ಕನ್ನಡಪ್ರಭ ವಾರ್ತೆ ವಿಜಯಪುರ
ಈ ಕೆಫೆಯಲ್ಲಿ ತಮ್ಮ ಕೈರುಚಿ ತೋರಿಸಲು ಎನ್ಆರ್‌ಎನ್ಎಂ ಯೋಜನೆಯ ಸ್ವ-ಸಹಾಯ ಸಂಘದ ಮಹಿಳೆಯರು ತುದಿಗಾಲ ಮೇಲೆ ನಿಂತಿದ್ದಾರೆ. ಗ್ರಾಮೀಣ ಭಾಗದ ಸ್ವ-ಸಹಾಯ ಸಂಘದ ಮಹಿಳೆಯರು ತಯಾರಿಸಿರುವ ತಿಂಡಿ- ತಿನಿಸುಗಳು, ಗೃಹಬಳಕೆ ಸಾಮಗ್ರಿಗಳನ್ನು ಸಹ ಈ ಕೆಫೆಯಲ್ಲಿ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತದೆ ಹಾಗೂ ಪ್ರತಿ ದಿನ ಅತ್ಯಂತ ರುಚಿಕಟ್ಟಾದ ಉಪಹಾರ, ಊಟ ಮತ್ತು ಸಂಜೆ ತಿನಿಸುಗಳನ್ನು ತಯಾರಿಸಿ ಜನರಿಗೆ ಬಡಿಸಲಾಗುತ್ತದೆ. ಈ ಅಕ್ಕ ಕೆಫೆ ಕ್ಯಾಂಟಿನ್‌ನ್ನು ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಸಂಸದ ರಮೇಶ ಜಿಗಜಿಣಗಿ, ವಿಜಯಪುರ ಜಿಲ್ಲೆಯ ಸ್ಫೂರ್ತಿ ಮಹಿಳಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷೆ ಶಶಿಕಲಾ ಗುರು ತಳಸದಾರ(ಸ್ಥಾವರಮಠ) ಸೇರಿದಂತೆ ಜಿಲ್ಲೆಯ ಅಧಿಕಾರಿಗಳು, ಇಲಾಖೆಯ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.