ಕನ್ನಡಪ್ರಭ ವಾರ್ತೆ ಬೆಂಗಳೂರು
ಬಾಕ್ಸ್..ಪುತ್ರನನ್ನೇ ದಿಟ್ಟಿಸುತ್ತಾ ಕುಳಿತ ಸಿದ್ದು:ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸಲು ಬರುತ್ತಿದ್ದಂತೆ ಪಕ್ಕದಲ್ಲಿ ಕುಳಿತಿದ್ದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಬು ಬಕ್ರು ಅವರಿಗೆ ಸಿದ್ದರಾಮಯ್ಯ ತಮ್ಮ ಪುತ್ರನತ್ತ ಕೈ ಮಾಡಿ ತೋರಿಸಿದರು. ಪುತ್ರ ಪ್ರಮಾಣವಚನ ಸ್ವೀಕರಿಸುವುದನ್ನು ತದೇಕಚಿತ್ತದಿಂದ ಸಿದ್ದರಾಮಯ್ಯ ನೋಡುತ್ತಾ ಕುಳಿತಿದ್ದರು. ಬಳಿಕ ಯತೀಂದ್ರ ತಂದೆಯ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದಾಗ ಭುಜ ತಟ್ಟಿ ಸಿದ್ದರಾಮಯ್ಯ ಪುತ್ರನಿಗೆ ಹಾರೈಸಿದರು.
ಬಳಿಕ ಪ್ರಮಾಣವಚನ ಸ್ವೀಕರಿಸಿದ ಬೈರತಿ ಸುರೇಶ್ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಇಬ್ಬರಿಗೂ ಕಾಲಿಗೆ ನಮಸ್ಕರಿಸಿದರು.ಬಾಕ್ಸ್...ಬಾಕ್ಸ್..ಇನ್ಫಿ ಮೂರ್ತಿ, ಸುಧಾಮೂರ್ತಿ ಕಾಲಿಗೆರಗಿದ ಸಿಎಂ:ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರತಿಜ್ಞಾವಿಧಿ ಸ್ವೀಕರಿಸುವ ಮೊದಲು ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ, ರಾಜ್ಯಸಭೆ ಸದಸ್ಯೆ ಹಾಗೂ ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾ ಮೂರ್ತಿ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಇದೇ ವೇಳೆ ಮೋಹನ್‌ದಾಸ್ ಪೈ ಸೇರಿದಂತೆ ವಿವಿಧ ಉದ್ಯಮಿಗಳ ಕೈ ಕುಲುಕಿದರು.ಇದಕ್ಕೂ ಮೊದಲು ವಿವಿಧ ಸ್ವಾಮೀಜಿಗಳ ಜತೆಗೆ ಎಸ್.ಎಂ. ಕೃಷ್ಣ ಪತ್ನಿ ಪ್ರೇಮಾ ಕೃಷ್ಣ ಸೇರಿದಂತೆ ಹಿರಿಯರ ಕಾಲಿಗೆ ಡಿ.ಕೆ. ಶಿವಕುಮಾರ್ ನಮಸ್ಕರಿಸಿದರು.ಬಾಕ್ಸ್...
ಸಿದ್ದು ಆಶೀರ್ವಾದ ಪಡೆದ ಡಿಕೆಶಿ ಪತ್ನಿ ಹಾಗೂ ಮಕ್ಕಳು:ಡಿ.ಕೆ. ಶಿವಕುಮಾರ್ ಪತ್ನಿ ಉಷಾ, ಪುತ್ರ ಹಾಗೂ ಪುತ್ರಿ ಐಶ್ವರ್ಯಾ ಸಿದ್ಧಾರ್ಥ್ ಹೆಗ್ಡೆ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.ಬಾಕ್ಸ್..ಕಾರ್ಯಕ್ರಮದ ನಡುವೆಯೇ ಎದ್ದು ಹೋದ ಜಮೀರ್, ನಸೀರ್:ಮೊದಲ ಹಂತದ ಸಂಪುಟದಲ್ಲಿ ಸಚಿವ ಸ್ಥಾನ ವಂಚಿತರಾಗಿರುವ ಜಮೀರ್ ಅಹ್ಮದ್ ಖಾನ್ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಂಡಿರುವ ನಸೀರ್ ಅಹ್ಮದ್ ಅವರು ಕಾರ್ಯಕ್ರಮದ ನಡುವೆಯೇ ಎದ್ದು ಹೋದರು.
ಯು.ಟಿ. ಖಾದರ್ ಪ್ರತಿಜ್ಞಾವಿಧಿ ಪೂರ್ಣಗೊಂಡು ಈಶ್ವರಖಂಡ್ರೆ ಅವರ ಪ್ರಮಾಣವಚನ ನಡೆಯುತ್ತಿದ್ದಾಗ ಎದ್ದು ಹೊರ ನಡೆದರು.ಬಾಕ್ಸ್...ಲೋಕಭವನದಲ್ಲಿ ತಿರುಪತಿ ಲಡ್ಡು ವಿತರಣೆ:
ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಲೋಕಭವನದಲ್ಲಿ ಅಭಿಮಾನಿಗಳು ತಿರುಪತಿ ಲಡ್ಡುಗಳನ್ನು ವಿತರಣೆ ಮಾಡಿದರು.ಬಾಕ್ಸ್...
ಪ್ರಮಾಣವಚನಕ್ಕೆ ತಾರೆಯರ ಮೆರುಗು:ನಟ ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ಮಾಜಿ ಸಂಸದೆ, ನಟಿ ರಮ್ಯಾ, ನಟ ಡಾಲಿ ಧನಂಜಯ್, ನಟಿಯರಾದ ರಾಗಿಣಿ ದ್ವಿವೇದಿ, ನಾಗತಿಹಳ್ಳಿ ಚಂದ್ರಶೇಖರ್ ಸೇರಿದಂತೆ ನಟರು, ನಿರ್ದೇಶಕರು, ಸಂಗೀತ ನಿರ್ದೇಶಕರು, ಕ್ರಿಕೆಟಿಗ ಅನಿಲ್ ಕುಂಬ್ಳೆ ಸೇರಿದಂತೆ ಹಲವರು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಬಾಕ್ಸ್..
ನಮ್ಮ ಹಸ್ಪೆಂಡ್‌ಗೆ ಆಲ್ ದಿ ಬೆಸ್ಟ್:ನಮ್ಮ ಹಸ್ಬೆಂಡ್‌ಗೆ ಆಲ್ ದಿ ಬೆಸ್ಟ್ ಹೇಳ್ತಿದಿನಿ. ಕರ್ನಾಟಕ ಜನತೆಗೆ ಒಳ್ಳೆಯ ಕೆಲಸ ಮಾಡಲಿ. ರಾಜ್ಯವನ್ನು ಇನ್ನೂ ಹೆಚ್ಚಿನ ಅಭಿವೃದ್ಧಿಯತ್ತ ಕೊಂಡೊಯ್ಯಲಿ ಅವರಿಗೆ ಶುಭವಾಗಲಿ ಎಂದು ಡಿ.ಕೆ. ಶಿವಕುಮಾರ್ ಅವರ ಪತ್ನಿ ಉಷಾ ಹೇಳಿದರು.ಬಾಕ್ಸ್..
ಜವಾಬ್ದಾರಿ ಹೆಚ್ಚಾಗಿದೆ: ಡಿಕೆ ಪುತ್ರಿನಮ್ಮ ತಂದೆ ಮುಖ್ಯಮಂತ್ರಿ ಆಗಿರುವುದು ಖುಷಿಯಾಗಿದೆ. ಇದು ಕನಸು ಎನ್ನುವುದಕ್ಕಿಂತ ದೊಡ್ಡ ಜವಾಬ್ದಾರಿ. ಎಲ್ಲರಂತೆ ನಾನು ಸಹ ಅವರ ಆಡಳಿತ ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದೇನೆ ಎಂದು ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯಾ ಹೆಳಿದರು.