕ್ಷಣಿಕ ಸೇವೆಗೆ ಸಿಕ್ಕ ಪ್ರಶಸ್ತಿ ಆಗಿದೆ. ಇವರು ಎಂಎ, ಬಿ.ಇಡಿ ಪದವಿ ಪಡೆದ ಇವರು ಪ್ರಾಥಮಿಕ ಶಿಕ್ಷಕರಾಗಿ, ಪ್ರೌಢಶಾಲೆ ಮುಖ್ಯೋಪಾಧ್ಯಾಯರಾಗಿ, ಶಿಕ್ಷಣ ಸಂಯೋಜಕರಾಗಿ, ಸಮೂಹ ಸಂಪನ್ಮೂಲ ವ್ಯಕ್ತಿಗಳಾಗಿ ಜೋಯಿಡಾ ತಾಲೂಕಿನಲ್ಲಿ ಕಳೆದ 34 ವರ್ಷಗಳಿಂದ ಸೇವೆ ಸಲ್ಲಿಸಿರುತ್ತಾರೆ.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌